ಕಿಡಿಗೇಡಿಗಳ ಕ್ರೌರ್ಯಕ್ಕೆ ಮನೆ ಧ್ವಂಸ: ಬೀದಿಗೆ ಬಿದ್ದ ಮಹಿಳೆ, ಆರೋಪಿಗಳು ಪರಾರಿ
ಕಳೆದ 45 ವರ್ಷಗಳಿಂದ ಮಲ್ಲೇಶ್ವರಂ 18 ನೇ ಕ್ರಾಸ್ನಲ್ಲಿರುವ ಮನೆಯಲ್ಲಿ ಕುಟುಂಬ ಸಮೇತ ಜಯಲಕ್ಷ್ಮಿ ಎಂಬುವವರು ವಾಸವಾಗಿದ್ದರು. ಆದರೆ ಸೋಮವಾರ ನಸುಕಿನ ಜಾವ ನಾಲ್ಕು ಗಂಟೆಗೆ ಜಯಲಕ್ಷ್ಮಿ ಮನೆಗೆ ನುಗ್ಗಿದ್ದ 40 ರಿಂದ 45 ಜನರ ರೌಡಿಗಳ ಗ್ಯಾಂಗ್ ಇಡೀ ಮನೆಯನ್ನು ಧ್ವಂಸ ಮಾಡಿರುವಂತಹ ಘಟನೆ ನಡೆದಿದೆ.
ಬೆಂಗಳೂರು, ಅಕ್ಟೋಬರ್ 09: ಆ ಮಹಿಳೆ (Woman) ಸುಖ ನಿದ್ದೆಯಲ್ಲಿದ್ದರು. ಮುಂಜಾನೆಯ ಸುಮಧುರ ಕನಸುಗಳು ಕಚಗುಳಿ ಇಡುವ ಸಮಯ ಅದು. ಇದೇ ಸಮಯದಲ್ಲಿ ದೊಡ್ಡ ಗ್ಯಾಂಗ್ವೊಂದು ಏಕಾಏಕಿ ಆ ಮನೆಗೆ ನುಗ್ಗಿದೆ. ಕೆಲವೇ ಕೆಲ ಸೆಕಂಡ್ಗಳಲ್ಲಿ ಇಡೀ ಮನೆನೇ ಧ್ವಂಸಗೊಂಡಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕುಟುಂಬದ ಬದುಕು ಬೀದಿಗೆ ಬಿದ್ದರೆ, ಕಿಡಿಗೇಡಿಗಳ ಕರಾಳತೆಗೆ ನಡುಗಿದವರ ಕಥೆ ಕಣ್ಣೀರು ತರಿಸುವಂತ್ತಿದೆ.
ಕಿಡಿಗೇಡಿಗಳ ಕ್ರೌರ್ಯಕ್ಕೆ ಮನೆ ಧ್ವಂಸ: ಬೀದಿಗೆ ಬಿದ್ದ ಮಹಿಳೆ
ಕಳೆದ 45 ವರ್ಷಗಳಿಂದ ಮಲ್ಲೇಶ್ವರಂ 18 ನೇ ಕ್ರಾಸ್ನಲ್ಲಿರುವ ಮನೆಯಲ್ಲಿ ಕುಟುಂಬ ಸಮೇತ ಜಯಲಕ್ಷ್ಮಿ ಎಂಬುವವರು ವಾಸವಾಗಿದ್ದರು. ಆದರೆ ಸೋಮವಾರ ನಸುಕಿನ ಜಾವ ನಾಲ್ಕು ಗಂಟೆಗೆ ಜಯಲಕ್ಷ್ಮಿ ಮನೆಗೆ ನುಗ್ಗಿದ್ದ 40 ರಿಂದ 45 ಜನರ ರೌಡಿಗಳ ಗ್ಯಾಂಗ್ ಇಡೀ ಮನೆಯನ್ನು ಧ್ವಂಸ ಮಾಡಿಬಿಟ್ಟಿದೆ. ಮಹಿಳೆ, ಮಕ್ಕಳು ಅಂತಲೂ ನೋಡದೇ ಎಲ್ಲರನ್ನ ಮನೆಯಿಂದ ಎಳೆದು ಹೊರ ಹಾಕಿ ಒಂದೀಡಿ ಮನೆಯನ್ನೇ ಪೀಸ್ ಪೀಸ್ ಮಾಡಿದ್ದಾರೆಂದು ಜಯಲಕ್ಷ್ಮಿ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಬೈಕ್ ವ್ಹೀಲಿಂಗ್ ತಡೆದಿದ್ದಕ್ಕೆ ಕಾನ್ಸ್ಟೇಬಲ್ ಮೇಲೆ ಪುಂಡರಿಂದ ಹಲ್ಲೆ: ರೌಡಿಶೀಟರ್ ಸೇರಿ ಮೂವರು ವಶಕ್ಕೆ
ಅಸಲಿಗೆ ಈ ಜಯಲಕ್ಷ್ಮಿಯ ಗಂಡ, ಗಣೇಶ್ ಮಹಲ್ ಅವರು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ಗಣೇಶ್ ಮಹಲ್ ಮಾಲೀಕ ಜಯಲಕ್ಷ್ಮಿ ಅವರಿಗೆ ಈ ಜಾಗ ಕೊಟ್ಟಿದ್ರಂತೆ. ಜಯಲಕ್ಷ್ಮಿ ಮತ್ತು ಆಕೆ ಗಂಡ ಹೇಗೋ ಕಷ್ಟ ಬಿದ್ದು ಈ ಜಾಗದಲ್ಲಿ ಒಂದು ಸೂರು ಮಾಡ್ಕೊಂಡಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಜಾಗ ಕೊಟ್ಟಿದ್ದ ಹೋಟೆಲ್ ಮಾಲೀಕ ತೀರಿಕೊಂಡಿದ್ದ. ಮತ್ತೊಂದೆಡೆ ಜಯಲಕ್ಷ್ಮಿ ಗಂಡ ಕೂಡ ಸಾವನ್ನಪ್ಪಿದ್ದರು. ಈ ವಿಚಾರವನ್ನ ಅರಿತಿದ್ದ ಜೈ ಕಿಶನ್, ಪ್ರತಾಪ್, ಚಿನ್ನಬಾಬು ಗ್ಯಾಂಗ್ ಜಾಗದ ಮೇಲೆ ಕಣ್ಣಿಟ್ಟಿದ್ರಂತೆ. 25 ಲಕ್ಷ ರೂ. ಕೊಡ್ತೀವಿ ಜಾಗ ಬಿಟ್ಟುಕೊಡಿ ಅಂತ ರೌಡಿಗಳು ಹೇಳಿದರೂ ಜಯಲಕ್ಷ್ಮಿ ರೌಡಿಗಳ ಬಲೆಗೆ ಬಿದ್ದಿದ್ದರಲಿಲ್ಲ. ಕೊನೆಗೆ ಬೆದರಿಕೆ ಕೂಡ ಹಾಕಿದ್ದರು ಅಂತ ಮಹಿಳೆ ನೀಡಿದ ದೂರಿನಡಿ ದಾಖಲಾಗಿದ್ದ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ಲವ್ವಿಡವ್ವಿ ಇಟ್ಟುಕೊಂಡಿದ್ದ ಮಹಿಳೆಯಿಂದಲೇ ಕೊಲೆಯಾದ ಯುವಕ: ಪ್ರಕರಣ ಬೇಧಿಸಿದ್ದೇ ರೋಚಕ
ಮನೆ ಧ್ವಂಸ ಮಾಡಿದ್ದು ಮಾತ್ರವಲ್ಲ, ರೌಡಿ ಗ್ಯಾಂಗ್ ಮನೆಯಲ್ಲಿದ್ದ ಚಿನ್ನದ ಸರ, ಓಲೆ, ಉಂಗುರ ಎಲ್ಲಾ ಚಿನ್ನವನ್ನ ಕೂಡ ದೋಚಿಕೊಂಡು ಹೋಗಿರುವ ವಿಚಾರ ಕೂಡ ಎಫ್ಐಆರ್ನಲ್ಲಿದೆ. ಘಟನೆ ಸಂಬಂಧ ಮಲ್ಲೇಶ್ವಂರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:39 pm, Wed, 9 October 24