ಸಿದ್ದರಾಮಯ್ಯ ಸಿಗರೇಟ್ ಬಿಟ್ಟಿದ್ಹೇಗೆ? ಯಾಕೆ? ಇಲ್ಲಿದೆ ನೋಡಿ ಸಿಎಂ ಆರೋಗ್ಯದ ಗುಟ್ಟು

|

Updated on: Jun 06, 2024 | 10:38 PM

ನಾನೂ ಮೊದಲು ಸಿಗರೇಟ್ ಸೇದುತ್ತಿದ್ದೆ. ಒಮ್ಮೆ ವಿದೇಶಕ್ಕೆ ಹೋದಾಗ ಸ್ನೇಹಿತರು ಸಿಗರೇಟ್ ಪ್ಯಾಕ್ ತಂದುಬಿಟ್ಟಿದ್ದರು. ನಾನು ಕಡಿಮೆ ಅವಧಿಯಲ್ಲಿ ಹೆಚ್ಚು ಸಿಗರೇಟ್ ಸೇದಿಬಿಟ್ಟೆ. ಅವತ್ತೇ ನನಗೆ ಮನವರಿಕೆ ಆಯ್ತು. ಮನವರಿಕೆ ಆಗಿದ್ದು ಆಗಸ್ಟ್ 27 ನೇ ತಾರೀಕಿನಂದು. ಅದೇ ದಿನ ಸಿಗರೇಟ್ ಸೇದುವುದನ್ನು ಸಂಪೂರ್ಣ ನಿಲ್ಲಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಸಿಗರೇಟ್ ಬಿಟ್ಟಿದ್ಹೇಗೆ? ಯಾಕೆ? ಇಲ್ಲಿದೆ ನೋಡಿ ಸಿಎಂ ಆರೋಗ್ಯದ ಗುಟ್ಟು
ಸಿದ್ದರಾಮಯ್ಯ ಸಿಗರೇಟ್ ಬಿಟ್ಟಿದ್ಹೇಗೆ? ಯಾಕೆ? ಇಲ್ಲಿದೆ ನೋಡಿ ಸಿಎಂ ಆರೋಗ್ಯದ ಗುಟ್ಟು
Follow us on

ಬೆಂಗಳೂರು, ಜೂನ್​ 06: ನಾನೂ ಮೊದಲು ಸಿಗರೇಟ್ (Cigarette) ಸೇದುತ್ತಿದ್ದೆ. ಮನವರಿಕೆ ಆದ ದಿನ ಸಿಗರೇಟ್ ಸೇದುವುದನ್ನು ಸಂಪೂರ್ಣ ನಿಲ್ಲಿಸಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ನಗರದ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಆರೋಗ್ಯದ ಗುಟ್ಟು ಬಿಚ್ಚಿಟ್ಟಿದ್ದಾರೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, ನಾನೂ ಮೊದಲು ಸಿಗರೇಟ್ ಸೇದುತ್ತಿದ್ದೆ. ಒಮ್ಮೆ ವಿದೇಶಕ್ಕೆ ಹೋದಾಗ ಸ್ನೇಹಿತರು ಸಿಗರೇಟ್ ಪ್ಯಾಕ್ ತಂದುಬಿಟ್ಟಿದ್ದರು. ನಾನು ಕಡಿಮೆ ಅವಧಿಯಲ್ಲಿ ಹೆಚ್ಚು ಸಿಗರೇಟ್ ಸೇದಿಬಿಟ್ಟೆ. ಅವತ್ತೇ ನನಗೆ ಮನವರಿಕೆ ಆಯ್ತು. ಮನವರಿಕೆ ಆಗಿದ್ದು ಆಗಸ್ಟ್ 27 ನೇ ತಾರೀಕಿನಂದು. ಅದೇ ದಿನ ಸಿಗರೇಟ್ ಸೇದುವುದನ್ನು ಸಂಪೂರ್ಣ ನಿಲ್ಲಿಸಿದೆ.

ತುಂಬಾ ವಯಸ್ಸಾದ ಮೇಲೆ ಬರುವ ಆರೋಗ್ಯ ಸಮಸ್ಯೆಗಳು ಬರದಂತೆ ವಯಸ್ಸಿದ್ದಾಗಲೇ ಪ್ರಯತ್ನಿಸಿ. ಸಹವಾಸ ದೋಷದಿಂದಲೂ ಅನಾರೋಗ್ಯ ತರುವ ಚಟಗಳು ಅಂಟಿಕೊಳ್ಳುತ್ತವೆ. ಆದರೆ ಸದಾ ಎಚ್ಚರದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು ಎಂದಿದ್ದಾರೆ.

ಸಿದ್ದರಾಮಯ್ಯ ಟ್ವೀಟ್​ 

ಪ್ರತಿ ಒಬ್ಬರು ಆರೋಗ್ಯ ಕಾಪಾಡಿಕೊಳ್ಳಬೇಕು. ಇವತ್ತಿನ ಜೀವನ ಶೈಲಿ ಹಾಗೂ ಆರೋಗ್ಯ ಪದ್ಧತಿ ಸರಿಯಾಗಿ ಇಟ್ಟುಕೊಳ್ಳಬೇಕಾಗಿದೆ. ಇಡೀ ದೇಶದ ಜನರ ಆರೋಗ್ಯ ಚೆನ್ನಾಗಿರಬೇಕು. ಅದಕ್ಕೆ ನಾವು ಆರೋಗ್ಯವೆ ಭಾಗ್ಯ ಅಂತ ಕರೆಯುತ್ತೇವೆ ಬೇರೆ ಎಲ್ಲಾ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯ ಇರಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಸ್​ಟಿ ನಿಗಮದ ಹಗರಣ: ಡಿಕೆಶಿ ಸಮ್ಮುಖದಲ್ಲೇ ಸಿಎಂಗೆ ರಾಜೀನಾಮೆ ಪತ್ರ ನೀಡಿದ ನಾಗೇಂದ್ರ

ನಾವು ಎಷ್ಟು ವರ್ಷ ಆರೋಗ್ಯವಾಗಿ ಬದುಕ್ತಿವಿ ಅನ್ನೋದು ಮುಖ್ಯ. ಕ್ಯಾಲಿಟಿ ಲೈಫ್ ಎಷ್ಟರ ಮಟ್ಟಿಗೆ ಇದೇ ಅನ್ನೋದು ಮುಖ್ಯ. ಅದಕ್ಕೆ ಪ್ರತಿ ಒಬ್ಬರು ಜೀವನದಲ್ಲಿ ತಪ್ಪದೇ ವ್ಯಾಯಾಮ ಮಾಡೋದನ್ನ ಜೀವನದಲ್ಲಿ ಅಳವಡಿಸಿಕೊಳ್ಳಿ. ದೈಹಿಕ ಹಾಗೂ ಮಾನಸಿಕವಾಗಿ ಚಟುವಟಿಕೆಯಿಂದ ಇರೋದು ಮುಖ್ಯ ಎಂದರು.

ನಾನು ಎಲೆಕ್ಷನ್ ಇರೋವಾಗ ನಿಲ್ಲಿಸಿದ್ದೇನೆ ಎಲೆಕ್ಷನ್ ಇಲ್ಲದೆ ಇರೋವಾಗ ವಾಕ್ ಪ್ರಾಣಾಯಮ ಮಾಡುತ್ತಿದ್ದೆ. ಎಲೆಕ್ಷನ್ ಇದ್ದಾಗ ಆಗಲ್ಲ ಈಗ ಮತ್ತೆ ಪ್ರಾರಂಭ ಮಾಡಬೇಕು. ಕೊರೊನಾ ಬರುವುದಕ್ಕೂ ಮುಂಚೆ ಸುಗರ್ ಟ್ಯಾಬ್ಲೆಟ್ ತಗೋಳುತ್ತಿದೆ. ಕೊರೊನಾ ಬಂದ ಮೇಲೆ ಇನ್ಸುಲಿನ್ ತಗೋಳ್ತಿದ್ದೇ ಆವಾಗ ಹೊಟ್ಟೆ ಬಂತು ಹೇಗೋ ನಿರ್ವಹಿಸುತ್ತಿದ್ದೇನೆ. ಅದಕ್ಕೆ ಪ್ರತಿ ವರ್ಷ ತಪಾಸಣೆ ಮಾಡಿಸಿಕೊಳ್ಳಬೇಕು. ತಪಾಸಣೆ ಮಾಡಿಸಿಕೊಂಡ್ರೆ ಏನು ತೊಂದರೆ ಇದೇ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಲೋಕಸಭಾ, ಶಿಕ್ಷಕರ ಕ್ಷೇತ್ರದ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಲಿ:- ಜಿಟಿ ದೇವೇಗೌಡ

ನಾನು ಚಿಕ್ಕ ಹುಡುಗ ಇದ್ದಾಗ ಎಲ್ಲರೂ ಎಷ್ಟು ಆರೋಗ್ಯವಾಗಿರ್ತಿದ್ರು. ಕುತ್ಕೊಂಡು ತಿನ್ನೋರೆ ಇರ್ತಿರಲಿಲ್ಲ. ಯಾವಾಗಲು ಕೆಲಸ ಮಾಡುತ್ತಿದ್ದರು. ಆರ್ಗಾನಿಕ್ ಫುಡ್ ತಿಂತಿದ್ರು. ಹೆಚ್ಚಾಗಿ ಕಾಳು ಮತ್ತು ಉಪ್ಸಾರು ಮಾಡ್ತಿದ್ರು. ರೊಟ್ಟಿ ಪಲ್ಯ ಮಾಡ್ಕೋಂಡು ತಿಂತಿದ್ರು ಹೀಗಾಗಿ ಆರೋಗ್ಯವಾಗಿ, ಫಿಸಿಕಲ್ ಆಕ್ಟಿವಿಟಿ ಇರ್ತಿತ್ತು.

ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದ ಸಿದ್ಧರಾಮಯ್ಯ

ಹಾಲು ಮತ್ತು ಮೀನು ಒಟ್ಟಿಗೆ ತಗೋಬಾರದು ಅಂತ ಹೇಳಿದ್ರು ನನಗೆ ಗೊತ್ತಿರಲಿಲ್ಲ. ನಾವು ದಿನ ನಿತ್ಯ ಮೀನು ತಿನ್ನಲ್ಲ. ಈತರ ತಪಾಸಣೆ ಶಿಬಿರ ಮಾಡೋದ್ರಿಂದ ಆರೋಗ್ಯದಿಂದ ಹೇಗೆ ಬದುಕಬೇಕು ಅನ್ನೋದು ಗೊತ್ತಾಗುತ್ತೆ. ರೋಗ ಬರದೆ ಇರೋ ತರ ನೋಡ್ಕೋಳೋದು ಮುಖ್ಯ. ಪ್ರಿವೆನ್ಶನ್ ಇಸ್ ಬೆಟರ್ ದೆನ್​ ಕ್ಯೂರ್ ಅನ್ನೋದನ್ನ ಪ್ರತಿ ಒಬ್ಬರು ಮಾಡಬೇಕು. ದುಷ್ಚಟಗಳನ್ನ ಮಾಡೋಕೆ ಹೋಗಬಾರದು ಅಡಿಕ್ಟ್ ಆದರೆ ಕಷ್ಟ ಬಿಡೋಕೆ ಆಗಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.