ಕುಂದಾಪುರ: ಕುಂದಾಪುರದಲ್ಲಿ ಸಾವರ್ಕರ್ ಬೆಂಬಲಿಸಿ ಮಾನವ ಸರಪಳಿ ರಚನೆ ಮಾಡುವ ಮೂಲಕ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಕುಂದಾಪುರದ ಹಿಂದೂಜಾಗರಣ ವೇದಿಕೆ ಮತ್ತು ಹಿಂದು ಯುವವಾಹಿನಿ ನೇತೃತ್ವ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಕುಂದಾಪುರದ ಎವಿಬಿವಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ ರಚನೆ ಮಾಡಲಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಸಾವರ್ಕರ್ ವಿವಾದದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ್ದಾರೆ. ನಾನು ಸಾವರ್ಕರ್ ನಾವೂ ಸಾವರ್ಕರ್ ಅಭಿಯಾನ ಅಭಿಯಾನದ ಮೂಲಕ ಹಿಂದೂ ಸಂಘಟನೆಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ ಪಿ ಶ್ರೀಕಾಂತ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಂಗಳೂರಿನಲ್ಲಿ ಸಾವರ್ಕರ್ ಬ್ಯಾನರ್ ಜೊತೆಗೆ ಗೋಡ್ಸೆ ಫೋಟೋ
ಮಂಗಳೂರಲ್ಲಿ ಸಾವರ್ಕರ್ ಬ್ಯಾನರ್ ಜೊತೆಗೆ ಗೋಡ್ಸೆ ಫೋಟೋ ಹಾಕಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಶುಭಕೋರುವ ನೆಪದಲ್ಲಿ ಗೋಡ್ಸೆಗೆ ಗೌರವ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ನಾಥುರಾಮ್ ಗೋಡ್ಸೆ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಹಿಂದೂ ಮಹಾಸಭಾ ಹೆಸರಿನಲ್ಲಿ ಹಲವೆಡೆ ಫ್ಲೆಕ್ಸ್ ಅಳವಡಿಕೆ ಮಾಲಡಾಗಿದ್ದು, ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೆಸರಿನಲ್ಲಿ ಈ ಫ್ಲೆಕ್ಸ್ ಅಳವಡಿಸಲಾಗಿದೆ. ರಾಜಕೀಯ ಹಿಂದುತ್ವಗೊಳಿಸಿ, ಹಿಂದುಗಳನ್ನ ಸೈನಿಕೀಕರಣಗೊಳಿಸಿ ಎಂದು ಬ್ಯಾನರ್ನಲ್ಲಿ ಬರಹ ಹಾಕಿ ಸಾವರ್ಕರ್ ಜೊತೆಗೆ ನಾಥುರಾಮ್ ಗೋಡ್ಸೆ ಫೋಟೋ ಸಹ ಬಳಕೆ ಮಾಡಿದ್ದಾರೆ.
Published On - 12:45 pm, Thu, 18 August 22