ಕಳ್ಳತನದ ಆರೋಪಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಅಮೃತಹಳ್ಳಿ ಪೊಲೀಸರು, ಮಾನವ ಹಕ್ಕುಗಳ ಆಯೋಗ ದಾಳಿ

| Updated By: ಆಯೇಷಾ ಬಾನು

Updated on: Feb 10, 2024 | 2:28 PM

ಮಾನವ ಹಕ್ಕುಗಳ ಆಯೋಗ ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು ಕಳ್ಳತನದ ಆರೋಪಿಯನ್ನು ಅಕ್ರಮ ಬಂಧನದಲ್ಲಿಟ್ಟಿರುವುದು ಪತ್ತೆಯಾಗಿದೆ. ಈಗ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಸದ್ಯ ಅಧಿಕಾರಿಗಳು ಇನ್ಸ್​ಪೆಕ್ಟರ್​, ಸಿಬ್ಬಂದಿ ವಿಚಾರಣೆ ಮಾಡುತ್ತಿದ್ದಾರೆ.

ಕಳ್ಳತನದ ಆರೋಪಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಅಮೃತಹಳ್ಳಿ ಪೊಲೀಸರು, ಮಾನವ ಹಕ್ಕುಗಳ ಆಯೋಗ ದಾಳಿ
ಅಮೃತಹಳ್ಳಿ ಪೊಲೀಸ್ ಠಾಣೆ
Follow us on

ಬೆಂಗಳೂರು, ಫೆ.10: ಅಮೃತಹಳ್ಳಿ ಪೊಲೀಸ್ ಠಾಣೆ (Amruthahalli Police Station) ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿದ್ದು ಪೊಲೀಸರು ಆರೋಪಿಯೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ವಿಚಾರ ಬಯಲಾಗಿದೆ. 2023ರಲ್ಲಿ ಕಳ್ಳತನ ಕೇಸ್ ದಾಖಲಾಗಿದ್ದ ಆರೋಪಿಯನ್ನು ಬಂಧಿಸಿ ಮನೆಯವರಿಗೂ ಮಾಹಿತಿ ನೀಡದೆ ಫೆ.1ರಿಂದ 10 ದಿನಗಳ‌ ಕಾಲ ಅಕ್ರಮ ಬಂಧನದಲ್ಲಿಡಲಾಗಿತ್ತು. ಸದ್ಯ ಆರೋಪಿಯ ಕುಟುಂಬಸ್ಥರ ದೂರಿನ ಮೇರೆಗೆ ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿದ್ದು ಪೊಲೀಸರ ಕಳ್ಳಾಟ ಬಯಲಾಗಿದೆ.

ಮಾನವ ಹಕ್ಕುಗಳ ಆಯೋಗದ ಡಿವೈಎಸ್​ಪಿ ಸುಧೀರ್ ಹೆಗ್ಡೆ ನೇತೃತ್ವದ ತಂಡ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಅಮೃತಹಳ್ಳಿ ಠಾಣೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಮೃತಹಳ್ಳಿ ಪೊಲೀಸರು, ಆರೋಪಿಯನ್ನ ಅಕ್ರಮವಾಗಿ ಬಂಧನದಲ್ಲಿಟ್ಟಿರುವುದು ಪತ್ತೆಯಾಗಿದೆ. ಯಾಸಿನ್ ಮೆಹಬೂಬ್ ಖಾನ್​ ಎಂಬ ಆರೋಪಿಯನ್ನು ಫೆ.1ರಿಂದ 10 ದಿನಗಳ‌ ಕಾಲ ಅಕ್ರಮ ಬಂಧನದಲ್ಲಿಡಲಾಗಿತ್ತು. 2023ರಲ್ಲಿ ಯಾಸಿನ್​ ಖಾನ್ ವಿರುದ್ಧ ಕಳ್ಳತನ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾದ ಬಳಿಕ ಆರೋಪಿ ಯಾಸಿನ್ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿ ಬಂಧನಕ್ಕೆ ಕೋರ್ಟ್ ವಾರೆಂಟ್ ಜಾರಿ ಮಾಡಿತ್ತು. ವಾರೆಂಟ್ ಆಧರಿಸಿ ಪೊಲೀಸರು ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿದ್ದರು.

ಇನ್ನು ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿದ ವೇಳೆ ಠಾಣೆಯ ದಾಖಲಾತಿಯಲ್ಲಿ ಆರೋಪಿ ಯಾಸಿನ್ ಖಾನ್ ವಶಕ್ಕೆ ಪಡೆದಿದ್ದ ಬಗ್ಗೆ ದಾಖಲಾತಿಯಲ್ಲಿ ಉಲ್ಲೇಖಿಸಿರಲಿಲ್ಲ. ಆರೋಪಿಯ ಕುಟುಂಬಸ್ಥರಿಗೂ ವಶಕ್ಕೆ ಪಡೆದಿದ್ದ ಬಗ್ಗೆ ತಿಳಿಸಿರಲಿಲ್ಲ. ಹೀಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ಆರೋಪಿಯ ಕುಟುಂಬ ದೂರು ನೀಡಿತ್ತು. ದೂರು ಆಧರಿಸಿ ಆಯೋಗದ DySP ನೇತೃತ್ವದ ತಂಡ ಠಾಣೆ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಆರೋಪಿಯನ್ನು ಅಕ್ರಮವಾಗಿ ಠಾಣೆಯಲ್ಲಿಟ್ಟಿದ್ದು ಬಯಲಾಗಿದೆ. ಸದ್ಯ ಈಗ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಸದ್ಯ ಅಧಿಕಾರಿಗಳು ಇನ್ಸ್​ಪೆಕ್ಟರ್​, ಸಿಬ್ಬಂದಿ ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಗುಂಡಿಕ್ಕಿ ಕೊಲ್ಲಿ ಹೇಳಿಕೆ: ಪೊಲೀಸರ ನೋಟಿಸಿಗೂ ಜಗ್ಗದೆ ಮತ್ತೆ ಗುಡುಗಿದ ಈಶ್ವರಪ್ಪ

ಅಮೃತಹಳ್ಳಿ ಠಾಣೆಯ ಕ್ರೈಂ ಪೊಲೀಸರು ಆರೋಪಿಯನ್ನ ಫೆ.1ರಂದು NBW ಸಂಬಂಧ ಕರೆತಂದಿದ್ರು. ಆದ್ರೆ ಆರೋಪಿ ಬಂಧನದ ಬಗ್ಗೆ ರಿಜಿಸ್ಟರ್ ನಲ್ಲೂ ದಾಖಲಿಸಿಲ್ಲ‌ ಮತ್ತು ಕೋರ್ಟ್ ಗೂ ಹಾಜರು ಪಡಿಸಿಲ್ಲ. ಈ ವೇಳೆ ಕೇಸ್ ಸಂಬಂಧ ಅಡ್ವೋಕೇಟ್ ಮಜೀದ್ ಠಾಣೆಗೆ ಭೇಟಿ ಕೊಟ್ಟಿದ್ರು. ಆರೋಪಿ ತನ್ನ ಬಂಧನದ ಬಗ್ಗೆ ಸೂಕ್ಷವಾಗಿ ಅಡ್ವೋಕೇಟ್ ಗೆ ತಿಳಿಸಿದ್ರು. ಬಳಿಕ ಅಡ್ವೋಕೇಟ್ ಮಜೀದ್ ಅಸ್ಲಾಂ ಫ್ಯಾಮಿಲಿ ಮತ್ತು ಮಾನವ ಹಕ್ಕುಗಳಿಗೆ ಮಾಹಿತಿ‌ ನೀಡಿದ್ರು. ಬಳಿಕ ಮಾನವ ಹಕ್ಕುಗಳು ಆಯೋಗದ DySP ಸುದೀರ್ ಹೆಗ್ಡೆ ನೇತೃತ್ವದಲ್ಲಿ ಅಧಿಕಾರಿಗಳ ದಾಳಿ ನಡೆದಿದೆ.

ಇನ್ನು ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸರು ಟಿವಿ9 ಜೊತೆ ಮಾತನಾಡಿದ್ದು, ನಾವು ಆರೋಪಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿರಲಿಲ್ಲ. ಫೆ.9ರಂದು ಕೋರ್ಟ್​ಗೆ ಹಾಜರುಪಡಿಸಿದ್ದೆವು. ಮಾನವ ಹಕ್ಕುಗಳ ಆಯೋಗ ನಮ್ಮ ಮೇಲೆ ದಾಳಿ ನಡೆಸಿರಲಿಲ್ಲ. ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಅಷ್ಟೇ ಎಂದು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:46 am, Sat, 10 February 24