ಬೇರೊಬ್ಬಳ ಮೋಜಿಗೆ ಬಿದ್ದು ಪತ್ನಿಯನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಕೆರೆಗೆ ಎಸೆದ ಪತಿ

ಮದುವೆಯಾಗಿದ್ದರೂ ಅಕ್ರಮ ಸಂಬಂಧ ಬೆಳೆಸಿ ಕೊಲೆ ಮಾಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ನಡೆಯುತ್ತಿದೆ. ಇದೀಗ, ಬೇರೊಬ್ಬಳ ಮೋಜಿಗೆ ಬಿದ್ದಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಎಸೆದ ಘಟನೆ ದಾವಣಗೆರೆ ತಾಲ್ಲೂಕಿನ ಕೊಡಗನೂರು ಗ್ರಾಮದ ಬಳಿ ನಡೆದಿದೆ.

ಬೇರೊಬ್ಬಳ ಮೋಜಿಗೆ ಬಿದ್ದು ಪತ್ನಿಯನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಕೆರೆಗೆ ಎಸೆದ ಪತಿ
ಬೇರೊಬ್ಬಳ ಮೋಜಿಗೆ ಬಿದ್ದು ಪತ್ನಿಯನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ಮೃತದೇಹ ಕಟ್ಟಿ ಕೆರೆಗೆ ಎಸೆದ ಪತಿ (ಸಾಂದರ್ಭಿಕ ಚಿತ್ರ)
Edited By:

Updated on: Jan 25, 2024 | 2:47 PM

ದಾವಣಗೆರೆ, ಜ.25: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನೇ ಪತಿ ಕೊಲೆ ಮಾಡಿ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಕೆರೆಗೆ ಎಸೆದ ಘಟನೆ ದಾವಣಗೆರೆ (Davanagere) ತಾಲೂಕಿನ ಕೊಡಗನೂರು ಗ್ರಾಮದ ಬಳಿ ನಡೆದಿದೆ. ಕಾವ್ಯ (21) ಕೊಲೆಯಾದ ಮಹಿಳೆ‌ಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ (24) ಕೊಲೆ ಮಾಡಿದ ಪತಿಯಾಗಿದ್ದಾನೆ.

ಐದು ವರ್ಷಗಳ ಹಿಂದೆ ಸಾಸಲುಹಳ್ಳ ಗ್ರಾಮದ ಕಾವ್ಯ ಎಂಬಾಕೆಯನ್ನು ಸಚಿನ್ ಮದುವೆಯಾಗಿದ್ದ. ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದ ಚೈತ್ರ (21) ಎನ್ನುವ ಯುವತಿ ಜೊತೆ ಸಂಬಂಧ ಇಟ್ಟುಕೊಂಡು ಕಾವ್ಯಾಳನ್ನು ಮದುವೆಯಾಗಿದ್ದನು.

ಇದನ್ನೂ ಓದಿ: ಮಣ್ಣಿನ ಮೋಹಕ್ಕೆ ಹೊಲದಲ್ಲಿ ಕೊಲೆಯಾದ ಮಹಿಳೆ, ಡೇಟ್ ಫಿಕ್ಸ್ ಮಾಡಿ‌ ಹೊಡಿತೀನಿ ಎಂದಿದ್ದ ಹಂತಕ! ಯಾಕೆ?

ಈ ಅಕ್ರಮ ಸಂಬಂಧಕ್ಕೆ ಕಾವ್ಯಾ ಅಡ್ಡಿಯಾಗುತ್ತಿದ್ದಾಳೆ ಎಂದು ಸಚಿನ್ ಮತ್ತು ಚೈತ್ರಾ ಸೇರಿಕೊಂಡು ಕಾವ್ಯಾಳನ್ನು ಕೊಲೆ ಮಾಡಿದ್ದಾರೆ. ಬಳಿಕ ಗೋಣಿ ಚೀಲದಲ್ಲಿ ಕಾವ್ಯಾಳ ಮೃತದೇಹವನ್ನು ತುಂಬಿಸಿ ಕೊಡಗನೂರು ಕೆರೆಗೆ ಹಾಕಿದ್ದರು. 10 ದಿನಗಳ ಹಿಂದೆ ನಡೆದ ಈ ಕೊಲೆ ಪ್ರಕರಣ ಇದೀಗ ಬಯಲಿಗೆ ಬಂದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ