AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವೇ ದಿನದಲ್ಲಿ ಮತ್ತೆ ಕರೆಂಟ್ ಬಿಲ್ ಜಾಸ್ತಿ: ಭವಿಷ್ಯ ನುಡಿದ ಮಾಜಿ ಸಚಿವ ಹೆಚ್​ಡಿ ರೇವಣ್ಣ

ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್​ಡಿ ರೇವಣ್ಣ, ಇನ್ನು ಕೆಲವೇ ದಿನದಲ್ಲಿ ಮತ್ತೆ ಕರೆಂಟ್ ಬಿಲ್ ಜಾಸ್ತಿ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಸರ್ಕಾರ ವಿದ್ಯುತ್ ಇಲಾಖೆ ಖಾಸಗಿ ಕರಣ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕೆಲವೇ ದಿನದಲ್ಲಿ ಮತ್ತೆ ಕರೆಂಟ್ ಬಿಲ್ ಜಾಸ್ತಿ: ಭವಿಷ್ಯ ನುಡಿದ ಮಾಜಿ ಸಚಿವ ಹೆಚ್​ಡಿ ರೇವಣ್ಣ
ಮಾಜಿ ಸಚಿವ ರೇವಣ್ಣ
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 25, 2024 | 3:04 PM

Share

ಹಾಸನ, ಜನವರಿ 25: ನಮ್ಮ ಕಾಲದಲ್ಲಿ ಎಂದೂ ಕರೆಂಟ್ ಬಿಲ್ ಹೆಚ್ಚಿಸಿರಲಿಲ್ಲ. ಈ ಸರ್ಕಾರ ಬಂದ ಮೇಲೆ ಬಿಲ್ ಹೆಚ್ಚಿಸಿದರು. ಇನ್ನು ಕೆಲವೇ ದಿನದಲ್ಲಿ ಮತ್ತೆ ಕರೆಂಟ್ ಬಿಲ್ ಜಾಸ್ತಿ ಆಗುತ್ತದೆ. ಆ ಮೂಲಕ ಕೆಇಬಿ ಖಾಸಗಿ ಕರಣ ಆಗುತ್ತೆ ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ (HD Revanna) ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಆಲೂರು ಪಟ್ಟಣದಲ್ಲಿ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೆಇಬಿ ಸಾಲದಲ್ಲಿದೆ. ನಾನಿದ್ದಾಗ ಮೀಸಲು ಹಣ ಇಟ್ಟಿದ್ದೆ. ಕಾಂಗ್ರೆಸ್ ಸರ್ಕಾರ ವಿದ್ಯುತ್ ಇಲಾಖೆ ಖಾಸಗಿ ಕರಣ ಮಾಡುತ್ತಿದೆ. ಈ ಸರ್ಕಾರ ಚುನಾವಣೆ ಪೂರ್ವದಲ್ಲಿ ಆರನೇ ಗ್ಯಾರಂಟಿ ಹೇಳಿದ್ದರು. ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಕೊಬ್ಬರಿಗೆ ಬೆಂಬಲ ಬೆಲೆ ನೀಡಿಲ್ಲ. ಪ್ರಧಾನಿಯವರು ದೇವೇಗೌಡರನ್ನು ಯಾವ ರೀತಿ ಗೌರವಿಸುತ್ತಾರೆ. ಕಾಂಗ್ರೆಸ್​ನವರು ಬೇಕಾದಾಗ ಉಪಯೋಗಿಸಿ ದೂರ ತಳ್ಳುತ್ತಾರೆ. ಕುಮಾರಸ್ವಾಮಿ ಅವರ ಸರ್ಕಾರ ತೆಗೆದಿದ್ದು ಯಾರು? ಯಾವ ಯಾವ ಲೋಕಸಭಾ ಸದಸ್ಯರು ಏನು ಮಾಡಿದಾರೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಮೀಸಲಾತಿ ಕೊಟ್ಟಿದ್ದರೆ ಹೇಳಲಿ ನಾನು ರಾಜಕೀಯ ಬಿಡುತ್ತೇನೆ

ನಮ್ಮ ಪಕ್ಷವನ್ನು ಕಾಂಗ್ರೆಸ್ ಕೈ ಹಿಡಿತಾರೆ. ಅಲ್ಪ ಸಂಖ್ಯಾತರಿಗೆ ಯಾವಾಗ ಟೋಪಿ ಹಾಕುತ್ತಾರೆ ಗೊತ್ತಿಲ್ಲ.  ಬಿಜೆಪಿಗಾಗಿ ಅವರು ಮುಸ್ಲಿಂನ ಹಿಡಿದುಕೊಂಡಿದಾರೆ. ದೇವೇಗೌಡರು ಮೀಸಲಾತಿ ಕೊಟ್ಟರು. ಅಲ್ಪ ಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದು ದೇವೇಗೌಡರು. ಕಾಂಗ್ರೆಸ್​ನವರು ಕೇವಲ ಮುಸಲ್ಮಾನರ ಮತ ತಗೊಂಡರು. ಆದರೆ ಅವರಿಗೆ ಮೀಸಲಾತಿ ಕೊಟ್ಟಿದ್ದ ದೇವೇಗೌಡರು. ಕಾಂಗ್ರೆಸ್ ಮೀಸಲಾತಿ ಕೊಟ್ಟಿದ್ದರೆ ಹೇಳಲಿ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಅಸ್ಸಾಂನ ಆಂತರಿಕ ಸಂಘರ್ಷ ಗೊತ್ತಿದ್ದರೂ ರಾಹುಲ್ ಗಾಂಧಿ ಅಲ್ಲಿಗೆ ಹೋಗಿದ್ದೇಕೆ: ಹೆಚ್​ಡಿ ದೇವೇಗೌಡ ಪ್ರಶ್ನೆ

ಲೋಕಸಭಾ ಚುನಾವಣೆ ಆದ ಮೇಲೆ‌ ಯಾವ ಗ್ಯಾರಂಟಿ ಇರಲ್ಲ. ಕುಮಾರಸ್ವಾಮಿ ಸಿಎಂ‌ ಆಗಿದ್ದಾಗ ಕುಮಾರಸ್ವಾಮಿ ಸರಾಯಿ ನಿಷೇಧ ಮಾಡಿದರು. ಈಗ ಹೆಣ್ಮಕ್ಕಳು ಬೀದಿ ಬೀದಿಲಿ ಎಣ್ಣೆ ಅಂಗಡಿ ಆಗಿದೆ ಅಂತಿದಾರೆ. ಕಳೆದ ಆರು ತಿಂಗಳಲ್ಲಿ ಮೂರು ಬಾರಿ ಎಣ್ಣೆ ರೇಟ್ ಜಾಸ್ತಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಮೈತ್ರಿಯಿಂದ ಆನೆಬಲ: ಹಾಸನದಲ್ಲಿ ಹೆಚ್​ಡಿ ದೇವೇಗೌಡ ತಾಲೂಕುವಾರು ಸಭೆ

ಇದು ಬಡವರ ಸರ್ಕಾರ ಅಲ್ಲ. ಕುಮಾರಸ್ವಾಮಿ ಇದ್ದಾಗ ಕೊಡುತ್ತೆ ಎಂದು ಹೊರಟಿತ್ತು. ಈಗ ಜೋಡೆತ್ತು ಎಲ್ಲಿ ಅಂತಾರೆ. ದೇವೇಗೌಡರನ್ನು, ಕುಮಾರಸ್ವಾಮಿ ಅವರನ್ನು ಉಳಿಸಿದ್ದು ದೇವರು. 2024ಕ್ಕೆ ಮೋದಿಯವರು ಪ್ರಧಾನಿ ಆಗಬೇಕು, ದೇಶ ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ