ಮೈತ್ರಿಯಿಂದ ಆನೆಬಲ: ಹಾಸನದಲ್ಲಿ ಹೆಚ್​ಡಿ ದೇವೇಗೌಡ ತಾಲೂಕುವಾರು ಸಭೆ

ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ದೆ ಮಾಡುವ ಬಗ್ಗೆ ಊಹಾಪೋಹ ಇದೆ. ಪ್ರಧಾನಿ ಮೋದಿಯವರು ಏನು ಹೇಳುತ್ತಾರೋ ಗೊತ್ತಿಲ್ಲ. ಅವರು ಸ್ಪರ್ಧಿಸಲೇಬೇಕು ಎಂದು ಸೂಚಿಸಿದರೆ ಮಂಡ್ಯ ಅಥವಾ ತುಮಕೂರಿನಿಂದ ಸ್ಪರ್ಧಿಸಬಹುದು ಎಂದು ಹೆಚ್​ಡಿ ದೇವೇಗೌಡ ಹೇಳಿದ್ದಾರೆ.

ಮೈತ್ರಿಯಿಂದ ಆನೆಬಲ: ಹಾಸನದಲ್ಲಿ ಹೆಚ್​ಡಿ ದೇವೇಗೌಡ ತಾಲೂಕುವಾರು ಸಭೆ
ಹೆಚ್​ಡಿ ದೇವೇಗೌಡ
Follow us
ಮಂಜುನಾಥ ಕೆಬಿ
| Updated By: Ganapathi Sharma

Updated on: Jan 25, 2024 | 11:32 AM

ಹಾಸನ, ಜನವರಿ 25: ಲೋಕಸಭೆ ಚುನಾವಣೆಗೆ (Lok Sabha Elections 2024) ಬಿಜೆಪಿ ಜತೆಗಿನ ಮೈತ್ರಿಯಿಂದ ಮತ್ತೆ ಪುಟಿದೆದ್ದಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡರು (HD Deve Gowda) ಹಾಸನದಲ್ಲಿ ತಾಲೂಕುವಾರು ಸಭೆ ನಡೆಸುತ್ತಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಈ ಜಿಲ್ಲೆಯಲ್ಲಿ ಪ್ರತೀ ತಾಲ್ಲೂಕುವಾರು ಸಭೆ ನಡೆಸೋ ಬಗ್ಗೆ ಮೊದಲೇ ಹೇಳಿದ್ದೆ. ಪಕ್ಷದ ಎಲ್ಲಾ ಹಂತದ ಚುನಾಯಿತ ಹಾಲಿ ಹಾಗೂ ಮಾಜಿ ಸದಸ್ಯರ ಭೇಟಿಯಾಗುತ್ತಿದ್ದೇನೆ. ಅರಸೀಕೆರೆ, ಬೇಲೂರು ಹಾಸನ‌ ಮುಗಿಸಿ ಬುಧವಾರ ಚನ್ನರಾಯಪಟ್ಟಣ ಹಾಗೂ ಇಂದು (ಶುಕ್ರವಾ) ಆಲೂರಿನಲ್ಲಿ ಸಭೆ ನಡೆಸುತ್ತಿದ್ದೇನೆ ಎಂದರು.

ನಮ್ಮ (ಜೆಡಿಎಸ್) ಹಾಗೂ ಬಿಜೆಪಿ ನಡುವೆ ಇನ್ನೂ ಸೀಟು ಹಂಚಿಕೆ ಅಂತಿಮ ಆಗಿಲ್ಲ. ಆದರೆ ಹಾಸನದಲ್ಲಿ ಹಾಲಿ ಸದಸ್ಯರು ನಮ್ಮವರೇ ಇದ್ದಾರೆ. ಕೆಲವರು ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದಿದ್ದರಿಂದ ಗೊಂದಲ ಇತ್ತು. ಹಾಗಾಗಿ ನಾನೇ ಆ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಕಾರ್ಯಕರ್ತರ ಭೇಟಿಯಾಗಿದ್ದೇನೆ. ಈ ಲೋಕಸಭಾ ಕ್ಷೇತ್ರ ಗೆಲ್ಲಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಿವೈ ವಿಜಯೇಂದ್ರ ಮನೆಗೆ ಬಂದಾಗ ಪ್ರಜ್ಚಲ್ ಅವರೇ ಸ್ವಾಗತ ಮಾಡಿದರು. ಹಿಂದೆ ನಾವು ಹಾಗು ಬಿಜೆಪಿ ಹೋರಾಟ ಮಾಡಿರಬಹುದು. ಆದರೆ ಈಗ ಒಂದಾಗಿ ಹೋಗುತ್ತೇವೆ. ಬಹುಶಃ ಮುಂದಿನ ವಾರದಲ್ಲಿ ಸೀಟು ಹಂಚಿಕೆ ತೀರ್ಮಾನ ಆಗಬಹುದು. ಕುಮಾರಸ್ವಾಮಿ ಅವರು ಬಿಜೆಪಿಯ ಕೆಲ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಸೀಟು ಹಂಚಿಕೆ ವಿಚಾರದಲ್ಲಿ ಕುಮಾರಸ್ವಾಮಿ ತೀರ್ಮಾನದ ಬಗ್ಗೆ ನಾನು ಮಧ್ಯಪ್ರವೇಶ ಮಾಡಲ್ಲ. ನಮಗೆ ಮಂಡ್ಯ ಕೋಲಾರ, ತುಮಕೂರು ಎಂದು ಊಹಾಪೋಹಗಳಿವೆ. ಹಾಸನದಲ್ಲಿ ಹಾಲಿ ಸಂಸದರು ನಮ್ಮವರೇ ಇದ್ದಾರೆ. ಅನೇಕರು ದೇವೇಗೌಡರು ಇಲ್ಲಿಂದ ನಿಂತು ಗೆಲ್ಲಬೇಕು ಎಂಬ ಭಾವನೆ ಮೂಡಿಸಿದ್ದರು. ಆದರೆ ನನಗೆ 91 ವರ್ಷ ವಯಸ್ಸಾಗಿದೆ. ಹಾಗಾಗಿ ನಾನು ಸ್ಪರ್ಧಿಸಲ್ಲ. ನಾನು ಪ್ರಜ್ವಲ್ ಪರ ಪ್ರಚಾರ ಮಾಡುತ್ತೇನೆ ಎಂದು ದೇವೇಗೌಡ ಹೇಳಿದರು.

ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ದೆ ಮಾಡುವ ಬಗ್ಗೆ ಊಹಾಪೋಹ ಇದೆ. ಪ್ರಧಾನಿ ಮೋದಿಯವರು ಏನು ಹೇಳುತ್ತಾರೋ ಗೊತ್ತಿಲ್ಲ. ಅವರು ಸ್ಪರ್ಧಿಸಲೇಬೇಕು ಎಂದು ಸೂಚಿಸಿದರೆ ಮಂಡ್ಯ ಅಥವಾ ತುಮಕೂರಿನಿಂದ ಸ್ಪರ್ಧಿಸಬಹುದು. ಅವರನ್ನು ಸಾಕಷ್ಟು ಕಡೆ ಜನ ಆಹ್ವಾನಿಸುತ್ತಿದ್ದಾರೆ. ಆದರೆ ಇದನ್ನು ತೀರ್ಮಾನ ಮಾಡುವುದು ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರು. ಅದರೆ ಇದುವರೆಗೆ ಆ ರೀತಿ ಮಾತುಕತೆ ಆಗಿಲ್ಲ. ನನ್ನ ಗಮನಕ್ಕೆ ಬಂದಹಾಗೆ ಇದುವರೆಗೆ ಚರ್ಚೆ ಆಗಿಲ್ಲ ಎಂದು ದೇವೇಗೌಡ ತಿಳಿಸಿದರು.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಶೀಘ್ರ ಫೈನಲ್: ಜನವರಿ ಕೊನೆಯಲ್ಲಿ ಅಮಿತ್ ಶಾ ಜತೆ ಕುಮಾರಸ್ವಾಮಿ ಸಭೆ

ನಿಖಿಲ್ ಈ ಬಾರಿ ಸ್ಪರ್ದೆ ಮಾಡುವುದಿಲ್ಲ ಎನ್ನುವುದು ಕುಮಾರಸ್ವಾಮಿ ಅವರ ಅಭಿಪ್ರಾಯ. ಆದರೆ ಮಂಡ್ಯದಲ್ಲಿ ಈ ಬಾರಿ ನಿಖಿಲ್ ಅವರು ಸ್ಪರ್ದೆ ಮಾಡಬೇಕು ಎನ್ನೋ ಒತ್ತಾಯ ಇದೆ. ಕುಮಾರಸ್ವಾಮಿ ಒಪ್ಪಿದರೆ ಅವರು ಸ್ಪರ್ಧೆ ಮಾಡ್ತಾರೆ ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ