AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಖೋಟಾ ನೋಟು ತಯಾರಿಕೆ: ಓರ್ವ ಇಂಜಿನಿಯರ್ ಸೇರಿದಂತೆ 6 ಆರೋಪಿಗಳ ಬಂಧನ

ಹರಿಹರ ಗ್ರಾಮಾಂತರ ಪೊಲೀಸರು, DCRB ಪೊಲೀಸರ ಕಾರ್ಯಾಚಣೆ ಮಾಡಿ ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಓರ್ವ ಇಂಜಿನಿಯರ್ ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. 7.70 ಲಕ್ಷ ರೂ. ಮೌಲ್ಯದ 500, 200 ಮುಖಬೆಲೆಯ ಖೋಟಾ ನೋಟು ಸೇರಿದಂತೆ ಲ್ಯಾಪ್​ಟಾಪ್ ಸೇರಿ‌, ಮೂರು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ದಾವಣಗೆರೆ: ಖೋಟಾ ನೋಟು ತಯಾರಿಕೆ: ಓರ್ವ ಇಂಜಿನಿಯರ್ ಸೇರಿದಂತೆ 6 ಆರೋಪಿಗಳ ಬಂಧನ
ಹರಿಹರ ಗ್ರಾಮಾಂತರ ಪೊಲೀಸರು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Jan 24, 2024 | 10:50 PM

Share

ದಾವಣಗೆರೆ, ಜನವರಿ 24: ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಓರ್ವ ಇಂಜಿನಿಯರ್ ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸರು, DCRB ಪೊಲೀಸರ ಕಾರ್ಯಾಚಣೆ ಮಾಡಿ, ದಾವಣಗೆರೆ ಮೂಲದ ಕುಬೇರಪ್ಪ ತಳವಾರ್, ಹರೀಶ್ ಗೌಡ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಇಂಜಿನಿಯರ್ ಜೆ.ರುದ್ರೇಶ್, ಮೈಸೂರು ಮೂಲದ ಮನೋಜ್ ಗೌಡ, ಮಂಡ್ಯ ಮೂಲದ ಸಂದೀಪ್ ಮತ್ತು ಚಿತ್ರದುರ್ಗ ಮೂಲದ ಕೃಷ್ಣ ನಾಯ್ಕನನ್ನು ಅರೆಸ್ಟ್​ ಮಾಡಿದ್ದಾರೆ. ಬಂಧಿತರಿಂದ 7.70 ಲಕ್ಷ ರೂ. ಮೌಲ್ಯದ 500, 200 ಮುಖಬೆಲೆಯ ಖೋಟಾ ನೋಟು ವಶಕ್ಕೆ ಪಡೆಯಲಾಗಿದೆ.

ಖೋಟಾ ನೋಟು ತಯಾರು‌ ಮಾಡಲು ಬಳಸುತ್ತಿದ್ದ ‌ಲ್ಯಾಪ್​ಟಾಪ್ ಸೇರಿ‌, ಮೂರು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಖೋಟಾ ನೋಟು ತಯಾರಿ ಬಗ್ಗೆ ಇಂಜಿನಿಯರ್ ರುದ್ರೇಶ್ ಒಪ್ಪಿಕೊಂಡಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

29ನೇ ಮಹಡಿಯಿಂದ ಹಾರಿ ಬಾಲಕಿ ಆತ್ಮಹತ್ಯೆ

ಆನೇಕಲ್​: ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಎಳೆನಹಳ್ಳಿ ಸಮೀಪದ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನ 29ನೇ ಮಹಡಿಯಿಂದ ಸುಮಾರು 12 ವರ್ಷದ ಬಾಲಕಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ನಿನ್ನೆ ಮುಂಜಾನೆ 4:30ರ ಸುಮಾರಿಗೆ ನಡೆದಿದೆ. 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕುವಿರಾ ಮೃತ ಬಾಲಕಿ.

ಇದನ್ನೂ ಓದಿ: ಶಿಕ್ಷಕಿ ಕೊಲೆಗೆ ಕಾರಣವೇನು? ಹತ್ಯೆಗೆ ಮುನ್ನ ಆರೋಪಿ ಏನೆಲ್ಲಾ ಪ್ಲ್ಯಾನ್ ಮಾಡಿದ್ದ? ಮಾಹಿತಿ ಬಿಚ್ಚಿಟ್ಟ ಎಸ್ಪಿ

ನಿನ್ನೆ ಮುಂಜಾನೆ 5 ಗಂಟೆ ಸುಮಾರಿಗೆ ತಾನು ವಾಸವಿದ್ದ 29ನೇ ಮಹಡಿಯ ಬಾಲ್ಕನ್ನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಿರುಚಿದ ಶಬ್ದ ಕೇಳಿ ಸೆಕ್ಯೂರಿಟಿ ಗಾರ್ಡ್ ಗಮನಿಸಿ ಅಪಾರ್ಟ್ಮೆಂಟ್ ಅಸೋಸಿಯೇಷನ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಬಸ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ದುರ್ಮರಣ

ಗದಗ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆತಕ್ಕೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಹದಿನೈದಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್, ಲಾರಿಗಳು ಅಪ್ಪಚ್ಚಿಯಾಗಿವೆ. ಗಾಯಾಳುಗಳು ಆಸ್ಪತ್ರೆಯಲ್ಲಿ ವಿಲವಿಲ ಅಂತಿದ್ದಾರೆ. ಇನ್ನೂ ಯಲ್ಲಮ್ಮನ ದರ್ಶನಕ್ಕೆ ಹೋಗ್ತಾಯಿದ್ದ ಸಹೋದರಿಯರಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೊಬ್ರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More