ಶಿಕ್ಷಕಿ ಕೊಲೆಗೆ ಕಾರಣವೇನು? ಹತ್ಯೆಗೆ ಮುನ್ನ ಆರೋಪಿ ಏನೆಲ್ಲಾ ಪ್ಲ್ಯಾನ್ ಮಾಡಿದ್ದ? ಮಾಹಿತಿ ಬಿಚ್ಚಿಟ್ಟ ಎಸ್ಪಿ
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ನಡೆದ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಎರಡು ವರ್ಷದಿಂದ ದೀಪಿಕಾ ಜತೆ ಅನ್ಯೋನ್ಯವಾಗಿದ್ದ ನಿತೇಶ್ ಎಂಬಾತನೇ ಕೊಲೆಗಾರ ಎಂದು ತಿಂದುಬಂದಿದೆ. ಹಾಗಿದ್ದರೆ ಕೊಲೆ ಮಾಡಿದ್ದು ಯಾಕೆ? ಈ ಬಗ್ಗೆ ಮಂಡ್ಯ ಎಸ್ ಪಿ ಎನ್.ಯತೀಶ್ ಮಾಧ್ಯಮಗಳ ಮುಂದೆ ಕೊಲೆಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮಂಡ್ಯ, (ಜನವರಿ 24): ಜಿಲ್ಲೆಯ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ (Melukote Teacher) ಮಾಣಿಕ್ಯನ ಹಳ್ಳಿಯ ದೀಪಿಕಾ (Teacher Deepika) ಕೊಲೆ ಪ್ರಕರಣಕ್ಕೆ (Deepika Murder Case) ಸಂಬಂಧಿಸಿ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ನಿತೇಶ್ ಹೊಸಪೇಟೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಇನ್ನು ಈ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ದೀಪಿಕಾಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸ್ಪಷ್ಟಪಡಿಸಿದರು.
ಕೊಲೆಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಎಸ್ ಪಿ ದೀಪಿಕಾ ಹಾಗೂ ನಿತೇಶ್ ನಡುವೆ ವರ್ಷದಿಂದ ಸ್ನೇಹ ಇತ್ತು. ದಿನ ನಿತ್ಯ ಕಾಲ್, ಮೆಸೇಜ್ ಚಾಟ್ ನಲ್ಲಿ ಇಬ್ಬರು ನಿರತರಾಗುತ್ತಿದ್ದರು. ಆಗಾಗ ಭೇಟಿ ಸಹ ಆಗುತ್ತಿದ್ದರು. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪ ಇತ್ತು. ಇದರಿಂದ ಆಗಾಗ ಇಬ್ಬರ ನಡುವೆ ಜಗಳ ಆಗುತ್ತಿತ್ತು. ನಾನು ಭೇಟಿ ಮಾಡು ಎಂದಾಗ ದೀಪಿಕಾ ಸಿಗುತ್ತಿರಲಿಲ್ಲ. ಆದ್ರೆ ಆಕೆ ಕರೆದಾಗ ನಿತೀಶ್ ಹೋಗಲೇ ಬೇಕಿತ್ತು. ಇದರಿಂದ ಆಕೆಯ ಬಗ್ಗೆ ನಿತೀಶ್ ಗೆ ಮನಸ್ತಾಪ ಇತ್ತಂತೆ. ಈ ಹಿನ್ನೆಲೆಯಲ್ಲಿ ಕೊಲೆಗೆ ಪ್ಲಾನ್ ಮಾಡಿಕೊಂಡಿದ್ದ ನಿತೀಶ್, ಜನವರಿ 20 ರಂದು ಮೀಟ್ ಮಾಡಲು ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿಗೆ ಬರುವಂತೆ ದೀಪಿಕಾಗೆ ಹೇಳಿದ್ದ. ಅಲ್ಲದೇ ದೀಪಿಕಾ ಬೆಟ್ಟದ ತಪ್ಪಲಿಗೆ ಬರುವ ಮುನ್ನವೇ ಹೂತು ಹಾಕಲು ಗುಂಡಿ ಸಹ ತೆಗೆದಿದ್ದ ಎಂದು ವಿವರಿಸಿದರು.
ಇದನ್ನೂ ಒದಿ: ಮಂಡ್ಯ: ಶಿಕ್ಷಕಿ ಕೊಲೆಯಾದ 30 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು
ದೀಪಿಕಾ ಬರ್ತಿದ್ದಂತೆ ಜಗಳ ತೆಗೆದು, ಆಕೆಯ ವೇಲ್ ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ತೋಡಿದ್ದ ತೋಡಿಟ್ಟಿದ್ದ ಗುಂಡಿಯಲ್ಲಿ ಹೂತು ಹಾಕಿದ್ದ. ನಂತರ ದಿನ ಊರಿಗೆ ತೆರಳಿ ಮೈಸೂರಿಗೆ ಕೆಲಸಕ್ಕೂ ತೆರಳಿದ್ದ. ಎರಡು ದಿನ ಊರನಲ್ಲಿಯೇ ಇದ್ದು ಅನುಮಾನ ಬಾರದಂತೆ ವರ್ತಿಸುತ್ತಿದ್ದ. ಆದರೆ, ದೀಪಿಕಾಳ ಶವ ಪತ್ತೆಯಾಗ್ತಿದ್ದಂತೆ ಊರಿಂದ ಎಸ್ಕೇಪ್ ಆಗಿದ್ದ. ಹೊಸಪೇಟೆಯಲ್ಲಿ ಆರೋಪಿ ನಿತೀಶ್ನನ್ನು ಬಂಧಿಸಿ ಕರೆತಂದಿದ್ದೇವೆ. ವಿಚಾರಣೆಯಲ್ಲಿ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆಯನ್ನ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ