ಕಾರವಾರ: ಕತ್ತು ಹಿಸುಕಿ ಪತಿಯಿಂದಲೇ ಪತ್ನಿಯ ಕೊಲೆ

ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬಿಂಬಿಸಲು ಪ್ರಯತ್ನಿಸಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನಾಟಕ ಮಾಡಲು ಮುಂದಾದ ಪತಿ ಮಂಜುನಾಥ್​ನ ಪೊಲೀಸರ ತನಿಖೆಯಲ್ಲಿ ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.

ಕಾರವಾರ: ಕತ್ತು ಹಿಸುಕಿ ಪತಿಯಿಂದಲೇ ಪತ್ನಿಯ ಕೊಲೆ
ಸಾಂದರ್ಭಿಕ ಚಿತ್ರ

Updated on: Apr 21, 2021 | 1:20 PM

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಉಪ್ಪಿನಪಟ್ಟಣ ಗ್ರಾಮದಲ್ಲಿ ಪತಿಯಿಂದಲೇ ಪತ್ನಿಯ ಕೊಲೆಯಾಗಿದೆ. ಮಂಜುನಾಥ್ ಎಂಬಾತ ಕತ್ತು ಹಿಸುಕಿ ತನ್ನ ಪತ್ನಿ ಮಮತಾ ಶಾನಭಾಗ್(36) ಎಂಬಾಕೆಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬಿಂಬಿಸಲು ಪ್ರಯತ್ನಿಸಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನಾಟಕ ಮಾಡಲು ಮುಂದಾದ ಪತಿ ಮಂಜುನಾಥ್​ನ ಪೊಲೀಸರ ತನಿಖೆಯಲ್ಲಿ ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.

ಅಪರಿಚಿತನಿಂದ ಮಹಿಳೆ ಕೊಲೆ
ಕೋಲಾರ: ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕೋಲಾರದ ಮಹಾಲಕ್ಷ್ಮೀ ಬಡಾವಣೆಯಲ್ಲಿ ನಡೆದಿದೆ. ನಾಗನಾಯಕನಹಳ್ಳಿಯ ನೀಲವೇಣಿ (29) ಎಂಬಾಕೆ ಬರ್ಬರವಾಗಿ ಕೊಲೆಯಾಗಿದ್ದಾರೆ. ಮಹಾಲಕ್ಷ್ಮಿ ಲೇ ಔಟ್​ನಲ್ಲಿ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದ ನೀಲವೇಣಿ ಅಂಗಡಿಗೆ ನುಗ್ಗಿ ಹಾಡುಹಗಲೇ ಅಪರಿಚಿತ ವ್ಯಕ್ತಿ ಹತ್ಯೆಗೈದಿದ್ದಾನೆ.

ಕೊಲೆಯಾದ ನೀಲವೇಣಿ, ಫ್ಯಾನ್ಸಿ ಸ್ಟೋರ್

ಇದನ್ನೂ ಓದಿ

ನಾಲ್ಕು ದಶಕದಿಂದ ಚಿತ್ರರಂಗದಲ್ಲಿ ಡಿಸೈನರ್ ಆಗಿದ್ದ ಮಸ್ತಾನ್ ಕೊರೊನಾ ಸೋಂಕಿಗೆ ಬಲಿ

ಯಾದಗಿರಿಯಲ್ಲಿ ಭೀಕರ ಅಪಘಾತ ಐವರು ದುರ್ಮರಣ, ಹಾಸನದಲ್ಲಿ ಬೈಕ್​ಗೆ ಕಾರು ಡಿಕ್ಕಿ ಮೂವರ ಸಾವು

(husband murdered his wife at uttara kannada)