ವನ್ಯಪ್ರಾಣಿಗಳ ದಾಳಿಗೆ ಪರಿಹಾರ ಮೊತ್ತ 75 ಸಾವಿರ ರೂ.ಗೆ ಏರಿಸಿದ ಕರ್ನಾಟಕ ಸರ್ಕಾರ
ಕುರಿ, ಮೇಕೆ, ಆಡು ಮೃತಪಟ್ಟಲ್ಲಿ ಈಗ ನೀಡುತ್ತಿರುವ 5,000 ರೂ. ಪರಿಹಾರ ಮೊತ್ತವನ್ನು 10 ಸಾವಿರ ರೂ. ಗೆ ಹೆಚ್ಚಳ ಮಾಡಿದ್ದು, ಹಸು, ಎಮ್ಮೆ, ಕೋಣ ಸಾವನ್ನಪ್ಪಿದ್ದರೆ 10 ಸಾವಿರ ರೂಪಾಯಿಯಿಂದ 75 ಸಾವಿರ ರೂ.ಗೆ ಏರಿಕೆ ಮಾಡಿದೆ.

ಬೆಂಗಳೂರು: ವನ್ಯ ಪ್ರಾಣಿಗಳ ದಾಳಿಯಿಂದ ಸಾಕು ಪ್ರಾಣಿಗಳಿಗಾಗುವ ಪ್ರಾಣಹಾನಿ ಪರಿಹಾರ ಮೊತ್ತವನ್ನು 10 ಸಾವಿರದಿಂದ 75 ಸಾವಿರಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವನ್ಯಜೀವಿಗಳಿಂದ ಸಾಕು ಪ್ರಾಣಿಗಳ ಹತ್ಯೆ ಆದಲ್ಲಿ ತಕ್ಷಣ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಹಾರ ಹಣ 20 ಸಾವಿರ ರೂಪಾಯಿ ಬಿಡುಗಡೆ ಮಾಡಿ, ಬಳಿಕ ಸ್ಥಳೀಯ ಪಶುವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಿದ ಬಳಿಕ ಉಳಿದ ಮೊತ್ತ ಪಾವತಿಸಬೇಕೆಂದು ಸರ್ಕಾರ ತಿಳಿಸಿದೆ.
ಕುರಿ, ಮೇಕೆ, ಆಡು ಮೃತಪಟ್ಟಲ್ಲಿ ಈಗ ನೀಡುತ್ತಿರುವ 5,000 ರೂ. ಪರಿಹಾರ ಮೊತ್ತವನ್ನು 10 ಸಾವಿರ ರೂ. ಗೆ ಹೆಚ್ಚಳ ಮಾಡಿದ್ದು, ಹಸು, ಎಮ್ಮೆ, ಕೋಣ ಸಾವನ್ನಪ್ಪಿದ್ದರೆ 10 ಸಾವಿರ ರೂಪಾಯಿಯಿಂದ 75 ಸಾವಿರ ರೂ.ಗೆ ಏರಿಕೆ ಮಾಡಿದೆ.
ಇದನ್ನೂ ಓದಿ
(Karnataka Government increased compensation amount to 75 thousand for damages of Animal Attack)
Published On - 3:01 pm, Wed, 21 April 21