ಅಂತ್ಯಕ್ರಿಯೆಗೆ 60 ಸಾವಿರ ರೂ ಡಿಮ್ಯಾಂಡ್ ಮಾಡಿದ ಆ್ಯಂಬುಲೆನ್ಸ್ ಸಿಬ್ಬಂದಿ | ಮಾಂಗಲ್ಯ ಸರ ಮಾರಲು ಮುಂದಾದ ಮಗಳು

ತಂದೆಯ ಅಂತ್ಯಸಂಸ್ಕಾರಕ್ಕೆ ಮಗಳು ತನ್ನ ಮಾಂಗಲ್ಯ ಸರ ಮಾರಲು ಮುಂದಾಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಂತ್ಯಕ್ರಿಯೆಗೆ 60 ಸಾವಿರ ರೂ ಡಿಮ್ಯಾಂಡ್ ಮಾಡಿದ ಆ್ಯಂಬುಲೆನ್ಸ್ ಸಿಬ್ಬಂದಿ | ಮಾಂಗಲ್ಯ ಸರ ಮಾರಲು ಮುಂದಾದ ಮಗಳು
ಆ್ಯಂಬುಲೆನ್ಸ್ ಸಿಬ್ಬಂದಿ ಮೃತದೇಹ ಇಡಲು ಮತ್ತು ಅಂತ್ಯಕ್ರಿಗೆ 60 ಸಾವಿರ ಡಿಮ್ಯಾಂಡ್ ಮಾಡಿದ್ದಾರೆ.

ಬೆಂಗಳೂರು: ಮಹಾಮಾರಿ ಕೊರೊನಾ ದೇಶದ ಜನರನ್ನು ಹೀನಾಯ ಸ್ಥಿತಿಗೆ ತಂದು ನಿಲ್ಲಿಸಿದೆ. ತಮ್ಮವರಿಗೆ ಚಿಕಿತ್ಸೆ ಕೊಡಿಸಲು, ಅವರನ್ನು ಉಳಿಸಲು ಪರಿದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾಮಾರಿಯ ಕೌರ್ಯಕ್ಕೆ ಮೃತರ ಸಂಖ್ಯೆ ಹೆಚ್ಚುತ್ತಿದೆ. ತಂದೆಯ ಅಂತ್ಯಸಂಸ್ಕಾರಕ್ಕೆ ಮಗಳು ತನ್ನ ಮಾಂಗಲ್ಯ ಸರ ಮಾರಲು ಮುಂದಾಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿನ್ನೆ ರಾತ್ರಿ ಮತ್ತಿಕೆರೆ ಮನೆಯಲ್ಲಿ ಕೊವಿಡ್ ಸೋಂಕಿತ ತಂದೆ ಸಾವನ್ನಪ್ಪಿದ್ದರು. ಆದರೆ ಇದನ್ನು ತಿಳಿಯದ ಮಗಳು ತಂದೆ ಬದುಕಿರಬಹುದು ಎಂದು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಅಲ್ಲಿ ವೈದ್ಯರು ಚೆಕ್ ಮಾಡಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ರು. ಬಳಿಕ ಅದೇ ಆ್ಯಂಬುಲೆನ್ಸ್ನಲ್ಲಿ ಕುಮಾರ್ ಆ್ಯಂಬುಲೆನ್ಸ್ ಮಾಲೀಕತ್ವದ ಹೆಬ್ಬಾಳದ ನಂದನ ಆ್ಯಂಬುಲೆನ್ಸ್ ಸರ್ವಿಸ್ಗೆ ಕರೆತರಲಾಯಿತು.

ಅಲೇ ಇದ್ದ ಖಾಸಗಿ ಶವಾಗಾರದಲ್ಲಿ ಮೃತದೇಹ ಇರಿಸಲಾಗಿತ್ತು. ಈ ವೇಳೆ ಆ್ಯಂಬುಲೆನ್ಸ್ ಸಿಬ್ಬಂದಿ ಮೃತದೇಹ ಇಡಲು ಮತ್ತು ಅಂತ್ಯಕ್ರಿಗೆ 60 ಸಾವಿರ ಡಿಮ್ಯಾಂಡ್ ಮಾಡಿದ್ದಾರೆ. 3,500 ರೂ ಆಗುವ ಒಂದು ದಿನದ ಚಾರ್ಜ್ಗೆ 60 ಸಾವಿರ ಡಿಮ್ಯಾಂಡ್ ಮಾಡಿದ್ದಾರೆ. ನಂತರ 40 ಸಾವಿರ ಕೊಟ್ರೆ ಮೃತದೇಹ ಕೊಡೋಡು ಇಲ್ಲ ಅಂದ್ರೆ ಹೆಬ್ಬಾಳ ಫ್ಲೈ ಓವರ್ ಕೆಳಗೆ ಬಿಟ್ಟು ಹೋಗ್ತಿನಿ ಎಂದು ಆ್ಯಂಬುಲೆನ್ಸ್ ಮಾಲೀಕ ಅವಾಜ್ ಹಾಕಿದ್ದಾನೆ. ಈ ರೀತಿ ಜೈ ಹನುಮಾನ್ ಖಾಸಗಿ ಆ್ಯಂಬುಲೆನ್ಸ್ ಮಾಲೀಕರಿಂದ ಸುಲಿಗೆಯಾಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಟಿವಿ9 ರಹಸ್ಯ ಕಾರ್ಯಾಚರಣೆ ಕೈಗೊಂಡಿದ್ದು ಸುಲಿಗೆಯ ಕೃತ್ಯ ಬಯಲಾಗಿದೆ.

ಟಿವಿ9 ಕ್ಯಾಮೆರಾ ಕಂಡು ಸಿಬ್ಬಂದಿ ಥಂಡ ಬಳಿಕ ಟಿವಿ9ನ ಟಿವಿ9 ಕ್ಯಾಮೆರಾ ಕಂಡು ಆ್ಯಂಬುಲೆನ್ಸ್ ಸಿಬ್ಬಂದಿ ಶಾಕ್ ಆಗಿದ್ದಾನೆ. ಸದ್ಯ 13 ಸಾವಿರ ಹಣ ಕಟ್ಟಿಸಿಕೊಂಡು ಮೃತದೇಹ ನೀಡಿದ್ದಾನೆ. ಮಾರಲು ಬಿಚ್ಚಿಟ್ಟಿದ್ದ ಮಾಂಗಲ್ಯ ಸರವನ್ನು ಮಹಿಳೆ ಮತ್ತೆ ಕುತ್ತಿಗೆಗೆ ಹಾಕಿಕೊಂಡಿದ್ದು ಟಿವಿ9 ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ನಗರದಲ್ಲಿ ಮಹಾಮಾರಿಯ ಆಟವೊಂದು ಕಡೆಯಾದ್ರೆ ಇದರ ಉಪಯೋಗ ಪಡೆದು ಹಣ ಮಾಡುವವರು ಮತ್ತೊಂದು ಕಡೆ ಇದ್ದಾರೆ. ಮೊದಲೇ ತಮ್ಮವರನ್ನು ಕಳೆದುಕೊಂಡ ಮಂದಿ ಈಗ ಮತ್ತೆ ಹಣ ಸುಲಿಗೆ ಮಾಡುವವರ ಕೈಗೆ ಸಿಕ್ಕಿ ನರಳಾಡುವಂತಾಗಿದೆ.

ಇದನ್ನೂ ಓದಿ: ಕಾರವಾರ: ಕತ್ತು ಹಿಸುಕಿ ಪತಿಯಿಂದಲೇ ಪತ್ನಿಯ ಕೊಲೆ

Published On - 2:26 pm, Wed, 21 April 21

Click on your DTH Provider to Add TV9 Kannada