ಬೆಂಗಳೂರು ವರ್ಸಸ್ ಹೈದರಾಬಾದ್: ಯಾವ ನಗರ ಅತಿ ವೆಚ್ಚದಾಯಕ? ಟ್ವಿಟರ್​ನಲ್ಲಿ ವೈರಲ್​ ಆಗುತ್ತಿವೆ ಪೋಸ್ಟ್​​ಗಳು

|

Updated on: Sep 06, 2023 | 9:53 AM

ನಾನು (ಪೃಧ್ವಿ ರೆಡ್ಡಿ) ಇತ್ತೀಚಿಗೆ ಬೆಂಗಳೂರಿನಿಂದ ಹೈದರಾಬಾದ್​ಗೆ ಸ್ಥಳಾಂತರಗೊಂಡೆ. ಇಲ್ಲಿ ಬಂದಾಗಿನಿಂದ ತಿಂಗಳಿಗೆ 40 ಸಾವಿರ ರೂ. ಖರ್ಚು ಉಳಿತಾಯವಾಗುತ್ತಿದೆ. ಆ ಹಣದಿಂದ ಒಂದು ಕುಟುಂಬ ನೆಮ್ಮದಿಯಿಂದ ಬದುಕಬಹುದು ಎಂದು ಎಕ್ಸ್​ (ಟ್ವಿಟರ್​​) ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ಟ್ವಿಟರ್​ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರು ವರ್ಸಸ್ ಹೈದರಾಬಾದ್: ಯಾವ ನಗರ ಅತಿ ವೆಚ್ಚದಾಯಕ? ಟ್ವಿಟರ್​ನಲ್ಲಿ ವೈರಲ್​ ಆಗುತ್ತಿವೆ ಪೋಸ್ಟ್​​ಗಳು
ಹೈದರಾಬಾದ್​​, ಬೆಂಗಳೂರು
Follow us on

ಭಾರತದಲ್ಲಿ ಹೈದರಾಬದ್ (Hyderabad) ಮತ್ತು ಬೆಂಗಳೂರು (Bengaluru) ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿವೆ. ಎರಡೂ ರಾಜಧಾನಿಗಳು ಹಲವು ಅಂಶಗಳಲ್ಲಿ ಪೈಪೋಟಿ ನಡೆಸುತ್ತಿರುವುದರಿಂದ ‘ಬೆಂಗಳೂರು ವರ್ಸಸ್ ಹೈದರಾಬಾದ್’ ಚರ್ಚೆ ದೀರ್ಘಕಾಲದಿಂದ ನಡೆಯುತ್ತಿದೆ. ಎರಡೂ ನಗರಗಳು ಅನೇಕ ಟೆಕ್ ಕಂಪನಿಗಳನ್ನು ಆಕರ್ಷಿಸುತ್ತವೆ ಮತ್ತು ದೇಶಾದ್ಯಂತ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಈ ವಿಚಾರವಾಗಿ ಟ್ವಿಟರ್​ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಚರ್ಚೆಯನ್ನು ಹುಟ್ಟು ಹಾಕಿದ್ದು, ಇತ್ತೀಚಿಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋದ ಪೃಧ್ವಿ ರೆಡ್ಡಿ ಎಂಬುವರ ಪೋಸ್ಟ್​.

ನಾನು (ಪೃಧ್ವಿ ರೆಡ್ಡಿ) ಇತ್ತೀಚಿಗೆ ಬೆಂಗಳೂರಿನಿಂದ ಹೈದರಾಬಾದ್​ಗೆ ಸ್ಥಳಾಂತರಗೊಂಡೆ. ಇಲ್ಲಿ ಬಂದಾಗಿನಿಂದ ತಿಂಗಳಿಗೆ 40 ಸಾವಿರ ರೂ. ಖರ್ಚು ಉಳಿತಾಯವಾಗುತ್ತಿದೆ. ಆ ಹಣದಿಂದ ಒಂದು ಕುಟುಂಬ ನೆಮ್ಮದಿಯಿಂದ ಬದುಕಬಹುದು ಎಂದು ಎಕ್ಸ್​ (ಟ್ವಿಟರ್​​) ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ಟ್ವಿಟರ್​ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ: ಬೆಂಗಳೂರು: ಮನೆ ಫೋಟೋ ವೈರಲ್ ಆಗುತ್ತಿದ್ದಂತೆ 10 ಸಾವಿರ ರೂ. ಬಾಡಿಗೆ ಏರಿಸಿ ಮತ್ತೆ ಇಳಿಸಿದ ಮಾಲೀಕ, ಕಾರಣವೇನು?

ಇದಕ್ಕೆ ಕೆಲವರು ಕಾಮೆಂಟ್​ ಮಾಡಿ ಜೀವನ ವೆಚ್ಚಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ. ಹೈದರಾಬಾದ್‌ನಲ್ಲೂ ಕೂಡ ಮನೆ ಬಾಡಿಗೆ ಬೆಂಗಳೂರಿನಷ್ಟಿಯೇ ಇದೆ. ಎರಡೂ ನಗರದಲ್ಲಿ ಕೆಲವೊಂದು ಪ್ರದೇಶದಲ್ಲಿ ಆಹಾರದ ಬೆಲೆ ಹೆಚ್ಚು ಅಥವಾ ಕಡಿಮೆ ಇದೆ. ಹಾಗಂತ ಈ ನಗರ ಅಗ್ಗವಾಗಿದೆ ಎಂದು ಹೇಳಲು ಆಗುವುದಿಲ್ಲ. ಸಾರಿಗೆ ಇಲ್ಲಿ ಸ್ವಲ್ಪ ಅಗ್ಗವಾಗಿದೆ ಆದರೆ ಬೆಂಗಳೂರಿಗಿಂತ ಜಾಸ್ತಿ ಇದೆ ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಹೈದರಾಬಾದ್‌ಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಅಗ್ಗವಾಗಿದೆ ಎಂದು ಬಳಕೆದಾರರೊಬ್ಬರು ವಾದಿಸಿದ್ದಾರೆ. ನಾನು ಬಿಎಂಟಿಸಿ ವಜ್ರ (ವೋಲ್ವೋ ಎಸಿ) ಬಸ್‌ನಲ್ಲಿ 10 ಕಿಲೋಮೀಟರ್‌ನಿಂದ 12 ಕಿಮೀವರೆಗೆ 30 ರೂ.ನಲ್ಲಿ ಪ್ರಯಾಣಿಸಬಹುದು. ಆದರೆ ಕಳೆದ ವಾರ ನಾನು ಹೈದರಾಬಾದ್ ನಾನ್ ಎಸಿಆರ್‌ಟಿಸಿ ಬಸ್‌ನಲ್ಲಿ ಕಾಚಿಗುಡಾ ನಿಲ್ದಾಣದಿಂದ ಲಕ್ಡಿಕಪೂಲ್‌ಗೆ 30 ರೂ. ಪಾವತಿಸಿದ್ದೇನೆ. ಅಲ್ಲದೇ ಹೈದರಾಬಾದ್‌ಗಿಂತ ಬೆಂಗಳೂರಿನಲ್ಲಿ ಓಲಾ ಬಾಡಿಗೆ ಕೂಡ ಕಡಿಮೆಯಾಗಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:51 am, Wed, 6 September 23