ಬೆಂಗಳೂರು: ಮನೆ ಫೋಟೋ ವೈರಲ್ ಆಗುತ್ತಿದ್ದಂತೆ 10 ಸಾವಿರ ರೂ. ಬಾಡಿಗೆ ಏರಿಸಿ ಮತ್ತೆ ಇಳಿಸಿದ ಮಾಲೀಕ, ಕಾರಣವೇನು?
ಮನೆ ಮಾಲೀಕರೊಬ್ಬರು X (ಹಿಂದಿನ ಟ್ವಿಟರ್) ನಲ್ಲಿ ಬಾಡಿಗೆ ಮನೆ ಇರುವ ಬಗ್ಗೆ ಪೋಸ್ಟ್ ಮಾಡಿದ್ದರು. ಜೊತೆಗೆ ಮನೆಯ ಬಾಡಿಗೆ ಮೊತ್ತವನ್ನೂ ತಿಳಿಸಿದ್ದರು. ಆದರೆ ಯಾವಾಗ ಆ ಮನೆಗೆ ಬೇಡಿಕೆ ಹೆಚ್ಚಾಯಿತೋ ಅದನ್ನು ಗಮನಿಸಿ ಕೆಲವೇ ಗಂಟೆಗಳಲ್ಲಿ ಬಾಡಿಗೆಯನ್ನು ಹೆಚ್ಚಿಸಿದ್ದಾರೆ. ಇದಕ್ಕೆ Xನಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಬೆಂಗಳೂರು, ಸೆ.06: ಅನೇಕ MNC ಕಂಪನಿಗಳು, ಐಟಿ ದೈತ್ಯರು ಮತ್ತು ಸ್ಟಾರ್ಟ್ ಅಪ್ ಕಂಪನಿಗಳಿಗೆ ಬೆಂಗಳೂರು ನೆಲೆ ಬೀಡಾಗಿ ಬೆಳೆಯುತ್ತಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ದರ, ಬಾಡಿಗೆ ಮನೆಗಳ ಬೇಡಿಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ(Rent House). ಅದರಲ್ಲೂ ಭೂಮಾಲೀಕರು ತಮ್ಮ ಬಾಡಿಗೆದಾರರ ಲಿಂಕ್ಡ್‌ಇನ್ ಪ್ರೊಫೈಲ್‌ಗಳನ್ನು ಕೇಳುವುದು ರಾಜ್ಯ ರಾಜಧಾನಿಯಲ್ಲಿ ಸಾಮಾನ್ಯ ಸಂಗತಿಯಾಗಿದೆ. ಮತ್ತು ಮನೆ ಮಾಲೀಕರು ಬಾಡಿಗೆದಾರರಿಗೆ ಹಾಕುವ ಅನೇಕ ನಿರ್ಬಂಧಗಳ ಬಗ್ಗೆ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇತ್ತೀಚೆಗೆ, ಮನೆ ಮಾಲೀಕರೊಬ್ಬರು X (ಹಿಂದಿನ ಟ್ವಿಟರ್) ನಲ್ಲಿ ಬಾಡಿಗೆ ಮನೆ ಇರುವ ಬಗ್ಗೆ ಪೋಸ್ಟ್ ಮಾಡಿದ್ದರು. ಜೊತೆಗೆ ಮನೆಯ ಬಾಡಿಗೆ ಮೊತ್ತವನ್ನೂ ತಿಳಿಸಿದ್ದರು. ಆದರೆ ಯಾವಾಗ ಆ ಮನೆಗೆ ಬೇಡಿಕೆ ಹೆಚ್ಚಾಯಿತೋ ಅದನ್ನು ಗಮನಿಸಿ ಕೆಲವೇ ಗಂಟೆಗಳಲ್ಲಿ ಬಾಡಿಗೆಯನ್ನು ಹೆಚ್ಚಿಸಿದ್ದಾರೆ. ಇದಕ್ಕೆ Xನಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಗೂಗಲ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಳ್ಳುವ ಭರತ್ ಎಂಜಿ ಎಂಬುವವರು ಇಂದಿರಾನಗರದಲ್ಲಿ 2 ಬೆಡ್‌ರೂಮ್ ಫ್ಲಾಟ್ ಬಾಡಿಗೆಗೆ ಇದೆ ಎಂದು Xನಲ್ಲಿ ಪೋಸ್ಟ್ ಹಾಕಿದ್ದರು. ಮತ್ತು ಮಾಸಿಕ ಬಾಡಿಗೆ ₹45000 ಎಂದು ಉಲ್ಲೇಖಿಸಿದ್ದರು. ಅಲ್ಲದೆ ಭರತ್ ಅವರು ಫೋಸ್ಟ್ ಮಾಡಿದ್ದ ಮನೆಯ ಫೋಟೋಗಳು ವೈರಲ್ ಆಗಿದ್ದವು. ಮನೆಯ ಒಳಗಿನ ಬೆಲೆಬಾಳುವ ಇಂಟೀರಿಯರ್ ಡಿಸೈನ್, ಪೀಠೋಪಕರಣಗಳಿಂದಾಗಿ ಮನೆ ಫೋಟೋಗಳು ವೈರಲ್ ಆಗಿದ್ದವು. ಜೊತೆಗೆ ಮೀಮ್ಸ್ ಕೂಡ ಹರಿದಾಡಿತ್ತು. ಇದಾದ ಬಳಿಕ ಮನಗೆ ಬೇಡಿಕೆ ಹೆಚ್ಚಾಗಿದ್ದು ಇದನ್ನು ಗಮನಿಸಿದ ಭರತ್, ಮನೆಯ ಬೇಡಿಕೆಯನ್ನು ಪರಿಗಣಿಸಿ ₹ 45000 ಬದಲಿಗೆ ₹ 55,000 ಬಾಡಿಗೆಗೆ ಮನೆ ನೀಡುವುದಾಗಿ Xನಲ್ಲಿ ಪೋಸ್ಟ್ ಹಾಕಿದರು.
ಭರತ್ ಹಠಾತ್ ₹10,000 ಹೆಚ್ಚಳ ಮಾಡಿದರು. ಇದಾದ ಕೆಲವೇ ಗಂಟೆಗಳಲ್ಲಿ X ಬಳಕೆದಾರರಿಂದ ಭರತ್ಗೆ ಬಿಸಿ ಮುಟ್ಟಿದ್ದು ಭರತ್ ಮತ್ತೆ ಕ್ಷಮೆಯಾಚಿಸಿ ಬಾಡಿಗೆಯನ್ನು ₹45000 ರೂ.ಗೆ ಇಳಿಸಿದ್ದಾರೆ. ನನ್ನ ಬಾಡಿಗೆ ಟ್ವೀಟ್‌ಗೆ ಇಷ್ಟು ಪ್ರತಿಕ್ರಿಯೆಗಳು ಬರುತ್ತವೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ! ಬಾಡಿಗೆಯನ್ನು ಹೆಚ್ಚಿಸಿದಕ್ಕೆ ಕ್ಷಮಿಸಿ ಎಂದು ಟ್ವೀಟ್ ಮಾಡಿದ್ದಾರೆ.
(1/2) Ok, git reset –hard
I never expected so many responses to my rental tweet! They were mostly love, with a bit of hate mixed in for increasing the rent. Really sorry about that!
— MG Bharath (@Bharath_MG) September 3, 2023
ಇನ್ನು ಭರತ್ ಅವರು ಪೋಸ್ಟ್ ಮಾಡಿದ್ದ ಮನೆ ಬಗ್ಗೆ 500 ಕ್ಕೂ ಹೆಚ್ಚು ಬಾಡಿಗೆದಾರರು ಕರೆ ಮಾಡಿ ವಿಚಾರಿಸಿದ್ದಾರೆ ಎಂದು ಭರತ್ ತಿಳಿಸಿದ್ದಾರೆ. ಒಮ್ಮೆ ನಾವು ಒಪ್ಪಿಕೊಂಡ ನಂತರ ಮತ್ತು ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ನಾನು ಬಾಡಿಗೆಯನ್ನು ಹೆಚ್ಚಿಸುವುದಿಲ್ಲ. ಆದರೆ ನನ್ನದೊಂದು ಷರತ್ತು ಇದೆ. ಅದು ಏನೆಂದರೆ, ನೀವು ನನ್ನ ಫ್ಲಾಟನ್ನು ಬಾಡಿಗೆಗೆ ಪಡೆದ ನಂತರ ಅದನ್ನು ಹಿಂತಿರುಗಿಸುವಾಗಲೂ ಅದೇ ಸ್ಥಿತಿಯಲ್ಲಿ ಇರಬೇಕು ಎಂದು ಬಯಸುತ್ತೇನೆ. ಸೆಪ್ಟೆಂಬರ್ 15 ರ ನಂತರ ಫ್ಲಾಟ್ ನೋಡಲು ಸಮಯ ನಿಗದಿ ಮಾಡುತ್ತೇನೆ ಎಂದು ಭರತ್ ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ