ಬೆಂಗಳೂರಿನಲ್ಲಿ ಇದೇನಿದು ವಿಚಿತ್ರ ಮಂಕಿ ಕ್ಯಾಪ್ ಕಳ್ಳರು! ಮೆಡಿಕಲ್ ಸ್ಟೋರ್​​ಗಳೇ ಇವರ ಟಾರ್ಗೆಟ್

ಮಧ್ಯರಾತ್ರಿಯೇ ಟೂಲ್ಸ್ ಕಿಟ್ ಹಿಡಿದು ಕಾರ್ಯಾಚರಣೆಗೆ ಇಳಿಯುವ ಈ ಮಂಕಿ ಕ್ಯಾಪ್ ಕಳ್ಳರಿಗೆ ರಾಜಧಾನಿಯ ಮೆಡಿಕಲ್ ಸ್ಟೋರ್ ಗಳೇ ಟಾರ್ಗೆಟ್ ಆಗಿವೆ. ಒಂದೇ ಒಂದು ರಾಡ್ ನಲ್ಲಿ ಶೆಟರ್ ಲಾಕ್ ಬ್ರೇಕ್ ಮಾಡಿ, ಸೆಕೆಂಡುಗಳಲ್ಲಿ ಮಿಂಚಿನಂತೆ ಕಳ್ಳತನ ಮಾಡ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿದೆ ಕಳ್ಳರ ಈ ಕರಾಮತ್ತು. ಬೈಕ್ ಗಳಲ್ಲಿ ಬರ್ತಾರೆ ಕ್ಷಣಾರ್ಧದಲ್ಲಿ ಶೆಟರ್ ಮುರೀತಾರೆ. ಶೆಟರ್ ಮುರಿದು ಕಳ್ಳ ಬೆಕ್ಕಿನಂತೆ ಮೆಡಿಕಲ್ ಮಳಿಗೆಯಲ್ಲಿ ಕೈಚಳಕ ತೋರುತ್ತಾರೆ.

ಬೆಂಗಳೂರಿನಲ್ಲಿ ಇದೇನಿದು ವಿಚಿತ್ರ ಮಂಕಿ ಕ್ಯಾಪ್ ಕಳ್ಳರು! ಮೆಡಿಕಲ್ ಸ್ಟೋರ್​​ಗಳೇ ಇವರ ಟಾರ್ಗೆಟ್
ಬೆಂಗಳೂರಿನಲ್ಲಿ ಇದೇನಿದು ವಿಚಿತ್ರ ಮಂಕಿ ಕ್ಯಾಪ್ ಕಳ್ಳರು
Follow us
| Updated By: ಸಾಧು ಶ್ರೀನಾಥ್​

Updated on:Sep 06, 2023 | 12:17 PM

ಬೆಂಗಳೂರು, ಸೆಪ್ಟೆಂಬರ್​ 6: ರಾಜಧಾನಿ ಬೆಂಗಳೂರಿನಲ್ಲಿ (Bangalore) ವಿಚಿತ್ರ ಮಂಕಿ ಕ್ಯಾಪ್ ಕಳ್ಳರು (Monkey cap thieves) ಫೀಲ್ಡಿಗೆ ಇಳಿದಿದ್ದಾರೆ. ಮೆಡಿಕಲ್ ಸ್ಟೋರ್ ( medical shops) ಗಳೇ ಇವರ ಟಾರ್ಗೆಟ್ ಆಗಿವೆ. ಮೆಡಿಕಲ್ ಸಿಬ್ಬಂದಿ ಒಳಗಿದ್ದಾಗಲೇ ಶೆಟರ್ ಮುರಿದು ಒಳಗೆ ಎಂಟ್ರಿ ಕೊಡುವ ಧಾರ್ಷ್ಟ್ಯ ತೋರುತ್ತಿದ್ದಾರೆ. ಒಬ್ಬ ರೋಡ್ ನಲ್ಲಿ ಅಬ್ಸರ್ವ್ ಮಾಡ್ತಾನೆ, ಮತ್ತೊಬ್ಬ ಶೆಟರ್ ಮುರೀತಾನೆ. ಇದು ಮಂಕಿ ಕ್ಯಾಪ್ ಕಳ್ಳರ ಮೋಡಸ್​​ ಆಪರೆಂಡಿ. ಅಂದಹಾಗೆ ಸಿಬ್ಬಂದಿ ಮತ್ತು ಕಳ್ಳನ ನಡುವೆ ನಡುರಾತ್ರಿ ಈ ಹೈಡ್ರಾಮ ನಡೆಯುತ್ತಿದೆ.

ಮಧ್ಯರಾತ್ರಿಯೇ ಟೂಲ್ಸ್ ಕಿಟ್ ಹಿಡಿದು ಕಾರ್ಯಾಚರಣೆಗೆ ಇಳಿಯುವ ಈ ಮಂಕಿ ಕ್ಯಾಪ್ ಕಳ್ಳರಿಗೆ ರಾಜಧಾನಿಯ ಮೆಡಿಕಲ್ ಸ್ಟೋರ್ ಗಳೇ ಟಾರ್ಗೆಟ್ ಆಗಿವೆ. ಒಂದೇ ಒಂದು ರಾಡ್ ನಲ್ಲಿ ಶೆಟರ್ ಲಾಕ್ ಬ್ರೇಕ್ ಮಾಡಿ, ಸೆಕೆಂಡುಗಳಲ್ಲಿ ಮಿಂಚಿನಂತೆ ಕಳ್ಳತನ ಮಾಡ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿದೆ ಕಳ್ಳರ ಈ ಕರಾಮತ್ತು. ಬೈಕ್ ಗಳಲ್ಲಿ ಬರ್ತಾರೆ ಕ್ಷಣಾರ್ಧದಲ್ಲಿ ಶೆಟರ್ ಮುರೀತಾರೆ. ಶೆಟರ್ ಮುರಿದು ಕಳ್ಳ ಬೆಕ್ಕಿನಂತೆ ಮೆಡಿಕಲ್ ಮಳಿಗೆಯಲ್ಲಿ ಕೈಚಳಕ ತೋರುತ್ತಾರೆ. ವಿಜಯನಗರದ ಮೆಡಿಕಲ್ ಸ್ಟೋರ್ ನಲ್ಲಿ ಕಳ್ಳರ ಈ ಕೈಚಳಕ ಕಂಡುಬಂದಿದೆ. ಆಗಸ್ಟ್ 31 ರ ಮಧ್ಯರಾತ್ರಿ ಇಂತಹ ಘಟನೆ ನಡೆದಿದೆ.

ಇದನ್ನೂ ಓದಿ: ಮದುವೆಯಾಗಲೆಂದು ಶ್ರಾವಣ ಮಾಸ ಪೂರ್ತಿ ಶಿವಲಿಂಗಕ್ಕೆ ಅಭಿಷೇಕ, ಬೇಡಿಕೆ ಈಡೇರದಿದ್ದಾಗ ಲಿಂಗವನ್ನೇ ಕದ್ದ ಭಕ್ತ

ಸಿನಿಮೀಯ ರೀತಿಯಲ್ಲಿ ಹಣ ಕದ್ದು ಎಸ್ಕೇಪ್ ಆಗಿದ್ದಾರೆ ಮಂಕಿ ಕ್ಯಾಪ್ ಕಳ್ಳರು. ಅಂಗಡಿಯಲ್ಲಿ ಸಿಬ್ಬಂದಿಯಿದ್ದರೂ ಶೆಟರ್ ಮುರಿದು ಕಳ್ಳತನ‌ ಮಾಡಿದ್ದಾರೆ. ಆದರೆ ಅಂಗಡಿ ಸಿಬ್ಬಂದಿ ಕಂಡು ಪೇರಿಕಿತ್ತು ಓಡಿದ್ದಾರೆ ಕಳ್ಳರು. ಓಡಿಹೋದರೂ ಮತ್ತೆ ತಮ್ಮ ಟೂಲ್ಸ್ ಕಿಟ್​​ಗಾಗಿ ಮಳಿಗೆಗೆ ವಾಪಸ್​ ಬಂದಿದ್ದಾರೆ ಈ ಕಳ್ಳರು. ಮಾಲೀಕನನ್ನ ನೋಡಿ ಕ್ಷಣಾರ್ಧದಲ್ಲಿ ಮತ್ತೆ ಪರಾರಿಯಾಗಿದ್ದಾರೆ. ವಿಜಯನಗರದಲ್ಲಿ ಇಂತಹ ಕಳ್ಳರ ಹಾವಳಿ ಹೆಚ್ಚಾಗಿದೆ. ಸದ್ಯಕ್ಕೆ, ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಯುಪಡೆ ಕಾಂಪೌಂಡ್​​ ಒಳಭಾಗದಲ್ಲಿಯೇ 25 ಗಂಧದ ಮರಗಳ ಕದ್ದೊಯ್ದ ಮರಗಳ್ಳರು!

ಬೆಂಗಳೂರಿನಲ್ಲಿ ಗಂಧದ ಮರ ಕಳ್ಳರ‌ ಹಾವಳಿ ಮತ್ತೆ ಹೆಚ್ಚಾಗಿದೆ. ಏರ್ ಫೋರ್ಸ್ ಕಾಂಪೌಂಡ್ ಒಳಭಾಗದಲ್ಲಿರುವ ಗಂಧದ ಮರಗಳೇ ಮಂಗಮಾಯವಾಗಿಬಿಟ್ಟಿವೆ. ತುಮಕೂರು ರಸ್ತೆ ಬಳಿಯಿರುವ ಏರ್ ಫೋರ್ಸ್ ಒಳಭಾಗದಲ್ಲಿಯೇ ಕಳ್ಳತನ ನಡೆದಿದೆ. 25 ಕ್ಕು ಹೆಚ್ಚು‌ ಮರಗಳನ್ನು ಕದ್ದೊಯ್ದಿದ್ದಾರೆ ಮರಗಳ್ಳರು. ಏರ್ ಪೋರ್ಸ್ ಕಾಂಪೌಂಡ್ ಮತ್ತು ಪಕ್ಕದಲ್ಲಿರುವ CMTC ಕಾಂಪೌಂಡ್ ನಲ್ಲಿ ಈ ಘಟನೆ ನಡೆದಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಮರಗಳು ಕಳ್ಳತನವಾಗಿವೆ. ಆರ್.ಎಂ.ಸಿ‌ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂಜಯನಗರದದಲ್ಲಿ ಮನೆಗಳವು: ಆರೋಪಿ ಸುಬ್ರತೋಮಂಡಲ್ ಬಂಧನ

ಸಂಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಮನೆಗಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಸುಬ್ರತೋಮಂಡಲ್ ಬಂಧಿತ ಆರೋಪಿ. ಆಗಸ್ಟ್ 27 ರಂದು ಮಧ್ಯಾಹ್ನ ಸಂಜಯನಗರದ ಪಟೇಲಪ್ಪ ಲೇಔಟ್ ನಲ್ಲಿ ಮನೆಗಳವು ಘಟನೆ ನಡೆದಿತ್ತು. ಮನೆ ಮಾಲೀಕರು ತಮ್ಮ ಸ್ನೇಹಿತನ ಮನೆಗೆ ದೇವರ ಪೂಜೆಗೆ ತೆರಳಿದ್ದರು. ಈ ವೇಳೆ ಕಳ್ಳ, ಮನೆ ಡೋರ್ ಮುರಿದು ಒಳಗೆ ಹೋಗಿದ್ದ. ಮನೆಯಲ್ಲಿದ್ದ 211 ಗ್ರಾಂ ಚಿನ್ನ, 2 ಲಕ್ಷ ನಗದು ಹಣ ಕಳ್ಳತನವಾಗಿತ್ತು. ಆರೋಪಿಯನ್ನು ಬಂಧಿಸಿ 211 ಗ್ರಾಂ ಚಿನ್ನ ಮತ್ತು 75 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.

ಧರ್ಮಸ್ಥಳದಲ್ಲಿರುವಾಗಲೇ ಕುಟುಂಬಸ್ಥರಿಗೆ ಬೆಂಗಳೂರಿನಲ್ಲಾಗಿದ್ದ ಕಳ್ಳತನದ ಶಾಕ್ :

ಬಾಗಲಗುಂಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮನೆಗಳವು ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ರವಿ, ಇಮ್ರಾನ್ ಮತ್ತು ಜಯಕುಮಾರ್ ಬಂಧಿತರು. ಬಂಧಿತರಿಂದ 7 ಲಕ್ಷ ಮೌಲ್ಯದ 130 ಗ್ರಾಂ ಚಿನ್ನ, 1.8 ಲಕ್ಷ ನಗದು ಹಣ ವಶಕ್ಕೆ ಪಡೆಯಲಾಗಿದೆ. ಬಾಗಲಗುಂಟೆಯ ಶೆಟ್ಟಿಹಳ್ಳಿಯಲ್ಲಿ ಈ ಮೂವರೂ ಕಳ್ಳತನ ನಡೆಸಿದ್ದರು. ಮನೆ ಮಾಲೀಕರು ಧರ್ಮಸ್ಥಳಕ್ಕೆ ತೆರಳಿದ್ದ ವೇಳೆ ಕೃತ್ಯವೆಸಗಿದ್ದರು. ಆಗಸ್ಟ್ 13 ರಂದು ಘಟನೆ ನಡೆದಿತ್ತು. ಕುಟುಂಬದವರು ಹ್ಯಾಂಗಿಂಗ್ ಲಾಕ್ ಹಾಕಿ ತೆರಳಿದ್ದರು.

ಹಾಗಾಗಿ ಮನೆಯಲ್ಲಿ ಯಾರು‌ ಇಲ್ಲ ಎಂದು ಕಳ್ಳರ ಕರಾಮತ್ತು ನಡೆದಿತ್ತು. ಬೀಗ ಒಡೆದಿರೋದನ್ನ ನೋಡಿದ ಕಟ್ಟಡ ಮಾಲೀಕ ಕುಟುಂಬಸ್ಥರಿಗೆ ವಿಷಯ ಹೇಳಿದ್ದರು. ಧರ್ಮಸ್ಥಳದಲ್ಲಿರುವಾಗಲೇ ಕುಟುಂಬಸ್ಥರಿಗೆ ಕಳ್ಳತನದ ಶಾಕ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನೂ ಬಂಧಿಸಿ ಚಿನ್ನಾಭರಣ, ನಗದು ವಶಕ್ಕೆ ಪಡೆದಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:32 am, Wed, 6 September 23

ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ