ಮದುವೆಯಾಗಲೆಂದು ಶ್ರಾವಣ ಮಾಸ ಪೂರ್ತಿ ಶಿವಲಿಂಗಕ್ಕೆ ಅಭಿಷೇಕ, ಬೇಡಿಕೆ ಈಡೇರದಿದ್ದಾಗ ಲಿಂಗವನ್ನೇ ಕದ್ದ ಭಕ್ತ
ಉತ್ತರ ಪ್ರದೇಶದ ಕೌಶುಂಬಿಯಲ್ಲಿ ವಿಚಿತ್ರ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಶ್ರಾವಣ ಮಾಸ ಆರಂಭವಾದಾಗಿನಿಂದ ಶಿವನ ಭಕ್ತನೊಬ್ಬ ನಿತ್ಯ ಶಿವಲಿಂಗಕ್ಕೆ ಭಯಕ್ತಿಯಿಂದ ಪೂಜೆ ಮಾಡುತ್ತಿದ್ದ, ತನಗೆ ಮದುವೆಯಾಗುವಂತೆ ಆಶೀರ್ವಾದ ಮಾಡು ಎಂದು ಬೇಡಿಕೊಳ್ಳುತ್ತಿದ್ದ ಶ್ರಾವಣ ಮಾಸ ಮುಗಿದರೂ ಮದುವೆಯಾಗದ ಹಿನ್ನೆಲೆಯಲ್ಲಿ ಶಿವಲಿಂಗವನ್ನೇ ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಕೌಶುಂಬಿಯಲ್ಲಿ ವಿಚಿತ್ರ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಶ್ರಾವಣ ಮಾಸ ಆರಂಭವಾದಾಗಿನಿಂದ ಶಿವನ ಭಕ್ತನೊಬ್ಬ ನಿತ್ಯ ಶಿವಲಿಂಗ(Shivling)ಕ್ಕೆ ಭಯಕ್ತಿಯಿಂದ ಪೂಜೆ ಮಾಡುತ್ತಿದ್ದ, ತನಗೆ ಮದುವೆಯಾಗುವಂತೆ ಆಶೀರ್ವಾದ ಮಾಡು ಎಂದು ಬೇಡಿಕೊಳ್ಳುತ್ತಿದ್ದ ಶ್ರಾವಣ ಮಾಸ ಮುಗಿದರೂ ಮದುವೆಯಾಗದ ಹಿನ್ನೆಲೆಯಲ್ಲಿ ಶಿವಲಿಂಗವನ್ನೇ ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹೇವಾಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ, ಕುಮ್ಹಿಯಾವಾನ್ ಮಾರುಕಟ್ಟೆಯ ನಿವಾಸಿ 27 ವರ್ಷದ ಛೋಟು ಮದುವೆಯಾಗಲು ಬಯಸಿದ್ದ, ಹಾಗೆಯೇ ದೇವರಲ್ಲಿ ಪ್ರತಿಜ್ಞೆಯನ್ನೂ ಮಾಡಿದ್ದ, ಪ್ರತಿದಿನ ದೇವರಿಗೆ ಜಲಾಭಿಷೇಕವನ್ನು ಮಾಡುತ್ತಿದ್ದ, ಶ್ರಾವಣ ತಿಂಗಳು ಮುಗಿದರೂ ಹುಡುಗಿ ಸಿಗದಿದ್ದಾಗ ಶಿವಲಿಂಗವನ್ನೇ ಕದ್ದಿದ್ದಾನೆ.
ಶಿವಲಿಂಗವನ್ನು ದೇವಾಲಯದ ಹೊರಗೆ ಇಟ್ಟು ಬಿದಿರು ಹಾಗೂ ಎಲೆಗಳಿಂದ ಮುಚ್ಚಿದ್ದ, ಗ್ರಾಮದ ಕೆಲವರು ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗ ಶಿವಲಿಂಗ ಕಾಣೆಯಾಗಿದ್ದನ್ನು ಕಂಡು ಬೆಚ್ಚಿಬಿದ್ದಿದ್ದರು. ಅರ್ಚಕರ ಮಾಹಿತಿ ಮೇರೆಗೆ ಪೊಲೀಸರು ತನಿಕೆ ನಡೆಸಿದಾಗ ಶಿವಲಿಂಗ ಕದಿಯುವಲ್ಲಿ ಛೋಟು ಕೈವಾಡವಿದೆ ಎನ್ನುವುದು ತಿಳಿದುಬಂದಿತ್ತು.
ಮತ್ತಷ್ಟು ಓದಿ: 9 ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯ ಮಾಂಗಲ್ಯ ಸರವನ್ನೇ ಕಳ್ಳತನ ಮಾಡಿದ ಮಗಳು: ಬಳಿಕ ಆಗಿದ್ದೇನು?
ಪೊಲೀಸರು ಛೋಟುವನ್ನು ವಿಚಾರಗಳೆಗೊಳಪಡಿಸಿದಾಗ ಶಿವಲಿಂಗವನ್ನು ಕದ್ದು ದೇವಸ್ಥಾನದ ಹೊರಗೆ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಶಿವಲಿಂಗವನ್ನು ವಶಪಡಿಸಿಕೊಂಡು ಮತ್ತೆ ಪ್ರತಿಷ್ಠಾಪನೆ ಮಾಡಲಾಯಿತು, ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 379, 411ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ