ಇಂದು ಕೃಷ್ಣ ಜನ್ಮಾಷ್ಟಮಿ: ಇಸ್ಕಾನ್ ಸುತ್ತಮುತ್ತ ಬಸ್ ನಿಷೇಧ, ಬಸ್ ಸಂಚಾರ ಬದಲಾವಣೆ ಹೀಗಿದೆ ನೋಡಿ
ISKCON Temple: ಇಸ್ಕಾನ್ ದೇವಸ್ಥಾನಕ್ಕೆ ಭಕ್ತರು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿರಲೆಂದು ಇಸ್ಕಾನ್ ಸುತ್ತಮುತ್ತ ಬಸ್ ಸಂಚಾರವನ್ನು ನಿಷೇಧ ಮಾಡಲಾಗಿದೆ. ಇಸ್ಕಾನ್ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಇಂದು ಮತ್ತು ನಾಳೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಸ್ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಇಸ್ಕಾನ್ ಗೆ ಹಲವು ಭಕ್ತರು, ಗಣ್ಯರ ಆಗಮನ ಹಿನ್ನೆಲೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಈ ಸೂಚನೆ ನೀಡಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 6: ಇಂದು ನಾಡಿನಾದ್ಯಂತ ಕೃಷ್ಣ ಜನ್ಮಾಷ್ಟಮಿ (Krishna Janmashtami 2023) ಸಂಭ್ರಮ. ಕೃಷ್ಣನ ಭಕ್ತರು ವಿಜೃಂಭಣೆಯಿಂದ ಜನ್ಮಾಷ್ಟಮಿ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದಾರೆ. ಇತ್ತ ಸರ್ಕಾರವೂ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸಲು ಟೊಂಕ ಕಟ್ಟಿ ನಿಂತಿದೆ. ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ರಸ್ತೆ ರಸ್ತೆಗಳಲ್ಲೂ ಮನೆ ಮಾಡಿದೆ. ಹಾಗಾಗಿ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಗೆ ಯಾವುದೇ ಧಕ್ಕೆ ಬರಬಾರದೆಂದು ಬಸ್ ವ್ಯವಸ್ಥೆಯನ್ನು ಸುಗಮಗೊಳಿಸಲು ಇಂದು ಮತ್ತು ನಾಳೆ ಮಟ್ಟಿಗೆ ಒಂದಷ್ಟು ಏರ್ಪಾಡುಗಳನ್ನು ಮಾಡಿಕೊಂಡಿದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ಗಳ (KSRTC BMTC Bus) ಸಂಚಾರದಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿದೆ (Traffic restrictions for Janmashtami around ISKCON).
ಅದರಲ್ಲೂ ಮುಖ್ಯವಾಗಿ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಭಕ್ತರು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿರಲೆಂದು ಇಸ್ಕಾನ್ ಸುತ್ತಮುತ್ತ ಬಸ್ ಸಂಚಾರವನ್ನು ನಿಷೇಧ ಮಾಡಲಾಗಿದೆ. ರಾಜ್ ಕುಮಾರ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ (West of Chord road) ಬಸ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಇಸ್ಕಾನ್ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಇಂದು ಮತ್ತು ನಾಳೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಯಶವಂತಪುರ ಕಡೆಯಿಂದ ರಾಜ್ ಕುಮಾರ್ ರಸ್ತೆ-ಮೆಜೆಸ್ಟಿಕ್ ಕಡೆಗೆ ಮಾಮೂಲು ಮಾರ್ಗದಲ್ಲಿ ಸಂಚರಿಸುವ ಬದಲು ಯಶವಂತಪುರ-ಮಾರಪ್ಪನಹಳ್ಳಿ ಫ್ಲೈ ಓವರ್ ಮೂಲಕ BHEL ಅಂಡರ್ ಪಾಸ್, ಕೆ.ಸಿ.ಜನರಲ್ ಆಸ್ಪತ್ರೆಯ ಮಾರ್ಗವಾಗಿ ಬಸ್ಗಳು ಸಂಚಾರ ಮಾಡಲಿವೆ.
ಇದನ್ನೂ ಓದಿ: ಇಸ್ಕಾನ್ ಗೆ ಶ್ರೀರಂಗಪಟ್ಟಣದಲ್ಲಿ ಜಮೀನು ಮಂಜೂರು: ಹರಾಜಿನ ಬದಲು ಮಂಜೂರಾತಿ ಹೇಗೆ ಮಾಡುತ್ತೀರಿ
ಇನ್ನು ಯಶವಂತಪುರ, ವೆಸ್ಟ್ ಆಫ್ ಕಾರ್ಡ್ ರೋಡ್, ಮಹಾಲಕ್ಷ್ಮಿ ಲೇ ಔಟ್ ಕಡೆಯೂ ಮಾರ್ಗ ಬದಲಾವಣೆ ಮಾಡಲಾಗಿದೆ. ರಾಜ್ ಕುಮಾರ್ ರಸ್ತೆ ಮೂಲಕ ಸಾಗಿ 10 ನೇ ಕ್ರಾಸ್ ನಲ್ಲಿ ತಿರುವು ಪಡೆಯಲು ಸೂಚನೆ ನಿಡಲಾಗಿದೆ. ಇಸ್ಕಾನ್ ಗೆ ಹಲವು ಭಕ್ತರು, ಗಣ್ಯರ ಆಗಮನ ಹಿನ್ನೆಲೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಈ ಸೂಚನೆ ನೀಡಲಾಗಿದೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ