ಸೋಮಶೇಖರ್ ಜಾಮೂನು ತಿಂದಿದ್ದು ನಿಜ ಆದರೆ ವಿಷ ಕುಡಿಯುವ ಪ್ರಶ್ನೆ ಎಲ್ಲಿಂದ ಬಂತು? ಕೆಎಸ್ ಈಶ್ವರಪ್ಪ

ಸೋಮಶೇಖರ್ ಜಾಮೂನು ತಿಂದಿದ್ದು ನಿಜ ಆದರೆ ವಿಷ ಕುಡಿಯುವ ಪ್ರಶ್ನೆ ಎಲ್ಲಿಂದ ಬಂತು? ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 08, 2023 | 6:27 PM

ಸೋಮಶೇಖರ್ ಅವರನ್ನು ಪಕ್ಷ ಬಿಟ್ಟುಹೋಗಿ ಅಂತ ತಾನು ಯಾವತ್ತೂ ಹೇಳಿಲ್ಲ ಅವರು ಪಕ್ಷಕ್ಕೆ ಬಂದಾಗ ಜಾಮೂನು ತಿಂದಿದ್ದು ನಿಜ, ಯಾಕೆಂದರೆ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾದರು, ಎಲ್ಲ ಸವಲತ್ತುಗಳನ್ನು ಅನುಭವಿಸಿದರು ಮತ್ತು ಮತ್ತೊಮ್ಮೆ ಶಾಸಕರೂ ಅಗಿದ್ದಾರೆ ಎಂದು ಈಶ್ವರಪ್ಪ ಹೇಳಿದರು,

ಬೆಂಗಳೂರು: 2019 ರಲ್ಲಿ ಬಿಜೆಪಿಗೆ ವಲಸೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ವಿಷಯದಲ್ಲಿ ಪಕ್ಷದ ಹಿರಿಯ ನಾಯಕ ಕೆಎಸ್ ಈಶ್ವರಪ್ಪನವರಿಗೆ (KS Eshwarappa) ಅಸಹನೆ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಪಕ್ಷ ಮತ್ತು ಅದರ ನಾಯಕರ ವಿರುದ್ಧ ಪದೇಪದೆ ಟೀಕೆಗಳನ್ನು ಮಾಡುತ್ತಿರುವ ಯಶವಂತಪುರದ ಶಾಸಕ ಎಸ್ ಟಿ ಸೋಮಶೇಖರ್ (SR Somashekhar) ಮೇಲೆ ವಾಗ್ದಾಳಿ ನಡೆಸಿದರು. ಬಿಜೆಪಿಯವರು ಪಕ್ಷಕ್ಕೆ ಬರಮಾಡಿಕೊಳ್ಳುವಾಗ ಜಾಮೂನು ತಿನ್ನಿಸುತ್ತಾರೆ ಕಳಿಸುವಾಗ ವಿಷ ಕುಡಿಸುತ್ತಾರೆ ಅಂತ ಹೇಳಿರುವುದಕ್ಕೆ ವ್ಯಗ್ರರಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಸೋಮಶೇಖರ್ ಅವರನ್ನು ಪಕ್ಷ ಬಿಟ್ಟುಹೋಗಿ ಅಂತ ತಾನು ಯಾವತ್ತೂ ಹೇಳಿಲ್ಲ ಅವರು ಪಕ್ಷಕ್ಕೆ ಬಂದಾಗ ಜಾಮೂನು ತಿಂದಿದ್ದು ನಿಜ, ಯಾಕೆಂದರೆ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾದರು, ಎಲ್ಲ ಸವಲತ್ತುಗಳನ್ನು ಅನುಭವಿಸಿದರು ಮತ್ತು ಮತ್ತೊಮ್ಮೆ ಶಾಸಕರೂ ಅಗಿದ್ದಾರೆ ಎಂದರು. ಆದರೆ ವಿಷದ ಮಾತು ಎಲ್ಲಿಂದ ಬಂತು? ಅವರೇನು ಪಕ್ಷ ಬಿಟ್ಟಿಹೋಗಿದ್ದಾರೆಯೇ? ಬಿಜೆಪಿ ಬಿಟ್ಟು ಹೋಗುವಾಗ ವಿಷ ಕುಡಿಸುತ್ತಾರೆ ಅಂತ ಅವರು ಹೇಗೆ ಹೇಳುತ್ತಾರೆ? ಬಸವರಾಜ ಬೊಮ್ಮಾಯಿ (Basavaraj Bommai) ಸಹ ಬೇರೆ ಪಕ್ಷದಿಂದ ಬಂದವರು, ಆದರೆ ಪಕ್ಷ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಿತು ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ