ಅನ್ಯಾಯ ಮುಂದುವರೆದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು, ನಾನು ಕಳಂಕ ರಹಿತ: ಉಮೇಶ ಕತ್ತಿ

| Updated By: Skanda

Updated on: Jul 13, 2021 | 7:48 AM

ಉತ್ತರ ಕರ್ನಾಟಕಕ್ಕೆ ತೊಂದರೆಯಾಗುವುದು ಮುಂದುವರೆದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುತ್ತೇನೆ. ಹಾಗಂತ ಕರ್ನಾಟಕವನ್ನು ಒಡೆಯಬೇಕು ಎನ್ನುವುದು ನನ್ನ ಉದ್ದೇಶವಲ್ಲ. ಅಖಂಡ ಕರ್ನಾಟಕದಲ್ಲಿದ್ದು ಅದನ್ನು ಆಳಬೇಕು ಎನ್ನುವ ಬಯಕೆ ನನಗಿದೆ: ಉಮೇಶ ಕತ್ತಿ

ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ವ್ಯಕ್ತಪಡಿಸಿರುವ ಸಚಿವ ಉಮೇಶ ಕತ್ತಿ, ಉತ್ತರ ಕರ್ನಾಟಕದವರಿಗೆ ಪ್ರಾಧಾನ್ಯತೆ ನೀಡಬೇಕು. ನನಗೆ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ. ನಮಗೆ ಸಿಗಬೇಕಾದ ನ್ಯಾಯ ಸಿಗದಿದ್ದಲ್ಲಿ ಧ್ವನಿ ಎತ್ತುತ್ತೇವೆ ಎನ್ನುವ ಮೂಲಕ ಸರ್ಕಾರಕ್ಕೆ ಬಿಸಿ ತಾಕಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ ತೊಂದರೆಯಾಗುವುದು ಮುಂದುವರೆದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುತ್ತೇನೆ. ಹಾಗಂತ ಕರ್ನಾಟಕವನ್ನು ಒಡೆಯಬೇಕು ಎನ್ನುವುದು ನನ್ನ ಉದ್ದೇಶವಲ್ಲ. ಅಖಂಡ ಕರ್ನಾಟಕದಲ್ಲಿದ್ದು ಅದನ್ನು ಆಳಬೇಕು ಎನ್ನುವ ಬಯಕೆ ನನಗಿದೆ. ಆದರೆ, ತೊಂದರೆಯಾದರೆ ಪ್ರತ್ಯೇಕತೆ ಕೂಗು ಎಬ್ಬಿಸುವೆ. ಈಗ ಸದ್ಯಕ್ಕೆ ಅಖಂಡ ಕರ್ನಾಟಕದಲ್ಲಿ ಬದುಕಿದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ಆಗುವ ಆಸೆ ಇದೆ. ನಾನು 8 ಸಲ ಶಾಸಕ, 6 ಇಲಾಖೆ ನಿರ್ವಹಿಸಿದವನು. ನನಗೆ ಅನುಭವವೂ ಇದ್ದು, ಯಾವುದೇ ಕಪ್ಪು ಚುಕ್ಕೆ ಇಲ್ಲ. ಕಳಂಕರಹಿತ ಶಾಸಕ, ಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಪಕ್ಷ ತೀರ್ಮಾನಿಸಿದರೆ ಮುಖ್ಯಮಂತ್ರಿ ಆಗುತ್ತೇನೆ. ಸಿಎಂ ಆದ ನಂತರ ಪ್ರಧಾನಿಯಾಗುವ ಆಸೆಯೂ ಇರುತ್ತದೆ ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಉಮೇಶ ಕತ್ತಿ ಸಿಎಂ ಆಗುವ ಯೋಗ್ಯತೆ ನನಗೆ ಇದೆ. ಈ ಸಲ ಉತ್ತರ ಕರ್ನಾಟಕದವರಿಗೆ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ. ನಾನೇ ಮುಖ್ಯಮಂತ್ರಿ ಆಗಬೇಕು ಎಂದೇನಲ್ಲ. ನನಗೆ ಮುಖ್ಯಮಂತ್ರಿಯಾಗಲು ಇನ್ನೂ 15 ವರ್ಷ ಸಮಯ ಇದೆ. ಈಗ 60 ವರ್ಷ, ಇನ್ನು 15 ವರ್ಷದಲ್ಲಿ ಸಿಎಂ ಆಗಬಹುದು. ಅರವಿಂದ ಬೆಲ್ಲದ್ ಅವರ ತಂದೆ ಶಾಸಕರಾಗಿದ್ದರು ಈಗ ಬೆಲ್ಲದ್ ಅವರೂ ಶಾಸಕರಾಗಿದ್ದಾರೆ. ಅವರು ಯಾಕೆ ಮುಖ್ಯಮಂತ್ರಿ ಆಗಬಾರದು, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಎಲ್ಲರೂ ಮುಖ್ಯಮಂತ್ರಿ ಆಗಬಹುದು ಎಂದು ಪ್ರತಿಕ್ರಿಯಿಸುವ ಮೂಲಕ ಉತ್ತರ ಕರ್ನಾಟಕದವರಿಗೆ ಮುಖ್ಯಮಂತ್ರಿ ಹುದ್ದೆ ಸಿಗಬೇಕು ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ:
ಯಾವುದೇ ಕಪ್ಪು ಚುಕ್ಕೆ ಇಲ್ಲ, ನನಗೆ ಅನುಭವ ಚೆನ್ನಾಗಿದೆ, ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ: ಸಚಿವ ಉಮೇಶ ಕತ್ತಿ

Follow us on