Anna Bhagya: ರಾಜ್ಯದಲ್ಲಿ ಅಕ್ಕಿ ಇದ್ದರೇ ಟೆಂಡರ್​ ಮೂಲಕ ಖರೀದಿ: ಸಿಎಂ ಸಿದ್ದರಾಮಯ್ಯ

ಜುಲೈ 1 ರಿಂದ 10 ಕೇಜಿ ಅಕ್ಕಿ ಕೊಡಬೇಕು‌ ಅಂತ ಇದೆ. ಪ್ರಮಾಣಿಕವಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ನಾವು ಉಚಿತವಾಗಿ ತಲಾ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ಆಂಧ್ರಪ್ರದೇಶ, ಪಂಜಾಬ್​, ತೆಲಂಗಾಣದಲ್ಲಿ ಅಕ್ಕಿ ಸಿಗುತ್ತಿಲ್ಲ. ಎಲ್ಲಿ ಭತ್ತ ಬೆಳೆಯುತ್ತಿದ್ದಾರೋ ಅಲ್ಲೇ ಅಕ್ಕಿ ಸಿಗುತ್ತಿಲ್ಲ. ಅಕ್ಕಿ ಕೊಡಲು ಪಂಜಾಬ್ ಸರ್ಕಾರ​ ಸಿದ್ಧವಿದೆ ಎಂದು ಆಪ್​ ಹೇಳಿಕೆ ವಿಚಾರವಾಗಿ ಮಾತನಾಡಿ ಪಂಜಾಬ್​ನ ಆಪ್​ ಸರ್ಕಾರದ ಜತೆ ನಮ್ಮ ಮುಖ್ಯ ಕಾರ್ಯದರ್ಶಿ ಮಾತಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Anna Bhagya: ರಾಜ್ಯದಲ್ಲಿ ಅಕ್ಕಿ ಇದ್ದರೇ ಟೆಂಡರ್​ ಮೂಲಕ ಖರೀದಿ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us
ವಿವೇಕ ಬಿರಾದಾರ
|

Updated on:Jun 19, 2023 | 1:00 PM

ಬೆಂಗಳೂರು: ರಾಜ್ಯದಲ್ಲಿ ಸದ್ಯ ಸ್ವಲ್ಪವೂ ಅಕ್ಕಿ (Rice) ದಾಸ್ತಾನು ಇಲ್ಲ. ರಾಗಿ, ಜೋಳ ಕೊಡಿ ಅಂತ ಕೆಲವರು ಸಲಹೆ ಕೊಡುತ್ತಾರೆ. ಆದರೆ ರಾಗಿ, ಜೋಳ ದಾಸ್ತಾನು ಇಲ್ಲ. ಜುಲೈ 1ರಿಂದ ಅಕ್ಕಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರಾಜ್ಯದಲ್ಲಿ ಅಕ್ಕಿ ಇದ್ದರೆ ಟೆಂಡರ್​ ಮೂಲಕ ಖರೀದಿ ಮಾಡ್ತೇವೆ. ಇದರಿಂದ ರೈತರಿಗೆ ಸಹಾಯ ಆಗುತ್ತದೆ. ವಾರ್ಷಿಕ 1092 ಕೋಟಿ ರೂ. ಅಕ್ಕಿಗೆ ಬೇಕಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಅಕ್ಕಿ ಕೊಡಲು ಪಂಜಾಬ್ (Punjab) ಸರ್ಕಾರ​ ಸಿದ್ಧವಿದೆ ಎಂದು ಆಪ್​ ಹೇಳಿಕೆ ವಿಚಾರವಾಗಿ ಮಾತನಾಡಿ ಪಂಜಾಬ್​ನ ಆಪ್​ ಸರ್ಕಾರದ ಜತೆ ನಮ್ಮ ಮುಖ್ಯ ಕಾರ್ಯದರ್ಶಿ ಮಾತಾಡಿದ್ದಾರೆ. ನಮ್ಮ ರೇಟ್​​ಗೆ ಪಂಜಾಬ್ ಸರ್ಕಾರ ಅಕ್ಕಿ ಕೊಡಲಿದೆಯಾ? ಹಾಗೇನಾದರು ಇದ್ದರೆ ನಾವು ಮತ್ತೊಮ್ಮೆ ಮಾತನಾಡುತ್ತೇವೆ ಎಂದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜುಲೈ 1 ರಿಂದ ಕೊಡಬೇಕು‌ ಅಂತ ಇದೆ. ಪ್ರಮಾಣಿಕವಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ನಾವು ಉಚಿತವಾಗಿ ತಲಾ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ಆಂಧ್ರಪ್ರದೇಶ, ಪಂಜಾಬ್​, ತೆಲಂಗಾಣದಲ್ಲಿ ಅಕ್ಕಿ ಸಿಗುತ್ತಿಲ್ಲ. ಎಲ್ಲಿ ಭತ್ತ ಬೆಳೆಯುತ್ತಿದ್ದಾರೋ ಅಲ್ಲೇ ಅಕ್ಕಿ ಸಿಗುತ್ತಿಲ್ಲ. ಜೂ.12ರಂದು ಎಫ್​​ಸಿಐ ಅಕ್ಕಿ ಕೊಡ್ತೀವಿ ಎಂದು ಹೇಳಿದ್ದರು. ಆಮೇಲೆ ಅಕ್ಕಿ ಪೂರೈಸಲ್ಲ ಅಂತಾ ಪತ್ರ ಬರೆದಿದ್ದಾರೆ. ಇದನ್ನು ರಾಜಕೀಯ ಅಂತಾ ಹೇಳದೆ ಮತ್ತೇನು ಹೇಳಬೇಕು? ಕೇಂದ್ರ ಸರ್ಕಾರವೇನು ಪುಕ್ಕಟೆಯಾಗಿ ಅಕ್ಕಿ ಕೊಡುವುದಿಲ್ಲ. ಕೇಂದ್ರದಿಂದ ಅಕ್ಕಿ ಪೂರೈಕೆ ಮಾಡದಿರುವುದು ದೊಡ್ಡ ಷಡ್ಯಂತ್ರ. ಬಡವರು ಕಾಂಗ್ರೆಸ್ ಪರ ಇರುತ್ತಾರೆ ಅಂತ ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಡಿಕೆ ಶಿವಕುಮಾರ್-ಸಿದ್ದರಾಮಯ್ಯ ಅಧಿಕಾರ ಹಂಚಿಕೆ: ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ಬಡವರಿಗೆ ಅಕ್ಕಿ ಕೊಡಬೇಕಾದ ಕೆಲಸ ಈ‌ ಸರ್ಕಾರ ಮಾಡೇ ಮಾಡುತ್ತೆ. ಬಿಜೆಪಿಗೆ ಸ್ವಲ್ಪನಾದರೂ ಮಾನ ಮರ್ಯಾದೆ ಇದೆಯಾ? ಇವರು ಬಡವರ ವಿರೋಧಿ. ದುಡ್ಡು ಕೊಡುತ್ತೇವೆ ಅಂದರೂ ಕೊಡಲ್ಲ ಅಂತಿದ್ದಾರೆ. ಖಾಸಗಿಯವರಿಗೆ ಬೇಕಾದರೇ ಕೊಡುತ್ತಾರೆ. ಇದು‌ ದ್ವೇಷದ ರಾಜಕೀಯ. ಬಿಜೆಪಿ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಅಕ್ಕಿ ಏನು ಕೇಂದ್ರ ಸರ್ಕಾರ ಬೆಳೆಯುತ್ತಾ? ಜಾಗ ಇಟ್ಟಿಕೊಂಡು ಭತ್ತ, ಅಕ್ಕಿ ಬೆಳೆಯುತ್ತಿದ್ದಾರಾ? ಎಂದು ವಾಗ್ದಾಳಿ ಮಾಡಿದರು.

ಸಚಿವರಾದ ಮಹದೇವಪ್ಪ ಮತ್ತು ಎಂ.ಬಿ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಅಧಿಕಾರ ಹಂಚಿಕೆಯಲ್ಲಿ ಸಚಿವರಲ್ಲೇ ಗೊಂದಲ ವಿಚಾರವಾಗಿ ಗರಂ ಆದರು. ಹಾಗೇನಿಲ್ಲ, ಯಾರು ಹೇಳಿದರು? ಸರ್ಕಾರ ರಚನೆಯಾಗಿದೆ, ಸರಾಗವಾಗಿ ಸರ್ಕಾರ ನಡೆಯುತ್ತಿದೆ. ಯಾರಾದರೂ ಮಾತನಾಡಿದರೇ ಅವರನ್ನೇ ಕೇಳಿ ಎಂದು ಹೇಳಿದರು.

ಬಿಜೆಪಿ ಅವಧಿಯಲ್ಲಿ ಕೋಮು ಗಲಭೆಯಲ್ಲಿ ಮೃತಪಟ್ಟವರಿಗೆ 25 ಲಕ್ಷ ರೂ. ಪರಿಹಾರ ನೀಡಿದರು. ಆದರೆ ಎಲ್ಲರಿಗೂ ಪರಿಹಾರ ನೀಡಿಲ್ಲ, ಹಿಂದುಗಳಿಗೆ ಮಾತ್ರ ನೀಡಿದೆ. ಪ್ರವೀಣ್ ನೆಟ್ಟಾರು, ಹರ್ಷ ಸತ್ತಾಗ 25 ಲಕ್ಷ ಪರಿಹಾರ ನೀಡಿದರು. ಯಾವುದೇ ಸರ್ಕಾರವಾಗಲಿ ಎಲ್ಲರನ್ನೂ ಒಂದೇ ರೀತಿ ನೋಡಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿ ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ಸರ್ಕಾರದ ದುಡ್ಡು ಅಂದರೇ ಅದು ತೆರಿಗೆ ಹಣ, ಜನರ ದುಡ್ಡು ಎಂದು ಮಾತನಾಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Mon, 19 June 23