ವಿಜಯಪುರ: ಪರವಾನಗಿ ಇಲ್ಲದೇ ಗುಟ್ಕಾ ತಯಾರಿಸುತ್ತಿದ್ದ ಇಬ್ಬರನ್ನು ಜಿಲ್ಲೆಯ ಹಿಪ್ಪರಗಿ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಾದರ್ ಬಾಷಾ, ಬಸವರಾಜ್ ಆವಟಿ ಎಂಬುವವರೇ ಬಂಧಿತ ವ್ಯಕ್ತಿಗಳಾಗಿದ್ದು, ಉಳಿದ ಆರೋಪಿಗಳಾದ ಮುಬಾರಕ್, ಸಂಗಮೇಶ್ ಪರಾರಿಯಾಗಿದ್ದಾರೆ. ಅಕ್ರಮವಾಗಿ ತಯಾರಿಸಿದ್ದ 60 ಸಾವಿರಕ್ಕೂ ಹೆಚ್ಚು ಮೌಲ್ಯದ ಗುಟ್ಕಾ ವಸ್ತುಗಳನ್ನು ಬಂಧಿತ ವ್ಯಕ್ತಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ವ್ಯಕ್ತಿಗಳು ಪರವಾನಿಗೆ ಇಲ್ಲದೆ ಮಾವಾ ತಯಾರಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ದಾಳಿ ವೇಳೆ 35 ಕೆಜಿ ಮಾವಾ, 80ಕೆ.ಜಿ ಅಡಿಕೆ, 2ಕೆಜಿ ತಂಬಾಕು,23 ಕೆ.ಜಿ ಸುಣ್ಣ 2 ಮೊಬೈಲ್ ಸೇರಿ 60 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಗುಟಖಾ ಜಫ್ತಿ ಮಾಡಿಕೊಳ್ಳಲಾಗಿದೆ.
ಲಾಕ್ಡೌನ್ ಇದ್ದರೂ ಸರ್ಕಾರಿ ಕಾರು ದುರ್ಬಳಕೆ
ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯ ಸರ್ಕಾರ ಲಾಕ್ಡೌನ್ ವಿಧಿಸಿದೆ. ಬೇಕಾಬಿಟ್ಟಿಯಾಗಿ ಓಡಾಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಅನಗತ್ಯವಾಗಿ ಓಡಾಡುವ ಜನರಿಗೆ ದಂಡವನ್ನು ಹಾಕಿ, ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಯಾರಿಗೂ ಮುಲಾಜೇ ಮಾಡದೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಹೀಗೆ ಅನಗತ್ಯವಾಗಿ ಸರ್ಕಾರಿ ಕಾರು ದುರ್ಬಳಕೆ ಮಾಡಿಕೊಂಡು ಓಡಾಡುತ್ತಿದ್ದ ಚಾಲಕನಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಾಗಿದೆ. ಹೀಗಿದ್ದೂ ಸರ್ಕಾರಿ ಸೇವೆಯಲ್ಲಿದ್ದ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕನೊಬ್ಬ ಓಡಾಡುತ್ತಿದ್ದರು. ಅನಗತ್ಯವಾಗಿ ಕುಟುಂಬಸ್ಥರ ಜೊತೆ ಓಡಾಟ ನಡೆಸಿದ ಹಿನ್ನೆಲೆ ಪಿಡಬ್ಲೂಡಿಗೆ ಸೇರಿದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಘಟನೆ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆ ಸೇವೆಯಲ್ಲಿದ್ದ ಕಾರಿನಲ್ಲಿ ಕುಟುಂಬದವರನ್ನು ಕರೆದುಕೊಂಡು ಚಾಲಕ ಹೋಗುತ್ತಿದ್ದರು. ಸರ್ಕಾರಿ ಸೇವೆಯಲ್ಲಿ ಅಂತ ಬೋರ್ಡ್ ಇದ್ದಿದ್ದರಿಂದ ಪೊಲೀಸರು ಹಿಡಿಯಲ್ಲಾ ಅಂತ ಚಾಲಕ ಓಡಾಡುತ್ತಿದ್ದರು. ಆದರೆ ಚಾಲಕನ ದುರ್ಬಳಕೆಯನ್ನು ಗಮನಿಸಿದ ಪೊಲೀಸರು ಕಾರ್ನ ಸೀಜ್ ಮಾಡಿದ್ದಾರೆ.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪೊಲೀಸರು ವಾಹನಗಳ ತಪಾಸಣೆ ಮುಂದಾಗಿದ್ದರು. ಅನಗತ್ಯವಾಗಿ ಹೊರ ಬಂದವರಿಗೆ, ಮಾಸ್ಕ್ ಇಲ್ಲದೇ ಇರುವವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಕಲಬುರಗಿ ಜಿಮ್ಸ್ ಲಸಿಕಾ ಕೇಂದ್ರದಲ್ಲಿ ಇಂದು (ಮೇ 22) ಫ್ರಂಟ್ಲೈನ್ ವಾರಿಯರ್ಸ್, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದೆ. 18ರಿಂದ 44 ವರ್ಷದವರೆಗೆ ಇಂದು ಕೊವಿಡ್ ಲಸಿಕೆ ಇಲ್ಲ. ಇನ್ನು ಲಸಿಕೆ ಬಾರದ ಹಿನ್ನೆಲೆಯಲ್ಲಿ ಲಸಿಕೆ ಇಲ್ಲಾ ಅಂತ ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ 18ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಇಲ್ಲ ಕೊವಿಡ್ 19 ಲಸಿಕೆ; 24ಗಂಟೆಯಲ್ಲಿ ವಿದೇಶದಿಂದ ತರಿಸಿಕೊಡಿ ಎಂದ ಸಿಎಂ
ದೇಶದಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇ.12.45ಕ್ಕೆ ಕುಸಿತ: ಲವ್ ಅಗರ್ವಾಲ್
(Illegal gutka making Gutka Jafti worth over Rs 60 thousand police raids in Vijayapura)