ಅಕ್ರಮ ಒತ್ತುವರಿ: ಜೆಸಿಬಿ ಮೇಲೆ ನಿಂತು ತೆರವಿಗೆ ಅಡ್ಡಿಪಡಿಸಿದ ಡಾ.ಸುದರ್ಶನ್

|

Updated on: Nov 24, 2019 | 4:01 PM

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಡಾ.ಸುದರ್ಶನ್ ಅಡ್ಡಿ ಉಂಟುಮಾಡಿದ್ದಾರೆ. ರೈಟ್ ಲೈವ್ಲಿಹುಡ್ ಪ್ರಶಸ್ತಿ ಪುರಸ್ಕೃತ ಡಾ.ಸುದರ್ಶನ್ ಅವರು ಜೆಸಿಬಿ ಮೇಲೆ ಹತ್ತಿನಿಂತು ತೆರವು ಕಾರ್ಯಾಚರಣೆ ವಿರೋಧಿಸಿದ್ದಾರೆ. ಡಾ.ಸುದರ್ಶನ್​ಗೆ ಸೇರಿದ ವಿವೇಕಾರುಣಾ ಫೌಂಡೇಷನ್​ನ ಗೊರುಕನ ಪರಿಸರ ಶಿಕ್ಷಣ, ಆಯುರ್ವೇದಿಕ್ ಶಿಕ್ಷಣ ಕೇಂದ್ರವು ಅಕ್ರಮವಾಗಿ 4 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ರೇಷ್ಮೆ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಡಾ.ಸುದರ್ಶನ್ ಕಾರ್ಯಾಚರಣೆಗೆ […]

ಅಕ್ರಮ ಒತ್ತುವರಿ: ಜೆಸಿಬಿ ಮೇಲೆ ನಿಂತು ತೆರವಿಗೆ ಅಡ್ಡಿಪಡಿಸಿದ ಡಾ.ಸುದರ್ಶನ್
Follow us on

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಡಾ.ಸುದರ್ಶನ್ ಅಡ್ಡಿ ಉಂಟುಮಾಡಿದ್ದಾರೆ. ರೈಟ್ ಲೈವ್ಲಿಹುಡ್ ಪ್ರಶಸ್ತಿ ಪುರಸ್ಕೃತ ಡಾ.ಸುದರ್ಶನ್ ಅವರು ಜೆಸಿಬಿ ಮೇಲೆ ಹತ್ತಿನಿಂತು ತೆರವು ಕಾರ್ಯಾಚರಣೆ ವಿರೋಧಿಸಿದ್ದಾರೆ.

ಡಾ.ಸುದರ್ಶನ್​ಗೆ ಸೇರಿದ ವಿವೇಕಾರುಣಾ ಫೌಂಡೇಷನ್​ನ ಗೊರುಕನ ಪರಿಸರ ಶಿಕ್ಷಣ, ಆಯುರ್ವೇದಿಕ್ ಶಿಕ್ಷಣ ಕೇಂದ್ರವು ಅಕ್ರಮವಾಗಿ 4 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ರೇಷ್ಮೆ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಡಾ.ಸುದರ್ಶನ್ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿದ್ದಾರೆ. ಕೆಲಕಾಲ ಅಧಿಕಾರಿಗಳು ಮತ್ತು ಡಾ.ಸುದರ್ಶನ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸ್ ಬಂದೋಬಸ್ತ್​ನೊಂದಿಗೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.