ಕೊರೊನಾ ಹಾವಳಿ ಮಧ್ಯೆ ರೈಲಿನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ; 138 ಲೀಟರ್ ಗೋವಾ ಮದ್ಯ ವಶ: ಆರೋಪಿಗಳು ಪರಾರಿ

ಟ್ರಕ್ಕು, ಜೀಪು, ಬಸ್ಸು, ಖಾಸಗಿ ವಾಹನಗಳಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸುವುದು, ಅದನ್ನು ಅಬಕಾರಿ ಇಲಾಖೆ ಮತ್ತು ಪೊಲೀಸ್​ ಇಲಾಖೆಯವರು ಕಾರ್ಯಚರಣೆ ನಡೆಸಿ, ಬೇಧಿಸುವುದು ಸಾಮಾನ್ಯ. ಆದರೆ ಕೊರೊನಾ ಹಾವಳಿಯಿರುವಾಗ ರೈಲಿನಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡಿರುವುದು ಪತ್ತೆಯಾಗಿದೆ. ದಾದರ್ - ತಿರುನೆಲ್ವಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತಪಾಸಣೆ ನಡೆಸಿದಾಗ ಗೋವಾ ಮದ್ಯ ಅಕ್ರಮವಾಗಿ ಸಾಗಣೆಯಾಗುತ್ತಿರುವುದು ಪತ್ತೆಯಾಗಿದೆ.

ಕೊರೊನಾ ಹಾವಳಿ ಮಧ್ಯೆ ರೈಲಿನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ; 138 ಲೀಟರ್ ಗೋವಾ ಮದ್ಯ ವಶ: ಆರೋಪಿಗಳು ಪರಾರಿ
ಕೊರೊನಾ ಹಾವಳಿ ಮಧ್ಯೆ ರೈಲಿನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ; 138 ಲೀಟರ್ ಗೋವಾ ಮದ್ಯ ವಶ: ಆರೋಪಿಗಳು ಪರಾರಿ
ಸಾಧು ಶ್ರೀನಾಥ್​

Updated on: May 28, 2021 | 5:44 PM

ಮಂಗಳೂರು: ಕೊರೊನಾ ಹಾವಳಿ ಮಧ್ಯೆ ರೈಲಿನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ನಡೆದಿದೆ. ರೈಲಿನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ನಡೆದಿದ್ದು 138.750 ಲೀಟರ್ ಗೋವಾ ಮದ್ಯವನ್ನು ಮಂಗಳೂರು ಅಬಕಾರಿ ಹಾಗೂ ರೈಲ್ವೇ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ರೈಲ್ವೇ ಜಂಕ್ಷನ್ ಕಂಕನಾಡಿಯಲ್ಲಿ ಈ ಯಶಸ್ವೀ ಕಾರ್ಯಾಚರಣೆ ನಡೆದಿದೆ.

ಟ್ರಕ್ಕು, ಜೀಪು, ಬಸ್ಸು, ಖಾಸಗಿ ವಾಹನಗಳಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸುವುದು, ಅದನ್ನು ಅಬಕಾರಿ ಇಲಾಖೆ ಮತ್ತು ಪೊಲೀಸ್​ ಇಲಾಖೆಯವರು ಕಾರ್ಯಚರಣೆ ನಡೆಸಿ, ಬೇಧಿಸುವುದು ಸಾಮಾನ್ಯ. ಆದರೆ ಕೊರೊನಾ ಹಾವಳಿಯಿರುವಾಗ ರೈಲಿನಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡಿರುವುದು ಪತ್ತೆಯಾಗಿದೆ. ದಾದರ್ – ತಿರುನೆಲ್ವಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತಪಾಸಣೆ ನಡೆಸಿದಾಗ ಗೋವಾ ಮದ್ಯ ಅಕ್ರಮವಾಗಿ ಸಾಗಣೆಯಾಗುತ್ತಿರುವುದು ಪತ್ತೆಯಾಗಿದೆ. ಆದರೆ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಮಂಗಳೂರು ವಿಭಾಗದ ಅಬಕಾರಿ ಜಂಟಿ‌ ಆಯುಕ್ತೆ ಶೈಲಜಾ ಕೋಟೆ ನಿರ್ದೇಶನದಲ್ಲಿ ಕಾರ್ಯಾಚರಣೆ ನಡೆಸಿ, 138.750 ಲೀಟರ್ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.

(illegal liquor transportation from goa busted at kankanady mangalore)

ಅಕ್ರಮ ಮದ್ಯ ಸಾಗಾಣಿಕೆ: ಕರ್ನಾಟಕದಲ್ಲಿ ಮಾರಾಟವಾಗುತ್ತಿದ್ದ ಗೋವಾ ಮದ್ಯಕ್ಕೆ ಬ್ರೇಕ್​ ಹಾಕಿದ ಅಬಕಾರಿ ಇಲಾಖೆ

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us