ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.77 ಕೋಟಿ ರೂ. ಮೌಲ್ಯದ ಚಿನ್ನ ಬೆಂಗಳೂರಿನಲ್ಲಿ ಸೀಜ್: ಇಬ್ಬರ ಬಂಧನ​​

| Updated By: ಗಂಗಾಧರ​ ಬ. ಸಾಬೋಜಿ

Updated on: Jun 06, 2024 | 7:04 PM

ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.77 ಕೋಟಿ ರೂ. ಮೌಲ್ಯದ ಚಿನ್ನವನ್ನು ಡಿಆರ್​ಐ ಬೆಂಗಳೂರು ಅಧಿಕಾರಿಗಳು ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ. ಹ್ಯಾಂಡ್ ಬ್ಯಾಗ್​ನಲ್ಲಿ ಮುಚ್ಚಿಟ್ಟು ಚಿನ್ನ ಸಾಗಾಟಕ್ಕೆ ಯತ್ನಿಸಿದ್ದಾರೆ. 6 ಕೆಜಿ 834 ಗ್ರಾಂ ಚಿನ್ನ ಸೀಜ್​ ಮಾಡಲಾಗಿದೆ.

ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.77 ಕೋಟಿ ರೂ. ಮೌಲ್ಯದ ಚಿನ್ನ ಬೆಂಗಳೂರಿನಲ್ಲಿ ಸೀಜ್: ಇಬ್ಬರ ಬಂಧನ​​
ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.77 ಕೋಟಿ ರೂ. ಮೌಲ್ಯದ ಚಿನ್ನ ಬೆಂಗಳೂರಿನಲ್ಲಿ ಸೀಜ್: ಇಬ್ಬರ ಬಂಧನ​​
Follow us on

ಬೆಂಗಳೂರು, ಜೂನ್​ 06: ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.77 ಕೋಟಿ ರೂ. ಮೌಲ್ಯದ ಚಿನ್ನವನ್ನು (gold) ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ (Kempegowda International Airport) ಜಪ್ತಿ ಮಾಡಲಾಗಿದೆ. ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಥಾರ್ ಏರ್ ವೇಸ್ ವಿಮಾನದಲ್ಲಿ ಭಾಗಮಿಸಿದ್ದ ಇಬ್ಬರು ಪ್ರಯಾಣಿಕರ ಪ್ರಯಾಣಿಸಿದ್ದು ಅಕ್ರಮವಾಗಿ ಹ್ಯಾಂಡ್ ಬ್ಯಾಗ್​ನಲ್ಲಿ ಮುಚ್ಚಿಟ್ಟು ಚಿನ್ನ ಸಾಗಾಟಕ್ಕೆ ಯತ್ನಿಸಿದ್ದಾರೆ. ಸದ್ಯ ಡಿಆರ್​ಐ ಬೆಂಗಳೂರು ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಇಬ್ಬರನ್ನ ಬಂಧಿಸಿ 6 ಕೆಜಿ 834 ಗ್ರಾಂ ಚಿನ್ನ ಸೀಜ್​ ಮಾಡಿದ್ದಾರೆ.

1 ಕೋಟಿ 96 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಆ ಮೂಲಕ ದುಬೈನಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಒಂದೂವರೆ ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದರು. ಅಂದಹಾಗೆ ದುಬೈ ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕರು ಚಿನ್ನ ಸಾಗಾಣಿಕೆಗಾಗಿಯೆ ವಿಶೇಷವಾಗಿ ವಸ್ತ್ರಗಳನ್ನು ಮಾಡಿಸಿದ್ದರು.

ಇದನ್ನೂ ಓದಿ: ಹಳೇ ಕಾಯಿನ್​ಗೆ ಕೋಟ್ಯಾಂತರ ರೂ. ಆಮಿಷ; ಫೇಸ್ ಬುಕ್​ನಲ್ಲಿ ಜಾಹೀರಾತು ನಂಬಿ ಹಣ ಕಳ್ಕೊಂಡ ಮಹಿಳೆ

ಜೀನ್ಸ್ ಪ್ಯಾಂಟ್ ಟೀ ಶರ್ಟ್ಗಳಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ಆರೋಪಿಗಳು ಅಕ್ರಮವಾಗಿ ಸಾಗಿಸುತ್ತಿದ್ದರು. ಕೆಂಪೇಗೌಡ ಏರ್ಪೋರ್ಟ್​​ಗೆ ಬಂದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಬಟ್ಟೆಗಳಲ್ಲಿ ಪೌಡರ್ ರೂಪದ 2 ಕೆಜಿ 814 ಗ್ರಾಂ ಚಿನ್ನ ಪತ್ತೆಯಾಗಿದ್ದು ವಶಕ್ಕೆ ಪಡೆದಿದ್ದರು.

ವಶಪಡಿಸಿಕೊಂಡ ಚಿನ್ನದ ಮಾರುಕಟ್ಟೆ ಬೆಲೆ ಸುಮಾರು 1 ಕೋಟಿ 96 ಲಕ್ಷ ರೂ. ಮೌಲ್ಯ ಎಂದು ಅಂದಾಜಿಸಲಾಗಿದ್ದು ಚಿನ್ನವನ್ನ ಹೊತ್ತು ತಂದ ಮೂವರು ಪುರುಷರು ಹಾಗೂ ಓರ್ವ ಮಹಿಳೆಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು.

ಅಧಿಕಾರಿಗಳ ಕಣ್ತಪ್ಪಿಸಿ ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ: ಇಬ್ಬರು ಮಹಿಳೆಯರು ವಶಕ್ಕೆ 

ಅದೇ ರೀತಿಯಾಗಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಮಹಿಳೆಯರು ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನವಿಟ್ಟುಕೊಂಡು ಸ್ಮಗ್ಲಿಂಗ್ ಮಾಡಲು ಬಂದು ಅಧಿಕಾರಿ ಕೈಗೆ ಸಿಕ್ಕಿ ಬಿದಿದ್ದರು. ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣಕ್ಕೆ ಬಂದ ಇಂಡಿಗೋ ವಿಮಾನ ದುಬೈನಿಂದ ಆಗಮಿಸಿದ್ದು ಪ್ರಯಾಣಿಕರ ಜೊತೆ ಇತರೆ ಇಬ್ಬರು ಪ್ರಯಾಣಿಕರು ಬಂದಿದ್ರು. ಹೀಗಾಗಿ ಮಹಿಳೆಯರ ನಡುವಳಿಕೆ ಮೇಲೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಮಹಿಳೆಯ ಒಳ ಉಡುಪಿನಲ್ಲಿ ಚಿನ್ನವಿರುವುದು ಪತ್ತೆಯಾಗಿತ್ತು.

ಇದನ್ನೂ ಓದಿ: ಆನೇಕಲ್: ಇಲಿ ಬಿದ್ದ ಪಲ್ಯ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ

ಜೊತೆಗೆ ಚಿನ್ನ ಅಕ್ರಮವಾಗಿ ಸಾಗಾಟ ಮಾಡೋಕ್ಕೆ ಅಂತಲೆ ಮಹಿಳೆಯರು ಹಲವು ಲೇಯರ್ಗಳಿರುವ ಒಳ ಉಡುಪನ್ನ ಧರಿಸಿ ಬಂದಿರುವುದು ಕಸ್ಟಮ್ಸ್ ಅಧಿಕಾರಿಗಳ ತನಿಖೆ ವೇಳೆ ಬಯಲಾಗಿತ್ತು. ಮಹಿಳೆಯರಿಂದ 49 ಲಕ್ದ 52 ಸಾವಿರ ಮೌಲ್ಯದ 717 ಗ್ರಾಂ ಚಿನ್ನವನ್ನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಮಹಿಳೆಯರನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:02 pm, Thu, 6 June 24