AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೇ ಕಾಯಿನ್​ಗೆ ಕೋಟ್ಯಾಂತರ ರೂ. ಆಮಿಷ; ಫೇಸ್ ಬುಕ್​ನಲ್ಲಿ ಜಾಹೀರಾತು ನಂಬಿ ಹಣ ಕಳ್ಕೊಂಡ ಮಹಿಳೆ

ನೆಲಮಂಗಲದ ರಾಯನ್ ನಗರದ ಮಹಿಳೆ ಲಾವಣ್ಯ ಎಂಬುವವರು ಫೇಸ್ ಬುಕ್​ನಲ್ಲಿ ಹಳೇ ಕಾಯಿನ್(coin) ಕೊಟ್ಟರೆ, ಕೋಟ್ಯಾಂತರ ರೂ. ಹಣ ನೀಡುವುದಾಗಿ ಬಂದ ಜಾಹೀರಾತು ನಂಬಿ ಆರೋಪಿಗಳ ಅಕೌಂಟ್​ಗೆ ಬರೊಬ್ಬರಿ 2 ಲಕ್ಷದ 21 ಸಾವಿರ ರೂ. ಹಣ ಹಾಕಿ ಮೋಸ(fraud) ಹೋಗಿದ್ದಾರೆ.

ಹಳೇ ಕಾಯಿನ್​ಗೆ ಕೋಟ್ಯಾಂತರ ರೂ. ಆಮಿಷ; ಫೇಸ್ ಬುಕ್​ನಲ್ಲಿ ಜಾಹೀರಾತು ನಂಬಿ ಹಣ ಕಳ್ಕೊಂಡ ಮಹಿಳೆ
ಹಳೇ ಕಾಯಿನ್​ಗೆ ಕೋಟ್ಯಾಂತರ ರೂ. ಆಮಿಷ; ಫೇಸ್ ಬುಕ್​ನಲ್ಲಿ ಜಾಹೀರಾತು ನಂಬಿ ಹಣ ಕಳ್ಕೊಂಡ ಮಹಿಳೆ
ಬಿ ಮೂರ್ತಿ, ನೆಲಮಂಗಲ
| Edited By: |

Updated on:Apr 27, 2024 | 7:42 PM

Share

ಬೆಂಗಳೂರು ಗ್ರಾಮಾಂತರ, ಏ.27: ಫೇಸ್ ಬುಕ್​ನಲ್ಲಿ ಹಳೇ ಕಾಯಿನ್(coin) ಕೊಟ್ಟರೆ, ಕೋಟ್ಯಾಂತರ ರೂ. ಹಣ ನೀಡುವುದಾಗಿ ಜಾಹೀರಾತು ನಂಬಿ ಆರೋಪಿಗಳ ಅಕೌಂಟ್​ಗೆ ಬರೊಬ್ಬರಿ 2 ಲಕ್ಷದ 21 ಸಾವಿರ ರೂ. ಹಣ ಹಾಕಿ ನೆಲಮಂಗಲದ ರಾಯನ್ ನಗರದ ಮಹಿಳೆ ಲಾವಣ್ಯ ಎಂಬುವವರು ಮೋಸ(fraud) ಹೋಗಿದ್ದಾರೆ. ತಮ್ಮಲ್ಲಿದ್ದ 5ಪೈಸೆ, 10ಪೈಸೆ ನಾಣ್ಯಗಳ ಪೋಟೋ ಹಾಕಿದ್ದ ಮಹಿಳೆ, ಬಳಿಕ ಕಂಪನಿಯ ಅಕೌಂಟಿಂಗ್ ಪ್ರೋಸೆಸ್ ಎಂದು ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಹಿನ್ನಲೆ ಸೆಕ್ಷನ್​ 66(C), 66(D)IT ACT 419, 420, ರೀತ್ಯಾ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕೆಂಪೇಗೌಡ ಏರ್​​ಪೋರ್ಟ್​​ನಲ್ಲಿ 799 ಗ್ರಾಂ ಚಿನ್ನ ಜಪ್ತಿ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಪ್ಯಾಕ್ಸ್ ಮೂಲಕ ಬಂದ ಪೇಸ್ಟ್ ರೂಪದ 55 ಲಕ್ಷ ರೂಪಾಯಿ ಮೌಲ್ಯದ 799 ಗ್ರಾಂ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪೇಸ್ಟ್​​ ರೂಪದಲ್ಲಿ ಸಿಂಗಾಪುರದಿಂದ ಅಕ್ರಮವಾಗಿ ಒಳ ಉಡುಪಿನಲ್ಲಿಟ್ಟು ಸಾಗಾಟ ಮಾಡಿದ್ದಾರೆ.ಈ ವೇಳೆ ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಓರ್ವ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ಕುಸುಮ್ ಯೋಜನೆ ಹೆಸರಿನಲ್ಲಿ ಸೈಬರ್ ವಂಚನೆ: ರೈತರಿಗೆ ಮೋಸ

ಕಲಬುರಗಿ ಮಾಜಿ ಮೇಯರ್ ಕಾರಿನಲ್ಲಿ 2 ಕೋಟಿ ಹಣ ಪತ್ತೆ

ಕಲಬುರಗಿ: ನಗರದ ರೈಲ್ವೆ ನಿಲ್ದಾಣದ ಬಳಿ ಮಾಜಿ ಮೇಯರ್​ಗೆ ಸೇರಿದ ಕಾರಿನಲ್ಲಿ 2 ಕೋಟಿ ರೂ. ಹಣ ಪತ್ತೆಯಾಗಿದೆ. ಕಾರಿನಲ್ಲಿ ಹಣ ಸಾಗಿಸುವಾಗ ಐಟಿ ಅಧಿಕಾರಿಗಳ ರೇಡ್ ಮಾಡಿದ್ದು, ಕಾಂಗ್ರೆಸ್ ಮಾಜಿ ಮೇಯರ್ ಸೇರಿದ ಕಾರನ್ನು ವಶಕ್ಕೆ ಪಡೆದು ಕಂದಾಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Sat, 27 April 24

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!