‘ಗುಟ್ಟಾಗಿ ಮದುವೆಯಾಗಿ ಮೋಸ ಮಾಡಿದ’; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಜಯಲಕ್ಷ್ಮಿ ವಿಡಿಯೋ

‘ಆ ಸಂದರ್ಭದಲ್ಲಿ ಅವನಿಗೆ ಇನ್ನೂ ಮದುವೆಯಾಗಿರಲಿಲ್ಲ. ನನ್ನನ್ನು ಮದುವೆ ಆಗುತ್ತೇನೆ ಅಂತ ಭರವಸೆ ನೀಡಿ, 3 ವರ್ಷ ಅವನು ನನ್ನ ಜೊತೆಗಿದ್ದ. ಯಾರಿಗೂ ಗೊತ್ತಾಗದಂತೆ ನನ್ನ ಜತೆ ರಹಸ್ಯವಾಗಿ ಮದುವೆ ಮಾಡಿಕೊಂಡ. ನನ್ನ ಇಡೀ ಜೀವನ ಹಾಳು ಮಾಡಿದ. ಅವನಿಗೆ ಸಮಸ್ಯೆಗಳು ಬಂದಾಗ ನನ್ನನ್ನು ಒಂಟಿ ಮಾಡಿದ’ ಎಂದು ವಿಜಯಲಕ್ಷ್ಮಿ ಆರೋಪ ಮಾಡಿದ್ದಾರೆ.

‘ಗುಟ್ಟಾಗಿ ಮದುವೆಯಾಗಿ ಮೋಸ ಮಾಡಿದ’; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಜಯಲಕ್ಷ್ಮಿ ವಿಡಿಯೋ
ಸೀಮಾನ್​, ವಿಜಯಲಕ್ಷ್ಮಿ
Follow us
ಮದನ್​ ಕುಮಾರ್​
|

Updated on: Mar 06, 2024 | 3:24 PM

‘ಸೂರ್ಯವಂಶ’, ‘ನಾಗಮಂಡಲ’, ‘ಜೋಡಿ ಹಕ್ಕಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದ ನಟಿ ವಿಜಯಲಕ್ಷ್ಮಿ (Vijayalakshmi) ಅವರು ಇತ್ತೀಚಿನ ವರ್ಷಗಳಲ್ಲಿ ವಿವಾದಗಳ ಮೂಲಕವೇ ಸುದ್ದಿ ಆಗಿದ್ದು ಹೆಚ್ಚು. ಪರಭಾಷೆಯಲ್ಲೂ ನಟಿಸಿ ಮನೆಮಾತಾಗಿರುವ ವಿಜಯಲಕ್ಷ್ಮಿ ಅವರು ಮತ್ತೆ ವಿವಾದ ಮಾಡಿಕೊಳ್ಳುತ್ತಿದ್ದಾರೆ. ನಾಮ್​ ತಮಿಳರ್​ ಪಾರ್ಟಿಯ ಸೀಮಾನ್​ (Seeman) ವಿರುದ್ಧ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ವಿಡಿಯೋ (Vijayalakshmi Viral Video) ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದು ತಮ್ಮ ಕೊನೆಯ ವಿಡಿಯೋ ಎಂದು ಕೂಡ ವಿಜಯಲಕ್ಷ್ಮಿ ಹೇಳಿದ್ದಾರೆ.

ಫೆಬ್ರವರಿ 29ರಂದು ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಟೆರೆಸ್​ನಲ್ಲಿ ಒಂದು ವಿಡಿಯೋ ಮಾಡಿದ್ದರು. ‘ದಯವಿಟ್ಟು ಸೀಮಾನ್​ ನನ್ನ ಜೊತೆ ಮಾತನಾಡಬೇಕು’ ಎಂದು ಅವರ ಆ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಸೀಮಾನ್​ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಈಗ ಮಾರ್ಚ್​ 5ರಂದು ವಿಜಯಲಕ್ಷ್ಮಿ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ತಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.

ವಿಜಯಲಕ್ಷ್ಮಿ ಅವರು ಆ ವಿಡಿಯೋ ಹಂಚಿಕೊಂಡು 5 ದಿನ ಕಳೆದರೂ ಕೂಡ ಸೀಮಾನ್​ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ‘ಈ ರೀತಿ ವಿಡಿಯೋ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನನಗೆ ಭಾವನಾತ್ಮಕವಾಗಿ ಎಷ್ಟು ನೋವಾಗಿರಬಹುದು ಅಂತ ನೀವೇ ಯೋಚಿಸಿ’ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ‘ಪರವಾಗಿಲ್ಲ, ಆಕೆ ಬಿದ್ದು ಸಾಯಲಿ ಎಂಬುದು ಜನರ ಪ್ರತಿಕ್ರಿಯೆ ಆಗಿದ್ದರೆ ಎಲ್ಲವನ್ನೂ ಹೇಳುತ್ತೇನೆ ಕೇಳಿ’ ಎಂದಿದ್ದಾರೆ ವಿಜಯಲಕ್ಷ್ಮಿ.

‘ನನ್ನ ಸಹೋದರಿಯ ಸಮಸ್ಯೆಯಿಂದಾಗಿ ನಾನು ಮೊದಲ ಬಾರಿಗೆ ಸೀಮಾನ್​ ಭೇಟಿ ಮಾಡಿದೆ. ಆಗ ಆತನಿಗೆ ಮದುವೆ ಆಗಿರಲಿಲ್ಲ. ನನ್ನನ್ನು ಮದುವೆ ಆಗುವುದಾಗಿ ಭರವಸೆ ನೀಡಿ, ನನ್ನ ಜೊತೆ ಆತ ಮೂರು ವರ್ಷ ಇದ್ದ. ಯಾರಿಗೂ ಗೊತ್ತಾಗದಂತೆ ಆತ ನನ್ನ ಜೊತೆ ರಹಸ್ಯವಾಗಿ ಮದುವೆ ಆದ. ನನ್ನ ಇಡೀ ಬದುಕನ್ನು ಹಾಳು ಮಾಡಿದ. ಸಮಸ್ಯೆಗಳು ಎದುರಾದಾಗ ನನ್ನನ್ನು ಒಂಟಿ ಮಾಡಿದ’ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ಇದನ್ನೂ ಓದಿ: ದೇವರಿಗೆ ಮುಡಿ ಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ

‘ಇದು ನನ್ನ ಕೊನೆಯ ವಿಡಿಯೋ. ಇನ್ನು ಎರಡು ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧಳಾಗಿದ್ದೇನೆ. ಇದಕ್ಕೆಲ್ಲ ಸೀಮಾನ್​ ಕಾರಣ’ ಎಂದು ವಿಜಯಲಕ್ಷ್ಮಿ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ. ತಮಿಳಿನಲ್ಲಿ ಅವರು ಮಾತನಾಡಿರುವ ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ