ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ಕುಸುಮ್ ಯೋಜನೆ ಹೆಸರಿನಲ್ಲಿ ಸೈಬರ್ ವಂಚನೆ: ರೈತರಿಗೆ ಮೋಸ
ರೈತರು ವಿದ್ಯುತ್ ಬಳಕೆ ಕಡಿಮೆ ಮಾಡಲು ಪಂಪುಸೆಟ್‍ಗಳಿಗೆ ಡೀಸೆಲ್, ಪೆಟ್ರೋಲ್ ಅವಲಂಬನೆ ತಪ್ಪಿಸಲು ಸೋಲಾರ್ ಪಂಪುಗಳನ್ನು ಅಳವಡಿಸಿಕೊಳ್ಳಲು ಸೇರಿದಂತೆ ಪರಿಸರ ಮಾಲಿನ್ಯ ತಡೆಗಟ್ಟಲು ಕೇಂದ್ರಸರ್ಕಾರ ರೈತರಿಗಾಗಿ ಪ್ರಧಾನಮಂತ್ರಿ ಕುಸುಮ್ ಯೋಜನೆ ಜಾರಿಗೊಳಿಸಿದೆ. ರೈತರಿಗೆ ರಿಜಿಸ್ಟರ್‍ಗೆ ಹಣ, ವ್ಯರಿಪಿಕೇಷನ್‍ಗೆ ಹಣ, ಸಬ್ಸಿಡಿ ಹಣಕ್ಕೆ ಇಂತಿಷ್ಟು ಎಂದು ಹೇಳಿ ಹಣ ಪೀಕಿ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಚಿಕ್ಕಬಳ್ಳಾಪುರ, ಮಾರ್ಚ್ 6: ರೈತರು ವಿದ್ಯುತ್ ಬಳಕೆ ಕಡಿಮೆ ಮಾಡಲು ಪಂಪುಸೆಟ್‍ಗಳಿಗೆ ಡೀಸೆಲ್, ಪೆಟ್ರೋಲ್ ಅವಲಂಬನೆ ತಪ್ಪಿಸಲು ಸೋಲಾರ್ ಪಂಪುಗಳನ್ನು ಅಳವಡಿಸಿಕೊಳ್ಳಲು ಸೇರಿದಂತೆ ಪರಿಸರ ಮಾಲಿನ್ಯ ತಡೆಗಟ್ಟಲು ಕೇಂದ್ರಸರ್ಕಾರ ರೈತರಿಗಾಗಿ ಪ್ರಧಾನಮಂತ್ರಿ ಕುಸುಮ್ ಯೋಜನೆ (Pradhan Mantri Kusum Yojana) ಜಾರಿಗೊಳಿಸಿದೆ. ಫಲಾನುಭವಿ ರೈತರು ಕೇಂದ್ರ ಸರ್ಕಾರದಿಂದ ಶೇ.60% ಸಹಾಯಧನ, ಶೇ.30% ರಷ್ಟು ಸಾಲದ ರೂಪದಲ್ಲಿ ಸಬ್ಸಿಡಿ ಪಡೆದು ಕೇವಲ ಶೇ.10% ರಷ್ಟು ಹಣ ಮಾತ್ರ ಪಾವತಿ ಮಾಡುವುದರ ಮೂಲಕ ಸೋಲಾರ್ ಪ್ಯಾನಲ್ ಪಂಪ್ ಮೋಟಾರ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ರೈತರು ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸಲು ಮುಗಿಬೀಳುತ್ತಿದ್ದಾರೆ.
ಅರ್ಜಿದಾರ ರೈತರನ್ನು ಟಾರ್ಗೆಟ್ ಮಾಡಿರುವ ಸೈಬರ್ ವಂಚಕರು
ರೈತರು ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಕೇಂದ್ರದ ಕುಸುಮ್ ಯೋಜನೆ ವೆಬ್‍ಸೈಟ್‍ಗಳನ್ನು ಸರ್ಚ್ ಮಾಡುತ್ತಿದ್ದಾರೆ. ವೆಬ್‍ಗಳಲ್ಲಿ ಅಸಲಿಗಿಂತ ನಕಲಿ ವೆಬ್‍ಗಳ ಹಾವಳಿ ಹೆಚ್ಚಾಗಿದ್ದು, ಅರ್ಜಿ ಸಲ್ಲಿಸುವ ರೈತರನ್ನು ಸಂಪರ್ಕಿಸಿ ದಾಖಲೆಗಳ ಪರಿಶೀಲನೆ ನೆಪದಲ್ಲಿ ಅರ್ಜಿದಾರರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿ ರೈತರಿಗೆ ರಿಜಿಸ್ಟರ್‍ಗೆ ಹಣ, ವ್ಯರಿಪಿಕೇಷನ್‍ಗೆ ಹಣ, ಸಬ್ಸಿಡಿ ಹಣಕ್ಕೆ ಇಂತಿಷ್ಟು ಎಂದು ಹೇಳಿ ಹಣ ಪೀಕಿ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಂಚನೆ ಪ್ರಕರಣಗಳ ಹೆಚ್ಚಳ
ಪ್ರಗತಿಪರ ರೈತರಿಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದಲ್ಲಿ ಪ್ರತಿದಿನ ಒಂದಿಲ್ಲೊಂದು ಪ್ರಕರಣ ನಡೆಯುತ್ತಿದೆ. ಇನ್ನು ಮಾರ್ಚ್ 3 ರಂದು ಶಿಡ್ಲಘಟ್ಟ ತಾಲ್ಲೂಕು, ಇ-ತಿಮ್ಮಸಂದ್ರ ಗ್ರಾಮದ ಚಂದ್ರಶೇಖರರೆಡ್ಡಿ ಎನ್ನುವವರಿಗೂ ಸಹಾ ರೂ. 1,93,600/-ಗಳನ್ನು ಮೋಸ ಮಾಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಹೆಚ್ಚಾಯ್ತು ಬಾಲ್ಯ ವಿವಾಹ ಪ್ರಕರಣಗಳು! ಒಂದೇ ವರ್ಷದಲ್ಲಿ ಬರೋಬ್ಬರಿ 167 ಕೇಸ್ ದಾಖಲು
ರೈತರಿಗೆ ಸೋಲಾರ್ ಮೋಟಾರ್ ಪಂಪು ನೀಡದೇ, ವಾಪಸ್ಸು ಹಣವನ್ನು ನೀಡದೇ ರೈತನಿಗೆ ಮೋಸ ಮಾಡಲಾಗಿದೆ. ಇದರಿಂದ ನೊಂದ ರೈತ ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.