ದಲಿತ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಬೇಸರ ಮತ್ತು ಅಸಮಾಧಾನ ಹೊರಹಾಕಿದ ಹೆಚ್ ಸಿ ಮಹದೇವಪ್ಪ
ಡಾ ಬಿಆರ್ ಅಂಬೇಡ್ಕರ್ ಅವರ ನಂತರ ಅವರಷ್ಟು ಪ್ರಭಾವಶಾಲಿ ದಲಿತ ನಾಯಕ ಸಮುದಾಯಕ್ಕೆ ಸಿಗಲಿಲ್ಲ ಅನ್ನೋದು ನಿಜವಾದರೂ ಕೆಲ ಉತ್ತಮ ನಾಯಕರನ್ನು ಸಮುದಾಯ ಕಂಡಿದೆ, ಆದರೆ ಯಾರಿಗೂ ಮುಖ್ಯಮಂತ್ರಿಯಾಗುವ ಸೌಭಾಗ್ಯ ಸಿಗಲಿಲ್ಲ, ಇದಕ್ಕೆಲ್ಲ ಕಾರಣ ಸಮುದಾಯದಲ್ಲಿ ನಾಯಕತ್ವ ಬೆಳೆಯದಿರುವದು ಮತ್ತು ನಾಯಕರಾಗಿ ಆರಿಸಿಕೊಂಡವರನ್ನು ಅನುಸರಿಸದಿರುವುದು ಎಂದು ಮಹದೇವಪ್ಪ ಹೇಳಿದರು.
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹಾದೇವಪ್ಪ (HC Mahadevappa) ರಾಜ್ಯದ ಮುಖ್ಯಮಂತ್ರಿಯಾಗುವ ಕನಸನ್ನು ಪೋಷಿಸುತ್ತಿದ್ದಾರೆಯೇ? ಅಥವಾ ಇದುವರೆಗೆ ಒಬ್ಬ ದಲಿತ (Dalit leader) ರಾಜ್ಯದ ಮುಖ್ಯಮಂತ್ರಿಯಾಗಲಿಲ್ಲವೆಂಬ ಕೊರಗು ಅವರನ್ನು ಕಾಡುತ್ತಿದೆಯೇ? ಎಸ್ ಮತ್ತು ಎಸ್ ಟಿ ನೌಕರರ ಸಮಾವೇಶದಲ್ಲಿ ಇಂದು ಮಾತಾಡಿದ ಅವರು ತಮ್ಮ ಅಸಮಾಧಾನ ಮತ್ತು ಬೇಸರವನ್ನು ಹೊರಹಾಕಿದರು. ಹೆಚ್ ಡಿ ದೇವೇಗೌಡ (HD Devegowda), ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಸಿದ್ದರಾಮಯ್ಯ (Siddaramaiah) ಯಾಕೆ ಮುಖ್ಯಮಂತ್ರಿಗಳಾಗುತ್ತಾರೆಂದರೆ ಅವರಿಗೆ ತಮ್ಮ ಸಮುದಾಯಗಳ ಜೊತೆಗೆ ಜನರ ಬೆಂಬಲವಿದೆ, ಆದರೆ ದಲಿತರು ತಮ್ಮ ನಾಯಕನನ್ನು ಅನುಸರಿಸುವುದಿಲ್ಲ. ರಾಜ್ಯದಲ್ಲಿ ತನ್ನನ್ನೂ ಸೇರಿದಂತೆ ಮಲ್ಲಿಕಾರ್ಜುನ ಖರ್ಗೆ, ಡಾ ಜಿ ಪರಮೇಶ್ವರ್ ಸೇರಿದಂತೆ ಇನ್ನೂ ಕೆಲ ದಲಿತ ನಾಯಕದಿದ್ದಾಗ್ಯೂ ಯಾರೂ ಪಾಲಿಸಿ ಮೇಕಿಂಗ್ ಸ್ಥಾನದಲ್ಲಿಲ್ಲ ಎಂದು ಮಹಾದೇವಪ್ಪ ಹೇಳಿದರು.
ಡಾ ಬಿಆರ್ ಅಂಬೇಡ್ಕರ್ ಅವರ ನಂತರ ಅವರಷ್ಟು ಪ್ರಭಾವಶಾಲಿ ದಲಿತ ನಾಯಕ ಸಮುದಾಯಕ್ಕೆ ಸಿಗಲಿಲ್ಲ ಅನ್ನೋದು ನಿಜವಾದರೂ ಕೆಲ ಉತ್ತಮ ನಾಯಕರನ್ನು ಸಮುದಾಯ ಕಂಡಿದೆ, ಆದರೆ ಯಾರಿಗೂ ಮುಖ್ಯಮಂತ್ರಿಯಾಗುವ ಸೌಭಾಗ್ಯ ಸಿಗಲಿಲ್ಲ ಎಂದು ಅವರು ಹೇಳಿದರು. ವೋಟು ನೀಡುವವರು ಸಮುದಾಯದವರಾದರೂ ಅಧಿಕಾರ ಮತ್ಯಾರೋ ಅನುಭವಿಸುತ್ತಾರೆ, ಇದಕ್ಕೆಲ್ಲ ಕಾರಣ ಸಮುದಾಯದಲ್ಲಿ ನಾಯಕತ್ವ ಬೆಳೆಯದಿರುವದು ಮತ್ತು ನಾಯಕರಾಗಿ ಆರಿಸಿಕೊಂಡವರನ್ನು ಅನುಸರಿಸದಿರುವುದು ಎಂದು ಮಹದೇವಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ 2 ವರ್ಷ ಸಿಎಂ, ಡಿಕೆ ಶಿವಕುಮಾರ್ 3 ವರ್ಷ ಸಿಎಂ ಅಂತೆ-ಕಂತೆಗೆ ಸ್ಪಷ್ಟನೆ ನೀಡಿದ ಹೆಚ್.ಸಿ ಮಹಾದೇವಪ್ಪ