ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲವೆಂದಿದ್ದ ಪ್ರಿಯಾಂಕ್ ಖರ್ಗೆ ಈಗ ವರಸೆ ಬದಲಿಸಿದ್ದಾರೆ!

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲವೆಂದಿದ್ದ ಪ್ರಿಯಾಂಕ್ ಖರ್ಗೆ ಈಗ ವರಸೆ ಬದಲಿಸಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 06, 2024 | 2:02 PM

ಇವರ ಹತ್ತಿರ ಬಂದಿದ್ದ ಪುಟೇಜ್ ಅನ್ನು ಖಾಸಗಿಯಾಗಿ ಎಫ್ ಎಸ್ ಎಲ್ ಪರೀಕ್ಷಣೆ ಮಾಡಿಸಿದಾಗ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ್ದು ದೃಢಪಟ್ಟಿರಲಿಲ್ಲವಂತೆ. ಬಿಜೆಪಿಯವರು ಅದೇ ಫುಟೇಜನ್ನು ಖಾಸಗಿಯಾಗಿ ಪರೀಕ್ಷಣೆ ಮಾಡಿಸಿದಾಗ ಕೂಗಿದ್ದು ಸ್ಪಷ್ಟವಾಗಿ ಕೇಳಿಸುತ್ತದೆ ಅಂತ ಹೇಳಿದ್ದಾರೆ ಅನ್ನುತ್ತಾರೆ. ಖಾಸಗಿ ವರದಿ ಗಳನ್ನು ಆಧರಿಸಿ ತೀರ್ಮಾನಕ್ಕೆ ಬರೋದು ತಪ್ಪು, ಸರ್ಕಾರ ಮಾಡಿಸುವ ಎಫ್ ಎಸ್ ಎಲ್ ವರದಿಯೇ ಅಂತಿಮ ಅಂತ ಖರ್ಗೆ ಹೇಳುತ್ತಾರೆ.

ಗದಗ: ಒಮ್ಮೆ ಒಂಥರ ಮತ್ತೊಮ್ಮೆ ಇನ್ನೊಂಥರ! ಸಿದ್ದರಾಮಯ್ಯ ಸಚಿವ ಸಂಪುಟದ (Siddaramaiah cabinet) ಕೆಲ ಸಚಿವರ ವರಸೆ ಇದು. ವಿಧಾನ ಸೌಧದಲ್ಲಿ ಡಾ ಸಯ್ಯದ್ ನಾಸೀರ್ ಹುಸ್ಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ (pro Pakistan slogan) ಕೂಗಿದಾಗ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಯಾರೂ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿಲ್ಲ ಅಂತ ಸಾಧಿಸುವ ಪ್ರಯತ್ನ ಮಾಡಿದ್ದನ್ನು ನಾವು ನಿಮಗೆ ತೋರಿಸಿದ್ದೇವೆ. ಇವತ್ತು ಗದಗನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬ್ಯಾಕ್ ಫುಟ್ ನಲ್ಲಿರುವುದನ್ನು ಮತ್ತು ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇವರ ಮಾತಿನ ವರಸೆ ಕೇಳಿ. ಇವರ ಹತ್ತಿರ ಬಂದಿದ್ದ ಪುಟೇಜ್ ಅನ್ನು ಖಾಸಗಿಯಾಗಿ ಎಫ್ ಎಸ್ ಎಲ್ ಪರೀಕ್ಷಣೆ ಮಾಡಿಸಿದಾಗ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ್ದು ದೃಢಪಟ್ಟಿರಲಿಲ್ಲವಂತೆ. ಬಿಜೆಪಿಯವರು ಅದೇ ಫುಟೇಜನ್ನು ಖಾಸಗಿಯಾಗಿ ಪರೀಕ್ಷಣೆ ಮಾಡಿಸಿದಾಗ ಕೂಗಿದ್ದು ಸ್ಪಷ್ಟವಾಗಿ ಕೇಳಿಸುತ್ತದೆ ಅಂತ ಹೇಳಿದ್ದಾರೆ ಅನ್ನುತ್ತಾರೆ. ಖಾಸಗಿ ವರದಿ ಗಳನ್ನು ಆಧರಿಸಿ ತೀರ್ಮಾನಕ್ಕೆ ಬರೋದು ತಪ್ಪು, ಸರ್ಕಾರ ಮಾಡಿಸುವ ಎಫ್ ಎಸ್ ಎಲ್ ವರದಿಯೇ ಅಂತಿಮ ಅಂತ ಖರ್ಗೆ ಹೇಳುತ್ತಾರೆ. ಹಾಗಾದರೆ, ಖರ್ಗೆ ಅವರು ಸರ್ಕಾರ ಅಧಿಕೃತ ಎಫ್ ಎಸ್ ಎಲ್ ರಿಪೋರ್ಟ್ ಸಿಗುವ ಮೊದಲೇ ತಾವು ಮಾಡಿಸಿದ ಎಫ್ ಎಸ್ ಎಲ್ ವರದಿಯನ್ನು ಆಧಾರವಾಗಿಟ್ಟುಕೊಂಡು ಘೋಷಣೆ ಕೂಗಿಲ್ಲ ಅಂತ ಹೇಳಿದ್ದು ಸರಿಯೇ? ಮುಂದುವರಿದು ಅವರು ತಮ್ಮನ್ನು ಬಚಾವು ಮಾಡಿಕೊಳ್ಳಲು ಏನೇನೋ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಿಯಾಂಕ್ ಖರ್ಗೆ ಹಿಟ್ ಆ್ಯಂಡ್ ರನ್‌ ಮಾಸ್ಟರ್: ಕಲಬುರಗಿ ಪ್ರವೇಶಕ್ಕೆ ಪೊಲೀಸರು ತಡೆಯೊಡ್ಡಿದ ಬಳಿಕ ಚಕ್ರವರ್ತಿ ಸೂಲಿಬೆಲೆ ಕಿಡಿ