ಗ್ರಾಹಕರ ಖಾತೆಗೆ ಕನ್ನ ಹಾಕಿ, ತನ್ನ ಸಂಬಂಧಿಕರ ಖಾತೆಗಳಿಗೆ ಹಣ ವರ್ಗಾಯಿಸಿದ ಎಸ್​ಬಿಐ ಮಹಿಳಾ ಸಿಬ್ಬಂದಿ!

ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯ ಆರ್‍ವಿವಿ ಕಾಂಪ್ಲೆಕ್ಸ್ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ ಶಾಖೆಯಲ್ಲಿ 2014 ರಿಂದ 2019ರವರೆಗೂ ಬ್ಯಾಂಕ್‍ನಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸಿದ್ದ ಆರ್. ರಶ್ಮಿ ಅವರು ಕೋರ್ ​ಬ್ಯಾಂಕಿಂಗ್ ಸಿಸ್ಟಂನ್ನು ದುರುಪಯೋಗಪಡಿಸಿಕೊಂಡು ತನ್ನ ಗಂಡ, ತಂದೆ, ತಾಯಿ, ತಂಗಿ ಸೇರಿದಂತೆ ಹತ್ತಿರದ ಸಂಬಂಧಿಕರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.

ಗ್ರಾಹಕರ ಖಾತೆಗೆ ಕನ್ನ ಹಾಕಿ, ತನ್ನ ಸಂಬಂಧಿಕರ ಖಾತೆಗಳಿಗೆ ಹಣ ವರ್ಗಾಯಿಸಿದ ಎಸ್​ಬಿಐ ಮಹಿಳಾ ಸಿಬ್ಬಂದಿ!
ಗ್ರಾಹಕರ ಖಾತೆಗೆ ಕನ್ನ ಹಾಕಿ, ಸಂಬಂಧಿಕರ ಖಾತೆಗಳಿಗೆ ಹಣ ವರ್ಗಾಯಿಸಿದ ಕ್ಲರ್ಕ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on:Mar 06, 2024 | 1:58 PM

ಚಿಕ್ಕಬಳ್ಳಾಪುರ, ಮಾರ್ಚ್​​ 6: ಬ್ಯಾಂಕುಗಳು ಅದರಲ್ಲೂ ರಾಷ್ಟ್ರೀಕೃತ ಬ್ಯಾಂಕುಗಳನ್ನು ನಂಬಿ ಗ್ರಾಹಕರು ತಮ್ಮ ಬಳಿ ಇರುವ ನಗದು ಹಣ ಸೇರಿದಂತೆ, ಬೆಲೆಬಾಳುವ ಚಿನ್ನಾಭರಣಗಳನ್ನು ಲಾಕರುಗಳಲ್ಲಿ ಭದ್ರವಾಗಿ ಇಡುತ್ತಾರೆ. ಆದರೆ ಗ್ರಾಹಕರ ಖಾತೆಯಲ್ಲಿರುವ ಹಣವನ್ನು ರಕ್ಷಣೆ ಮಾಡಬೇಕಾದ ಸರ್ಕಾರಿ ಸ್ವಾಮ್ಯದ ಖ್ಯಾತ ಬ್ಯಾಂಕಿನ (Chikkaballapur SBI) ಮಹಿಳಾ ಸಿಬ್ಬಂದಿಯೊಬ್ಬರು (Bank Employee) ಗ್ರಾಹಕರುಗಳ ಖಾತೆಯಲ್ಲಿದ್ದ 27,69,470 ರೂ. ಹಣವನ್ನು ತಮ್ಮ ಸಂಬಂಧಿಕರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಪ್ರಕರಣ (embezzlement) ತಡವಾಗಿ ಬೆಳಕಿಗೆ ಬಂದಿದೆ.

ಯಾವ ಬ್ಯಾಂಕಿನ ಗ್ರಾಹಕರ ಹಣಕ್ಕೆ ಕನ್ನ ಬಿದ್ದಿದೆ? ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯ ಆರ್‍ವಿವಿ ಕಾಂಪ್ಲೆಕ್ಸ್ ಶಾಖೆಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಎಸ್​ಬಿಐ ಶಾಖೆಯ ಗ್ರಾಹಕರ ಖಾತೆಯ ಹಣಕ್ಕೆ ಕನ್ನ ಬಿದ್ದಿದೆ. ಬ್ಯಾಂಕಿನ ಬಿ.ಜಿ.ಎಲ್. ಪಾರ್ಕಿಂಗ್ ಖಾತೆಗಳು, ಸಾಲದ ಖಾತೆಗಳು ಸೇರಿದಂತೆ ಇತರೆ ಖಾತೆದಾರರ ಖಾತೆಗಳಿಂದ ಅಕ್ರಮವಾಗಿ ರೂ.27,69,470/- ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ.

Also Read: ಚಿಕ್ಕಬಳ್ಳಾಪುರ -ಡೆಬಿಟ್ ಕಾರ್ಡ್ ಹಣದ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಉಪನ್ಯಾಸಕನಿಗೆ ಪಂಗನಾಮ

ವರ್ಗಾವಣೆ ಮಾಡಿಕೊಂಡವರು ಯಾರು? ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯ ಆರ್‍ವಿವಿ ಕಾಂಪ್ಲೆಕ್ಸ್ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ ಶಾಖೆಯಲ್ಲಿ 2014 ರಿಂದ 2019ರವರೆಗೂ ಬ್ಯಾಂಕ್‍ನಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸಿದ್ದ ಆರ್. ರಶ್ಮಿ ಅವರು ಕೋರ್ ​ಬ್ಯಾಂಕಿಂಗ್ ಸಿಸ್ಟಂನ್ನು ದುರುಪಯೋಗಪಡಿಸಿಕೊಂಡು ತನ್ನ ಗಂಡ, ತಂದೆ, ತಾಯಿ, ತಂಗಿ ಸೇರಿದಂತೆ ಹತ್ತಿರದ ಸಂಬಂಧಿಕರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.

ಯಾರ-ಯಾರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ? ಆರ್‍ವಿವಿ ಕಾಂಪ್ಲೆಕ್ಸ್ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್​​ ಇಂಡಿಯಾ ಶಾಖೆಯಲ್ಲಿ ಕ್ಲರ್ಕ್ ಆಗಿದ್ದ ಆರ್. ರಶ್ಮಿ ಹೀಗೆ ಯಾವುದೇ ಎಗ್ಗುಸಿಗ್ಗು ಇಲ್ಲದೆ ತನ್ನ ಗಂಡ ಜಿ. ಸತೀಶ್‍ಕುಮಾರ್, ತಾಯಿ ಹೆಚ್.ಕಮಲಮ್ಮ, ತಂಗಿ ಮಾಲಾಶ್ರೀ, ಪುಷ್ಪಲತ. ಆರ್, ಶಿಲ್ಪಾ. ಆರ್., ಶ್ರೀನಿಧಿ, ದೇವಿಕಾ ಎಸ್.ಜಿ. ಜ್ಯೋತಮ್ಮ, ಲಕ್ಷ್ಮೀ.ಎನ್, ಲೋಕೇಶ್.ಎಸ್, ರತ್ನಮ್ಮ, ಮೀನಾಕ್ಷಿ.ಎಸ್ ಎಂಬುವವರ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಆಂತರಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಗೌರಿಬಿದನೂರು: ವಾಹನ ಸಾಲ ವಸೂಲಾತಿಗೆ ಬಂದ ಹೆಚ್‍ಡಿಎಫ್‍ಸಿ ಏಜೆಂಟ್‍ಗೆ ಮಚ್ಚಿನಿಂದ ಹಲ್ಲೆಗೆ ಯತ್ನ!

ಎಸ್‍ಬಿಐ ಬ್ಯಾಂಕ್ ಕ್ಲರ್ಕ್ ಆರ್.ರಶ್ಮಿ ವಿರುದ್ಧ ಪ್ರಕರಣ ದಾಖಲು ಸ್ಟೇಟ್ ಬ್ಯಾಂಕ್ ಆಫ್​​ ಇಂಡಿಯಾ ಶಾಖೆಯಲ್ಲಿ ಕ್ಲರ್ಕ್ ಆಗಿದ್ದ ಆರ್. ರಶ್ಮಿ ವಿರುದ್ಧ ಬ್ಯಾಂಕಿನ ಚೀಫ್​​ ಮ್ಯಾನೇಜರ್ ಇಶಾನಿ ಚಟ್ಟೋರಾಜ್ ರವರು ಚಿಕ್ಕಬಳ್ಳಾಪುರ ನಗರಠಾಣೆಗೆ ದೂರು ನೀಡಿದ್ದು, ಐಪಿಸಿ ಸೆಕ್ಸನ್ 406, 409, 420, 34 ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:56 pm, Wed, 6 March 24

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ