ಚಿಕ್ಕಮಗಳೂರು ಅಯ್ಯನಕೆರೆಯಲ್ಲಿ ವೃದ್ಧೆಯ ಶವ ಪತ್ತೆ, ವಿಜಯಪುರ ಕಡಣಿ ಗ್ರಾಮದಲ್ಲಿ ಯುವ ರೈತ ಆತ್ಮಹತ್ಯೆ
ಆಲಮೇಲ ಕಡಣಿ ರಸ್ತೆಯಲ್ಲಿರುವ ಜಮೀನಿನಲ್ಲಿನ ಮರಕ್ಕೆ ಪುಂಡಲಿಂಗ ಜೀರಟಗಿ (22) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿದ್ದ ಬೆಳೆ ಹಾಳಾಗಿದ್ದು, ಜಮೀನಿನ ಲೀಸ್ ಹಣ ಕೊಡಲಾಗದೆ ಯುವ ರೈತ ನೇಣಿಗೆ ಶರಣಾಗಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಅಯ್ಯನಕೆರೆಯಲ್ಲಿ 60 ವರ್ಷದ ಅಪರಿಚಿತ ವೃದ್ಧೆಯ ಶವ ಪತ್ತೆಯಾಗಿದ್ದು, ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 55 ರಿಂದ 60 ವಯಸ್ಸಿನ ವೃದ್ಧೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದು ಮೇಲುನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಡೂರಿನಿಂದ ಸಖರಾಯಪಟ್ಟಣಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ ವೃದ್ಧೆ ಬಂದಿದ್ದಾರೆ ಎಂದು ಪರ್ಸ್ನಲ್ಲಿ ಸಿಕ್ಕಿರುವ ಟಿಕೆಟ್ನಿಂದ ತಿಳಿದುಬಂದಿದೆ.
ವಿಜಯಪುರ ಜಿಲ್ಲೆಯಲ್ಲಿ ಯುವ ರೈತ ಆತ್ಮಹತ್ಯೆ: ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಪ್ರಕರಣ ಅಲಮೇಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಆಲಮೇಲ ಕಡಣಿ ರಸ್ತೆಯಲ್ಲಿರುವ ಜಮೀನಿನಲ್ಲಿನ ಮರಕ್ಕೆ ಪುಂಡಲಿಂಗ ಜೀರಟಗಿ (22) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿದ್ದ ಬೆಳೆ ಹಾಳಾಗಿದ್ದು, ಜಮೀನಿನ ಲೀಸ್ ಹಣ ಕೊಡಲಾಗದೆ ಹಾಗೂ ಖಾಸಗಿಯಾಗಿ ಮಾಡಿದ ಸಾಲ ಮರು ಪಾವತಿ ಮಾಡಲಾರದೆ ನೇಣಿಗೆ ಪುಂಡಲಿಂಗ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: DySP Lakshmi Suicide Case.. 50 ದಿನ ಕಳೆದ್ರೂ ಪತ್ತೆಯಾಗಿಲ್ಲ ಲಕ್ಷ್ಮೀ ಬಳಸ್ತಿದ್ದ ಮೊಬೈಲ್