ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ದೆಹಲಿ ಮಾದರಿಯಲ್ಲಿ ಕ್ರಮ ಕೈಗೊಳ್ಳಲು ತಜ್ಞರು ಶಿಫಾರಸ್ಸು ಮಾಡಿದ್ದಾರೆ. ಈಗಾಗಲೇ ದೆಹಲಿ, ಮುಂಬೈ, ಚೆನ್ನೈನಲ್ಲಿ ಸೋಂಕಿನ ತೀವ್ರತೆ ಹೆಚ್ಚಳವಾಗುತ್ತಿದ್ದು, ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 140ರಿಂದ 200ರ ಒಳಗೆ ಪತ್ತೆಯಾಗುತ್ತಿದ್ದ ಕೇಸ್ಗಳು ಇದೀಗ 800-850ಕ್ಕೆ ಏರಿಕೆಯಾಗಿದೆ. ಹೀಗಾಗಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ ಅಂತ ತಜ್ಞರು ಹೇಳುತ್ತಿದ್ದಾರೆ.
ಮೂರನೇ ಅಲೆಗೆ ದೆಹಲಿ ಮಾದರಿಯ ಕ್ರಮಕ್ಕೆ ಸಿದ್ಧರಾಗಿ ಅಂತ ತಜ್ಞರು ಹೇಳುತ್ತಿದ್ದಾರೆ. ಯಾವ ಯಾವ ಚಟುವಟಿಕೆಗಳಿಗೆ ಯಾವಾಗಾ ನಿರ್ಬಂಧ ಹೇರಬೇಕು ಎಂಬುದನ್ನ ನಿರ್ಧರಿಸಲು ಕಲರ್ ಕೋಡ್ ಸಿದ್ಧಪಡಿಸಲು ತಜ್ಞರು ಶಿಫಾರಸ್ಸು ಮಾಡುತ್ತಿದ್ದಾರೆ. ಕೊವಿಡ್ ಪಾಸಿಟಿವ್ ರೇಟ್ ಶೇ.1ರಷ್ಟು ಕಡಿಮೆ ಇದ್ದರೆ ಯೆಲ್ಲೋ ಅಲರ್ಟ್, ಶೇ.1ರಿಂದ 2ರಷ್ಟು ಇದ್ದರೆ ಆರೆಂಜ್, 2ಕ್ಕಿಂತ ಹೆಚ್ಚು ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಿ ಚಟುವಟಿಕೆಗಳಿಗೆ ನಿರ್ಬಂಧ ಹೇರಲು ಕಲರ್ ಕೋಡ್ ಬಳಸಲು ಸೂಚಿಸಿದ್ದಾರೆ. ಇದೇ ಮಾದರಿಯನ್ನ ದೆಹಲಿಯಲ್ಲೂ ಅನುಸರಿಸಲಾಗುತ್ತಿದೆ.
ತಾಂತ್ರಿಕ ಸಲಹಾ ಸಮಿತಿ ತಜ್ಞರ ಶಿಫಾರಸುಗಳು ಏನು?
ಡೆಲ್ಟಾದಿಂದ ಎರಡನೇ ಅಲೆಯ ತೀವ್ರತೆಯನ್ನ ಎದುರಿಸಿದ್ದ ಜನರು, ಇದೀಗ ಒಮಿಕ್ರಾನ್ ತೀವ್ರತೆಯನ್ನೂ ಎದುರಿಸಬೇಕಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ಶಿಫಾರಸ್ಸು ಮಾಡುತ್ತಿದ್ದಾರೆ.
* ಕೊವಿಡ್ ಪರೀಕ್ಷೆ ಹೆಚ್ಚಿಸಬೇಕು.
* ಕ್ಲಸ್ಟರ್ಗಳಿಂದ ಶೇ.30 ಎಲ್ಲ ಮಾದರಿಗಳನ್ನ ಕಡ್ಡಾಯವಾಗಿ ಜಿನೋಮಿಕ್ ಸೀಕ್ವೆನ್ಸಿಂಗ್ಗೆ ಕಳುಹಿಸಬೇಕು.
* ಎಲ್ಲಾ ವಸತಿ ಶಾಲೆ, ಹಾಸ್ಟೆಲ್, ಅಪಾರ್ಟ್ಮೆಂಟ್, ಮಾಲ್ ಮತ್ತು ಜನಸಂದಣಿ ಇರುವ ಇತರ ಸ್ಥಳಗಳಲ್ಲಿ ಕೊವಿಡ್ ನಿಯಮ ಪಾಲಿಸಬೇಕು.
* ಸರಿಯಾಗಿ ಎಸ್ಒಪಿ ಜಾರಿಯಾಗಿದ್ದೆಯಾ ಎಂಬುದನ್ನ ಪರಿಶೀಲಿಸಬೇಕು.
* ಸೌಮ್ಯ ರೋಗದ ಲಕ್ಷಣಗಳನ್ನ ಹೊಂದಿದ್ದರೆ ಮಾತ್ರ ಹೋಂ ಐಸೋಲೇಷನ್ ಆಯ್ಕೆ ಮಾಡಬೇಕು.
* ಉತ್ತಮವಾಗಿರುವ CCC ಸಿದ್ಧಪಡಿಸುವಂತೆ ತಜ್ಞರು ಸೂಚಿಸಿದ್ದಾರೆ.
ಇದನ್ನೂ ಓದಿ
Kajal Aggarwal: ತಾಯಿಯಾಗಲಿದ್ದಾರೆ ಕಾಜಲ್; ಹೊಸ ಉತ್ಸಾಹದೊಂದಿಗೆ 2022ನ್ನು ಬರಮಾಡಿಕೊಂಡ ನಟಿ
ಧೂಳೆಬ್ಬಿಸಿದ ಎತ್ತುಗಳ ನಾಗಲೋಟ; ರೋಮಾಂಚನಗೊಳಿಸಿದ ಧಾರವಾಡ ಚಕ್ಕಡಿ ಸ್ಪರ್ಧೆ
Published On - 8:53 am, Sun, 2 January 22