ಧೂಳೆಬ್ಬಿಸಿದ ಎತ್ತುಗಳ ನಾಗಲೋಟ; ರೋಮಾಂಚನಗೊಳಿಸಿದ ಧಾರವಾಡ ಚಕ್ಕಡಿ ಸ್ಪರ್ಧೆ
ಕೃಷಿ ಚಟುವಟಿಕೆಗಳು ಮುಗಿದು ರೈತರು ಕೊಂಚ ನಿರಾಳರಾಗಿದ್ದಾರೆ. ವರ್ಷವಿಡೀ ದುಡಿದ ಅನ್ನದಾತನಿಗೆ ರಿಲೀಫ್ ಸಿಕ್ಕಿದೆ. ಇದೇ ರಿಲೀಫ್‌ನಲ್ಲಿರೋ ಧಾರವಾಡದ ರೈತರು ಚಕ್ಕಡಿ ಬಂಡಿ ಓಟದ ಮೊರೆ ಹೋಗಿದ್ರು.
ಧಾರವಾಡ: ಅಲ್ಲಿ ರೋಮಾಂಚನ ಇತ್ತು. ಮೈನವಿರೇಳಿಸೋ ಸ್ಪರ್ಧೆ ಇತ್ತು..ಮಿಂಚಿನ ಓಟ ದಾಖಲಿಸಿದ್ದವರಿಗೆ ಬಹುಮಾನವೂ ಇತ್ತು. ಅಷ್ಟಕ್ಕೂ ಕೃಷಿ ಕೆಲಸ ಮುಗಿಸಿ ಮನೆಯಲ್ಲಿರೋ ರೈತರು ಚಕ್ಕಡಿ ಓಟದ ಸ್ಪರ್ಧೆ ಆಯೋಜಿಸಿದ್ರು.
ಕೃಷಿ ಚಟುವಟಿಕೆಗಳು ಮುಗಿದು ರೈತರು ಕೊಂಚ ನಿರಾಳರಾಗಿದ್ದಾರೆ. ವರ್ಷವಿಡೀ ದುಡಿದ ಅನ್ನದಾತನಿಗೆ ರಿಲೀಫ್ ಸಿಕ್ಕಿದೆ. ಇದೇ ರಿಲೀಫ್‌ನಲ್ಲಿರೋ ಧಾರವಾಡದ ರೈತರು ಚಕ್ಕಡಿ ಬಂಡಿ ಓಟದ ಮೊರೆ ಹೋಗಿದ್ರು. ಹೊಸ ವರ್ಷದ ಅಂಗವಾಗಿ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗೆವಾಡ ಗ್ರಾಮದಲ್ಲಿ ಖಾಲಿ ಚಕ್ಕಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮದ ಚಕ್ಕಡಿ ದಾರಿಯಲ್ಲೇ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬೇರೆ ಬೇರೆ ಊರುಗಳಿಂದ ತಮ್ಮ ಇಷ್ಟದ ಎತ್ತುಗಳೊಂದಿಗೆ ಆಗಮಿಸಿದ್ದ ರೈತರು, ಉತ್ಸಾಹದಿಂದಲೇ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಲ್ಲಿ ಜಯ ದಾಖಲಿಸಿದವರಿಗೆ ಒಂದೂವರೆ ಲಕ್ಷದವರೆಗೆ ಬಹುಮಾನ ನೀಡಲಾಗಿತ್ತು.
ಅಷ್ಟಕ್ಕೂ ಒಂದು ನಿಮಿಷದ ಸ್ಪರ್ಧೆ ಇದಾಗಿದ್ದು, ಈ ಅವಧಿಯಲ್ಲಿ ಎಷ್ಟು ದೂರ ಜೋಡಿ ಎತ್ತುಗಳು ಚಕ್ಕಡಿಯೊಂದಿಗೆ ಸಾಗುತ್ತವೆ ಅನ್ನುವುದರ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತೆ. ಮೆಲ್ನೋಟಕ್ಕೆ ಇಲ್ಲಿ ಸ್ಪರ್ಧೆ ಕಂಡ್ರೂ ಇದ್ರ ಹಿಂದೆ ಎತ್ತುಗಳನ್ನ ಌಕ್ಟೀವ್ ಮಾಡುವ ತಂತ್ರವೂ ಇತ್ತು. ಹೌದು ಕೃಷಿ ಚಟುವಟಿಕೆ ಮುಗಿಸಿರೋ ಎತ್ತುಗಳು ಕೆಲಸವಿಲ್ಲದೇ ಸೋಮಾರಿಗಳಾಗಿರುತ್ತವೆ. ಆ ಎತ್ತುಗಳಿಗೆ ಕೊಂಚ ದೈಹಿಕ ಕಸರತ್ತು ಸಿಗಲಿ ಅನ್ನೋ ಉದ್ದೇಶಕ್ಕೂ ಕೂಡ ಇಂಥ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.
ಒಟ್ನಲ್ಲಿ ಕೃಷಿ ಕೆಲಸ ಮುಗಿಸಿರೋ ರೈತರು, ರಿಲೀಫ್ ಪಡೆಯಲು ಈಗ ಸ್ಪರ್ಧೆಯ ಮೊರೆ ಹೋಗಿದ್ದಾರೆ. ತಮ್ಮ ಎತ್ತುಗಳನ್ನೇ ಬಳಸಿಕೊಂಡು ಅಖಾಡದಲ್ಲಿ ಧೂಳೆಬ್ಬಿಸಿದ್ದಾರೆ.
ನರಸಿಂಹಮೂರ್ತಿ ಪ್ಯಾಟಿ , ಟಿವಿ9, ಧಾರವಾಡ
ಇದನ್ನೂ ಓದಿ: ದಾವಣಗೆರೆಯ ಗಾಜಿನ ಮನೆಗೆ ಪ್ರವಾಸಿಗರು ಫಿದಾ; ಧಾರಾವಾಹಿ, ಸಿನಿಮಾ ಶೂಟಿಂಗ್ಗಳಿಗೂ ಇದು ನೆಚ್ಚಿನ ತಾಣ