ಸರ್ಕಾರದಿಂದಲೇ ಧಾರವಾಡ ಇತಿಹಾಸದ ಗ್ರಂಥ ತರುತ್ತೇವೆ; ರಾಜ್ಯದ ಇತರೆ ಐತಿಹಾಸಿಕ ಸ್ಥಳಗಳ ಪುಸ್ತಕ ತರುತ್ತೇವೆ: ಬಸವರಾಜ ಬೊಮ್ಮಾಯಿ
ರಾಜಕಾರಣಕ್ಕಾಗಿ ಪಾದಯಾತ್ರೆ, ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸಮಾಡ್ತಾರೆ. ಇಂಥವರಿಂದ ಪಾಠ ಕಲಿಯಬೇಕಾದ ಅವಶ್ಯಕತೆ ನಮಗಿಲ್ಲ. ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಧಾರವಾಡ: ಧಾರವಾಡದ ಇತಿಹಾಸ ಸರ್ಕಾರವೇ ಪ್ರಕಟಿಸಲಿದೆ. ಸರ್ಕಾರದಿಂದಲೇ ಧಾರವಾಡದ ಇತಿಹಾಸದ ಗ್ರಂಥ ತರುತ್ತೇವೆ. ಧಾರವಾಡದ ಮಹನೀಯರ ಪುಸ್ತಕ ಪ್ರಕಟಿಸುತ್ತೇವೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಇಡುತ್ತೇನೆ. ಧಾರವಾಡ ಇತಿಹಾಸ ರಚನೆ ಜವಾಬ್ದಾರಿ ವಿದ್ಯಾವರ್ಧಕ ಸಂಘಕ್ಕೆ ಕೊಡುವೆ. ರಾಜ್ಯದ ಇತರೆ ಐತಿಹಾಸಿಕ ಸ್ಥಳಗಳ ಪುಸ್ತಕ ಸಹ ತರುತ್ತೇವೆ. ಸರಣಿ ಗ್ರಂಥಗಳನ್ನು ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಿಎಂ ಭಾಷಣ ಮಾಡಿ ಮಾತನಾಡಿದ್ದಾರೆ.
ಇತಿಹಾಸ ತಿರುಚುವವರು ಹೆಚ್ಚಾಗಿದ್ದಾರೆ. ನೀವು ಚರಿತ್ರೆ ಒಂದು ಭಾಗ ಆಗಬೇಕು. ಇಲ್ಲದಿದ್ದರೆ ಹೊಸ ಚರಿತ್ರೆ ನಿರ್ಮಾಣ ಮಾಡಬೇಕು. ಇತಿಹಾಸ ಗೊತ್ತಿದ್ದವರು ಮಾತ್ರ ಭವಿಷ್ಯ ಬರೆಯುತ್ತಾರೆ. ಇತ್ತೀಚೆಗೆ ಇತಿಹಾಸ ತಿರುಚುವ ಕೆಲಸ ಬಹಳ ಆಗಿದೆ. ಅನೇಕ ಉದಾಹರಣೆ ನಾ ಕೊಡಬಲ್ಲೆ. ಧಾರವಾಡ ಇತಿಹಾಸ ಹೇಗೆ ತಿರುಚಿದ್ದಾರೆ ಅನ್ನೋದು ನನಗೆ ಗೊತ್ತು. ತಿರುಚುವವರದ್ದೇ ಒಂದು ಇತಿಹಾಸ ಇದೆ. ಸುದೈವವೋ, ದುರ್ದೈವವೋ ಅದು ನನಗೆ ಗೊತ್ತಿದೆ. ಇತ್ತೀಚೆಗೆ ಬೆಳೆಯುತ್ತಿರೋ ಈ ಪ್ರವೃತ್ತಿ ಸರಿಯಲ್ಲ. ಸತ್ಯ, ನಿಷ್ಠುರವಾದ ಇತಿಹಾಸ ಕೊಡುವ ಉಪಕಾರ ಮಾಡಬೇಕಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಾನು ನಿಮ್ಮವನು, ನಿಮ್ಮೂರಿನ ಹುಡುಗ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ. ಕ್ಷೇತ್ರದ ಜನ, ನಮ್ಮ ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು, ಹಿರಿಯರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ. ಪಕ್ಷದ ಶಾಸಕರು, ಸಚಿವರು ಸಂಪೂರ್ಣ ಸಹಕಾರ ನೀಡ್ತಿದ್ದಾರೆ. ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ, ಅದರ ಅರಿವು ನನಗಿದೆ. ಪ್ರತಿ ದಿನ ನಾನು 10ರಿಂದ 15 ಗಂಟೆ ಕೆಲಸ ಮಾಡುತ್ತಿದ್ದೇನೆ. ಅದನ್ನು ಮುಂದುವರಿಸುವೆ. ಕರ್ನಾಟಕ ರಾಜ್ಯದಲ್ಲಿ ಆಮೂಲಾಗ್ರ ಬದಲಾವಣೆ ತರುತ್ತೇನೆ. ಬದಲಾವಣೆ ಸಂಕಲ್ಪ ಮಾಡುವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸಮಾಡ್ತಾರೆ ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ನಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ಅಣ್ಣಾಮಲೈಯನ್ನು ಸಿ.ಟಿ.ರವಿ ಎತ್ತಿಕಟ್ಟುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ಈ ಬಗ್ಗೆ ಹೇಳಿಕೆ ನೀಡಿದ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸರ್ಕಾರಕ್ಕೆ ಮೇಕೆದಾಟು ಯೋಜನೆ ಬಗ್ಗೆ ಬದ್ಧತೆ ಇದೆ. ಅದಕ್ಕೆ ಕೆಲಸ ಮಾಡ್ತೇವೆ, ಅವರು ಅರ್ಥ ಮಾಡಿಕೊಳ್ಬೇಕಿತ್ತು. ರಾಜಕಾರಣಕ್ಕಾಗಿ ಪಾದಯಾತ್ರೆ, ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸಮಾಡ್ತಾರೆ. ಇಂಥವರಿಂದ ಪಾಠ ಕಲಿಯಬೇಕಾದ ಅವಶ್ಯಕತೆ ನಮಗಿಲ್ಲ. ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ-ಬೆಳಗಾವಿ ತ್ರಿವಳಿ ನಗರ ಪರಿಕಲ್ಪನೆ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ತ್ರಿವಳಿ ನಗರ ಪರಿಕಲ್ಪನೆ ಬಗ್ಗೆ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಸಮಗ್ರ ಅಭಿವೃದ್ಧಿ ಆಗಬೇಕಿದೆ. ಬಜೆಟ್‌ನಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡಲಾಗುವುದು. ಬೆಳಗಾವಿ-ಧಾರವಾಡ-ಹುಬ್ಬಳ್ಳಿ ಪ್ರಮುಖ ಪಾತ್ರ ಕೊಡಲಾಗುವುದು. ಚೆನ್ನೈ ಕಾರಿಡಾರ್ನಲ್ಲಿ ಪ್ರಮುಖ ಪಾತ್ರವನ್ನ ವಹಿಸಲಿವೆ. ಮುಂದಿನ ದಿನಗಳಲ್ಲಿ 3 ನಗರ ಪ್ರಮುಖ ಪಾತ್ರ ವಹಿಸಲಿವೆ. ದೊಡ್ಡ ಉದ್ಯಮಗಳು, ಕ್ಲಸ್ಟರ್‌ಗಳು ಈ ಭಾಗದಲ್ಲಿ ಬರಲಿವೆ. ಸಾಕಷ್ಟು ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ನೀರಿಗಾಗಿ ಮನೆಗೊಬ್ಬರಂತೆ ಚಳವಳಿಗೆ ಬನ್ನಿ: ಮೇಕೆದಾಟು ಹೋರಾಟ ಸಭೆಯಲ್ಲಿ ಸಿದ್ದರಾಮಯ್ಯ ಕರೆ
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಹಿನ್ನೆಲೆ; ಕಾಂಗ್ರೆಸ್ ಹೊಣೆಗೇಡಿತನದ ಬಗ್ಗೆ ಸ್ಫೋಟಕ ಮಾಹಿತಿ ಕೊಡಲಿದ್ದೇನೆ, ಕಾಯಿರಿ: ಗೋವಿಂದ ಕಾರಜೋಳ
Published On - 9:53 pm, Sun, 2 January 22