ಮೇಕೆದಾಟು ಪಾದಯಾತ್ರೆ ಹಿನ್ನೆಲೆ; ಕಾಂಗ್ರೆಸ್ ಹೊಣೆಗೇಡಿತನದ ಬಗ್ಗೆ ಸ್ಫೋಟಕ ಮಾಹಿತಿ ಕೊಡಲಿದ್ದೇನೆ, ಕಾಯಿರಿ: ಗೋವಿಂದ ಕಾರಜೋಳ

ಮೇಕೆದಾಟು ಪಾದಯಾತ್ರೆ ಹಿನ್ನೆಲೆ; ಕಾಂಗ್ರೆಸ್ ಹೊಣೆಗೇಡಿತನದ ಬಗ್ಗೆ ಸ್ಫೋಟಕ ಮಾಹಿತಿ ಕೊಡಲಿದ್ದೇನೆ, ಕಾಯಿರಿ: ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಇವತ್ತು ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡ್ತಾ ಇದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಹೊಣೆಗೇಡಿತನ ಮಾಡಿದ್ದ ವಿಚಾರದಲ್ಲಿ ಸ್ಪೋಟಕ ಮಾಹಿತಿ ಕೊಡಲಿದ್ದೇನೆ. ತಾವು ದಯವಿಟ್ಟು ಕಾಯಿರಿ ಎಂದು ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

TV9kannada Web Team

| Edited By: ganapathi bhat

Jan 01, 2022 | 2:37 PM

ಬೆಂಗಳೂರು: ಕಾಂಗ್ರೆಸ್​ನವರು ನೀರಾವರಿ ಯೋಜನೆಯಲ್ಲಿ ರಾಜಕಾರಣ ಮಾಡ್ತಾರೆ. ಆದರೆ ನಾವು ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ಜನವರಿ 3 ರಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಇದೆ. ಅದಾದ ಬಳಿಕ ಕಾಂಗ್ರೆಸ್ ಹೊಣೆಗೇಡಿತನದ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೇನೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್​ನವರು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಜನವರಿ 7, 2013 ರಿಂದ ಕಾಂಗ್ರೆಸ್​ನವರು ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಅಂತ ಪಾದಯಾತ್ರೆ ಮಾಡಿದ್ರು. ಬಳಿಕ, ಏಳು ವರ್ಷದಲ್ಲಿ ಅವರು ಅಧಿಕಾರದಲ್ಲಿ ಇದ್ರು. ಅವರು ಕೃಷ್ಣಾಗಾಗಿ ಖರ್ಚು ಮಾಡಿದ್ದು ಏಳು ಸಾವಿರದ ಏಳುನೂರಾ ಇಪ್ಪತ್ತಾರು ಕೋಟಿ. ಸಿದ್ದರಾಮಯ್ಯ, ಪರಮೇಶ್ವರ್ ಇಬ್ಬರ ನಡುವಿನ ಪೈಪೋಟಿಗಾಗಿ ನಡೆದಿದ್ದ ಪಾದಯಾತ್ರೆ ಅದು. ಇವತ್ತು ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡ್ತಾ ಇದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಹೊಣೆಗೇಡಿತನ ಮಾಡಿದ್ದ ವಿಚಾರದಲ್ಲಿ ಸ್ಪೋಟಕ ಮಾಹಿತಿ ಕೊಡಲಿದ್ದೇನೆ. ತಾವು ದಯವಿಟ್ಟು ಕಾಯಿರಿ ಎಂದು ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

ಅವರ ಪಾದಯಾತ್ರೆ ಆರಂಭ ಆಗುವ ಒಂದೆರಡು ದಿನಗಳ ಮುಂಚೆಯೇ ಮಾಹಿತಿ ಕೊಡಲಿದ್ದೇನೆ. ಸತ್ಯವನ್ನು ಜನರ ಮುಂದಿಡ್ತೇವೆ. ನೂರಾರು ಹೋರಾಟ ಮಾಡಲಿ ನಮಗೇನೂ ಆತಂಕ ಇಲ್ಲ. ಯಾವ ಕಾರಣಕ್ಕೂ ಜನ ಒಂದು ಸಲ‌ ಮೋಸ ಹೋಗ್ತಾರೆ, ಎರಡನೇ ಸಲ ಮೋಸ ಹೋಗಲ್ಲ. ಹೀಗಾಗಿಯೇ ಸ್ಫೋಟಕ ಮಾಹಿತಿಯನ್ನು 9ನೇ ತಾರೀಖಿನ ಮೊದಲು ಇಡ್ತೇನೆ. ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸ್ತಿದ್ದೇವೆ ಎಂದು ಹೇಳಿದ್ದಾರೆ.

ನಾನು ಯಾವತ್ತೂ ಕೂಡ ಅಧಿಕಾರದಲ್ಲಿ ಇರಬೇಕು, ಮಂತ್ರಿ ಆಗಬೇಕು ಅಂತ ಬಯಸಿದವನಲ್ಲ. ಸಿಂದಗಿ ಉಪಚುನಾವಣೆ ವೇಳೆಯಲ್ಲಿ ಸಿದ್ದರಾಮಯ್ಯ ಒಂದು ಮಾತು ಹೇಳಿದ್ದರು. ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ ಹೊಟ್ಟೆ ಪಾಡಿಗೆ ಬಿಜೆಪಿಗೆ ಹೋಗಿದ್ದಾರೆ ಅಂದಿದ್ರು. ಈ ಮಾತನ್ನು ಸಿದ್ದರಾಮಯ್ಯ ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಇವರ ಕೆಟ್ಟ ಮನಸ್ಥಿತಿಗೆ ರಾಜ್ಯದ ದಲಿತರು ಉತ್ತರ ಕೊಡಲಿದ್ದಾರೆ ಎಂದು ಗೋವಿಂದ ಕಾರಜೋಳ ಟೀಕಿಸಿದ್ದಾರೆ.

ಮೇಕೆದಾಟು ಪಾದಯಾತ್ರೆ ಹಿನ್ನೆಲೆ: ಡಿಕೆ ಶಿವಕುಮಾರ್ ವಾಕಿಂಗ್ ಅಭ್ಯಾಸ ಜನವರಿ 9 ರಿಂದ ಮೇಕೆದಾಟು ಪಾದಯಾತ್ರೆ ಹಿನ್ನೆಲೆ, ಪ್ರತಿದಿನ ಸ್ಯಾಂಕಿ ಟ್ಯಾಂಕ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಕಿಂಗ್ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಡಿ.ಕೆ. ಶಿವಕುಮಾರ್​ರಿಂದ ಪ್ರತಿದಿನ 6-7 ಕಿಲೋ ಮೀಟರ್ ವಾಕಿಂಗ್ ಅಭ್ಯಾಸ ನಡೆಯುತ್ತಿದೆ. ಪ್ರತಿದಿನ ಬೆಳಗ್ಗೆ ವಾಕಿಂಗ್ ಮೂಲಕ ಸಿದ್ದತೆ ನಡೆಸುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆಯಲ್ಲಿ ಪ್ರತಿನಿತ್ಯ 15 ಕಿಲೋ ಮೀಟರ್ ಕ್ರಮಿಸುವ ಉದ್ದೇಶ ಇದೆ ಎಂದು ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆಗೆ ಹಂಸಲೇಖ ಸಾಥ್​; 2 ಹಾಡು ಬರೆಯಲಿರುವ ‘ನಾದಬ್ರಹ್ಮ’

ಇದನ್ನೂ ಓದಿ: ನೀರಾವರಿ ಸಚಿವರಾಗಿದ್ದಾಗ ಸುಮ್ಮನಿದ್ದ ಶಿವಕುಮಾರ ಈಗ ಯಾಕೆ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ? ಹೆಚ್ ಡಿ ದೇವೇಗೌಡ

Follow us on

Related Stories

Most Read Stories

Click on your DTH Provider to Add TV9 Kannada