AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಹೆಚ್ಚಾದ ಮದ್ರಾಸ್ ಐ ರೋಗ: ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ

ಪಿಂಕ್‌ ಐ ಅಥವಾ ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ. ಈ ರೋಗದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಕರ್ನಾಟಕದಲ್ಲಿ ಹೆಚ್ಚಾದ ಮದ್ರಾಸ್ ಐ ರೋಗ: ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ
ಮದ್ರಾಸ್​ ಐ ರೋಗ
Vinay Kashappanavar
| Updated By: ವಿವೇಕ ಬಿರಾದಾರ|

Updated on:Jul 31, 2023 | 11:21 AM

Share

ಬೆಂಗಳೂರು ಜು.31: ಪಿಂಕ್‌ ಐ ಅಥವಾ ಕಾಂಜಂಕ್ಟಿವಿಟಿಸ್ (Conjunctivitis) ಅಥವಾ ಮದ್ರಾಸ್ ಐ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ. ಇದರಿಂದ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ರೋಗ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Health Department) ಮಾರ್ಗಸೂಚಿ ಹೊರಡಿಸಿದೆ. ಅಲ್ಲದೇ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ತಿಳಿಸಿದೆ.

ಮದ್ರಾಸ್ ಐ ರೋಗದ ಲಕ್ಷಣಗಳು

  1. ಕಣ್ಣು ಕೆಂಪಾಗುವುದು, ನೀರು ಸೋರುವಿಕೆ
  2. ಅತಿಯಾದ ಕಣ್ಣೀರು
  3. ಕಣ್ಣಿನಲ್ಲಿ ತುರಿಕೆ
  4. ಸತತ ಕಣ್ಣು ನೋವು ಮತ್ತು ಚುಚ್ಚುವಿಕೆ
  5. ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು
  6. ದೃಷ್ಟಿ ಮಂಜಾಗುವುದು
  7. ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವುದು

ಮದ್ರಾಸ್ ಐ ಬರದಂತೆ ತಡೆಯುವುದು ಹೇಗೆ ?

  1. ವೈಯಕ್ತಿಕವಾಗಿ ಸ್ವಚ್ಛತೆ ಗೆ ಆದ್ಯತೆ ಕೊಡಿ
  2. ಆರೋಗ್ಯವಂತ ವ್ಯಕ್ತಿಯು ಸೊಂಕು ಇರುವ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕದಿಂದ ದೂರ ಇರುವುದು.
  3. ಸೊಂಕಿತ ವ್ಯಕ್ತಿ ಬಳಸಿದ ಕರವಸ್ರ್ತ ಮತ್ತು ಇತರ ವಸ್ತುಗಳನ್ನು ಬಳಸಬಾರದು.
  4. ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನ ತೊಳೆಯಬೇಕು.
  5. ಸೊಂಕಿತ ವ್ಯಕ್ತಿಗಳಿಗೆ ಶೀತ, ಜ್ವರ, ಕೆಮ್ಮು ಇದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು
  6. ತೀವ್ರ ಸೊಂಕು ಉಂಟಾದರೆ ತಕ್ಷಣವೇ ನೇತ್ರ ತಜ್ಞರನ್ನ ಭೇಟಿ ಮಾಡಬೇಕು

ಇದನ್ನೂ ಓದಿ: Conjunctivitis: ಬೆಂಗಳೂರಿನಲ್ಲಿ ಕಾಂಜಂಕ್ಟಿವಿಟಿಸ್ ಪ್ರಕರಣ ಹೆಚ್ಚಳ ; ಪೋಷಕರಲ್ಲಿ ಹೆಚ್ಚಿದ ಆತಂಕ

ರೋಗ ಕಡಿಮೆಯಾಗಲು ಏನು ಮಾಡಬೇಕು ?

  1. ಸ್ಪಚ್ಫವಾದ ನೀರಿನಿಂದ ಕಣ್ಣುಗಳನ್ನ ಶುಚಿಗೊಳಿಸಿ
  2. ಸೊಂಕು ಕಂಡು ಬಂದ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆಯಿರಿ.
  3. ಸೊಂಕಿತ ವ್ಯಕ್ತಿಗಳು ಪೌಷ್ಟಿಕ ಆಹಾರ ಸೇವಿಸಿ.
  4. ಸೊಂಕಿತ ವ್ಯಕ್ತಿಗಳು ಶುಚಿಯಾದ ಕರವಸ್ತ್ರ ಬಳಸಿ

ಏನು ಮಾಡಬಾರದು ?

  1. ಕೈಗಳಿಂದ ಪದೇ ಪದೇ ಕಣ್ಣುಗಳನ್ನ ಮುಟ್ಟಬೇಡಿ.
  2. ಸ್ವಯಂ ಚಿಕಿತ್ಸಾ ವಿಧಾನಗಳನ್ನ ಮಾಡಬಾರದು.
  3. ಸೊಂಕಿತ ವ್ಯಕ್ತಿಯ ಸನಿಹದಿಂದ ದೂರವಿರಿ.
  4. ಸೊಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನ ಬಳಸುವುದು.

ಮದ್ರಾಸ್ ಐ ಮತ್ತು ಡೆಂಗ್ಯೂ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಮಾತನಾಡಿ ಚಿಕಿತ್ಸೆ ನಿಡುತ್ತಿದ್ದೇವೆ ನಾವು ಕಡಿಮೆ ಮಾಡಲಿಕ್ಕೆ ಕ್ರಮ ವಹಿಸುತ್ತೆವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:12 am, Mon, 31 July 23

Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ
ವಿಲ್ ಜ್ಯಾಕ್ಸ್ ಬಿರುಗಾಳಿ ಬ್ಯಾಟಿಂಗ್: 57 ಎಸೆತಗಳಲ್ಲಿ ಮುಗಿದ ಪಂದ್ಯ
ವಿಲ್ ಜ್ಯಾಕ್ಸ್ ಬಿರುಗಾಳಿ ಬ್ಯಾಟಿಂಗ್: 57 ಎಸೆತಗಳಲ್ಲಿ ಮುಗಿದ ಪಂದ್ಯ