ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ ಮೊದಲ ಬಲಿ: ಕಲಬುರಗಿ ವೃದ್ಧನ ಜೀವ ಹಿಂಡಿದ ವೈರಸ್!

|

Updated on: Mar 13, 2020 | 7:17 AM

ಬೆಂಗಳೂರು: ಚೀನಾ.. ಇಟಲಿ.. ಇರಾನ್.. ಅಮೆರಿಕ ಸೇರಿ ಬಹಳಷ್ಟು ದೇಶಗಳಲ್ಲಿ ಹೆಮ್ಮಾರಿ ಕೊರೊನಾ ಸಾವಿನ ಕೇಕೆ ಹಾಕುತ್ತಿದೆ. ದಿನಕ್ಕೆ ಏನಿಲ್ಲ ಅಂದ್ರೂ ನೂರು, ಇನ್ನೂರು ಜನರನ್ನು ಬಲಿ ಪಡೆದು ತನ್ನ ಕಬಂಧ ಬಾಹು ಚಾಚುತ್ತಲೇ ಇದೆ. ಸದ್ಯ ಮಹಾಮಾರಿ ಕೊರೊನಾ ಕಲಬುರಗಿಯಲ್ಲಿ ವೃದ್ಧ ವೈರಸ್​ಗೆ ಬಲಿಯಾಗಿದ್ದು, ಇದು ಭಾರತದಲ್ಲಿ ಮೊದಲ ಬಲಿಯಾಗಿದೆ. ಕಲಬುರಗಿ ವೃದ್ಧನ ಜೀವ ಹಿಂಡಿದ ‘ಕಿಲ್ಲರ್’ ಕೊರೊನಾ: ಯಾವ ಹೆಮ್ಮಾರಿ ರಾಜ್ಯಕ್ಕೆ ಬರದಿರಲಿ ಅಂತಾ ಜನ ಪ್ರಾರ್ಥಿಸುತ್ತಿದ್ರೋ? ಅದ್ಯಾವ ಮಹಾಮಾರಿ ಕರುನಾಡಿನ ಜನರನ್ನು ಬಲಿ […]

ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ ಮೊದಲ ಬಲಿ: ಕಲಬುರಗಿ ವೃದ್ಧನ ಜೀವ ಹಿಂಡಿದ ವೈರಸ್!
Follow us on

ಬೆಂಗಳೂರು: ಚೀನಾ.. ಇಟಲಿ.. ಇರಾನ್.. ಅಮೆರಿಕ ಸೇರಿ ಬಹಳಷ್ಟು ದೇಶಗಳಲ್ಲಿ ಹೆಮ್ಮಾರಿ ಕೊರೊನಾ ಸಾವಿನ ಕೇಕೆ ಹಾಕುತ್ತಿದೆ. ದಿನಕ್ಕೆ ಏನಿಲ್ಲ ಅಂದ್ರೂ ನೂರು, ಇನ್ನೂರು ಜನರನ್ನು ಬಲಿ ಪಡೆದು ತನ್ನ ಕಬಂಧ ಬಾಹು ಚಾಚುತ್ತಲೇ ಇದೆ. ಸದ್ಯ ಮಹಾಮಾರಿ ಕೊರೊನಾ ಕಲಬುರಗಿಯಲ್ಲಿ ವೃದ್ಧ ವೈರಸ್​ಗೆ ಬಲಿಯಾಗಿದ್ದು, ಇದು ಭಾರತದಲ್ಲಿ ಮೊದಲ ಬಲಿಯಾಗಿದೆ.

ಕಲಬುರಗಿ ವೃದ್ಧನ ಜೀವ ಹಿಂಡಿದ ‘ಕಿಲ್ಲರ್’ ಕೊರೊನಾ:
ಯಾವ ಹೆಮ್ಮಾರಿ ರಾಜ್ಯಕ್ಕೆ ಬರದಿರಲಿ ಅಂತಾ ಜನ ಪ್ರಾರ್ಥಿಸುತ್ತಿದ್ರೋ? ಅದ್ಯಾವ ಮಹಾಮಾರಿ ಕರುನಾಡಿನ ಜನರನ್ನು ಬಲಿ ಪಡೆಯದಿರಲಿ ಅಂತಾ ಜನ ಬೇಡಿಕೊಳ್ತಿದ್ರೋ? ಅದ್ಯಾವ ಕ್ರೂರಿ ಸಾವಿನ ಕೇಕೆ ಹಾಕದಿರಲಿ ಅಂತಾ ಜನ ಮಾತಾಡಿಕೊಳ್ತಿದ್ರೋ ರಾಜ್ಯದಲ್ಲೀಗ ಅದೇ ಕಿಲ್ಲರ್ ಕೊರೊನಾ ಅಟ್ಟಹಾಸ ಮೆರೆದಿದೆ. ಕಲಬುರಗಿಯಲ್ಲಿ ಕೊರೊನಾ ವೈರಸ್ ವೈದ್ಧನನ್ನು ಬಲಿ ಪಡೆದಿದ್ದು, ಭಾರತದಲ್ಲಿ ಮೊದಲ ಬಲಿಯಾಗಿದೆ.

ಭಾರತದಲ್ಲಿ ಮೊದಲ ಬಲಿ.. ಕರ್ನಾಟಕದಿಂದಲೇ ಶುರು..!
ಯೆಸ್.. ಇಡೀ ಜಗತ್ತನ್ನೇ ನಡುಗಿಸಿರೋ ಕಿಲ್ಲರ್ ಕೊರೊನಾ, ಈಗ ರಾಜ್ಯದಲ್ಲೂ ಸಾವಿನ ಕೇಕೆ ಹಾಕಿದೆ. ದುಬೈನಿಂದ ಕಲಬುರಗಿಗೆ ಬಂದಿದ್ದ 76 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿರೋದು ದೃಢಪಟ್ಟಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಆರೋಗ್ಯ ಸಚಿವ ಶ್ರೀರಾಮುಲು, ಈ ಸುದ್ದಿಯನ್ನ ಖಚಿತ ಪಡಿಸಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಅಷ್ಟಕ್ಕೂ ಮೃತ ವೃದ್ಧ ದುಬೈನಿಂದ ಬಂದಿದ್ದು ಯಾವಾಗ? ಎಲ್ಲೆಲ್ಲಿ ಟ್ರೀಟ್​ಮೆಂಟ್ ಪಡೆದಿದ್ರು ಅನ್ನೋದನ್ನು ಡಿಟೇಲ್ ಆಗಿ ತೋರಿಸ್ತೀವಿ ನೋಡಿ.

‘ಕೊರೊನಾ’ ಬಂದಿದ್ದೇಗೆ..?
ಫೆಬ್ರವರಿ 26ರಂದು ವೃದ್ಧ ದುಬೈನಿಂದ ಕಲಬುರಗಿಗೆ ಬಂದಿದ್ದ. ಈ ವೇಳೆ, ಜ್ವರ, ಕೆಮ್ಮು ಕಾಣಿಸಿಕೊಂಡಿದ್ರಿಂದ ಮಾರ್ಚ್ 6ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಮಾರ್ಚ್ 8ರಂದು ಥ್ರೋಟ್​ಸ್ವ್ಯಾಬ್ ಪರೀಕ್ಷೆಗೆ ಅಂತಾ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿತ್ತು. ನಂತರ ಮಾರ್ಚ್ 9ರಂದು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿತ್ತು.

ಆದ್ರೆ, ಮಾರ್ಚ್ 10ರ ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಆದ್ರೆ, ವೃದ್ಧನ ಥ್ರೋಟ್​ಸ್ವ್ಯಾಬ್​ ಪರಿಶೀಲನೆಗೆ ಕಳುಹಿಸಲಾಗಿತ್ತು. ನಿನ್ನೆ ರಾತ್ರಿ ವರದಿ ಬಂದಿದ್ದು, ವೃದ್ಧ ಕೊರೊನಾ ಸೋಂಕಿನಿಂದಲೇ ಮೃತಪಟ್ಟಿರೋದು ಕನ್ಫರ್ಮ್ ಆಗಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ವಿಷಯ ಬಹಿರಂಗ ಪಡಿಸಿದ್ರು.

ವೃದ್ಧನ ಜತೆಗಿದ್ದ 43 ಜನರ ಆರೋಗ್ಯದ ಮೇಲೆ ನಿಗಾ:
ವೃದ್ಧನ ಸಂಪರ್ಕದಲ್ಲಿದ್ದ ಕುಟುಂಬಸ್ಥರು, ಌಂಬುಲೆನ್ಸ್ ಸಿಬ್ಬಂದಿ ಸೇರಿ 43 ಜನರ ಆರೋಗ್ಯದ ಮೇಲೆ ಆರೋಗ್ಯಾಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.. ಅವರನ್ನ ಮನೆಯಲ್ಲೇ ಇರಿಸಿ ಆರೋಗ್ಯದ ಮೇಲೆ ನಿಗಾ ವಹಿಸಿದ್ದೇವೆ ಅಂತಾ ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

ವೃದ್ಧನ ಸಾವಿನ ಬೆನ್ನಲ್ಲೇ ಸರ್ಕಾರ ಹೈ ಅಲರ್ಟ್:
ಯಾವಾಗ ವೃದ್ಧ ಮೃತಪಟ್ಟಿದ್ದು ಕೊರೊನಾ ಅಟ್ಟಹಾಸದಿಂದ ಅನ್ನೋ ಸುದ್ದಿ ಗೊತ್ತಾಯ್ತೋ ಅಲ್ಲಿಂದ ರಾಜ್ಯ ಸರ್ಕಾರ ಫುಲ್ ಅಲರ್ಟ್​ ಆಯ್ತು.. ಕೊರೊನಾ ಹಾವಳಿ ತಡೆಗಟ್ಟಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡತೊಡಗಿತು. ಕಲಬುರಗಿ ಇಎಸ್​ಐ ಆಸ್ಪತ್ರೆಯಲ್ಲಿ 200 ಬೆಡ್​ಗಳ ಐಸೋಲೇಷನ್ ವಾರ್ಡ್ ಸಿದ್ಧ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ 400 ಬೆಡ್​ಗಳಿಗೆ ಹೆಚ್ಚಿಸಲು ತೀರ್ಮಾನಿಲಾಗಿದೆ.

ಅಲ್ದೆ, ಕಲಬುರಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡೋ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದ ಬಳಿಕ ರಜೆ ಬಗ್ಗೆ ತೀರ್ಮಾನಿಸಲಾಗುತ್ತೆ ಅಂತಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗ್ಲೇ,
ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಬೆಂಗಳೂರಲ್ಲಿ ರಜೆ ನೀಡಲಾಗಿದೆ.

ರಾಜ್ಯದಲ್ಲಿ ಮತ್ತಿಬ್ಬರು ‘ಕೊರೊನಾ’ ಶಂಕಿತರ ಪತ್ತೆ!
ರಾಜ್ಯದಲ್ಲಿ ಕೊರೊನಾ ವೈರಸ್ ಶಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ನಿನ್ನೆ ಮತ್ತೆರಡು ಪ್ರಕರಣಗಳು ಪತ್ತೆಯಾಗಿದ್ದು, ಚಿಕ್ಕಮಗಳೂರು, ಮಡಿಕೇರಿಯಲ್ಲಿ ಕೊರೊನಾ ಶಂಕಿತರು ಪತ್ತೆಯಾಗಿದ್ದಾರೆ. 15 ದಿನಗಳ ಹಿಂದೆ ದುಬೈನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಜ್ವರ ಬಂದಿದ್ದರಿಂದ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಐಸೋಲೇಷನ್ ವಾರ್ಡ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗ್ತಿದೆ. ಮತ್ತೊಂದ್ಕಡೆ, ಮಡಿಕೇರಿಯಲ್ಲಿ ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ರಕ್ತದ ಮಾದರಿ ಸಂಗ್ರಹಿಸಿ ಮೈಸೂರು ಲ್ಯಾಬ್​ಗೆ ಕಳಿಸಲಾಗಿದೆ.

ಒಟ್ನಲ್ಲಿ, ದೇಶದಲ್ಲಿ ಕೊರೊನಾ ಮೊದಲ ಬಲಿ ಪಡೆದಿದೆ. ಹೀಗಾಗಿ, ಸರ್ಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಜೊತೆಗೆ ಸಾರ್ವಜನಿಕರು ಕೂಡ ಸಾಕಷ್ಟು ಮುಂಜಾಗ್ರತೆ ವಹಿಸಿ ಕೊರೊನಾದಿಂದ ಪಾರಾಗಬೇಕಿದೆ.