‘ಸೂಚನೆ ಉಲ್ಲಂಘಿಸಿ ಹೈದರಾಬಾದ್​ಗೆ ಕರೆದೊಯ್ದಿದ್ದೇ ಆತನಿಗೆ ಮುಳುವಾಯಿತು’

ಕಲಬುರಗಿ: ಇಡೀ ಜಗತ್ತನ್ನೇ ನಡುಗಿಸಿರುವ ಮಹಾಹೆಮ್ಮಾರಿ ಕೊರೊನಾ ವೈರಸ್​ಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ದುಬೈನಿಂದ ಕಲಬುರಗಿಗೆ ಬಂದಿದ್ದ 76 ವರ್ಷದ ವೃದ್ಧರೊಬ್ಬರು ಕೊರೊನಾ ಸೋಂಕಿನಿಂದ ಮೃತಪ್ಟಟಿದ್ದಾರೆ. ಮೊದಲು ವೃದ್ಧ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆತನಿಗೆ ಮತ್ತು ಕುಟುಂಬದವರಿಗೆ ಕೊರೊನಾ ವೈರಸ್​ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದೆವು. ಆದ್ರೆ ಅವರು ವೈದ್ಯರ ಸೂಚನೆ ಉಲ್ಲಂಘಿಸಿ ಹೈದರಾಬಾದ್​ಗೆ ಕರೆದುಕೊಂಡು ಹೋದರು. ಹಾಗಾಗಿ ವೈದ್ಯರ ಸೂಚನೆ ಉಲ್ಲಂಘಿಸಿದ್ದೇ ಆತನಿಗೆ ಮುಳುವಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಸ್ಪಷ್ಟನೆ ನೀಡಿದರು. ವೃದ್ಧನ ಕುಟುಂಬದ […]

‘ಸೂಚನೆ ಉಲ್ಲಂಘಿಸಿ ಹೈದರಾಬಾದ್​ಗೆ ಕರೆದೊಯ್ದಿದ್ದೇ ಆತನಿಗೆ ಮುಳುವಾಯಿತು’
Follow us
ಸಾಧು ಶ್ರೀನಾಥ್​
|

Updated on: Mar 13, 2020 | 12:18 PM

ಕಲಬುರಗಿ: ಇಡೀ ಜಗತ್ತನ್ನೇ ನಡುಗಿಸಿರುವ ಮಹಾಹೆಮ್ಮಾರಿ ಕೊರೊನಾ ವೈರಸ್​ಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ದುಬೈನಿಂದ ಕಲಬುರಗಿಗೆ ಬಂದಿದ್ದ 76 ವರ್ಷದ ವೃದ್ಧರೊಬ್ಬರು ಕೊರೊನಾ ಸೋಂಕಿನಿಂದ ಮೃತಪ್ಟಟಿದ್ದಾರೆ.

ಮೊದಲು ವೃದ್ಧ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆತನಿಗೆ ಮತ್ತು ಕುಟುಂಬದವರಿಗೆ ಕೊರೊನಾ ವೈರಸ್​ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದೆವು. ಆದ್ರೆ ಅವರು ವೈದ್ಯರ ಸೂಚನೆ ಉಲ್ಲಂಘಿಸಿ ಹೈದರಾಬಾದ್​ಗೆ ಕರೆದುಕೊಂಡು ಹೋದರು. ಹಾಗಾಗಿ ವೈದ್ಯರ ಸೂಚನೆ ಉಲ್ಲಂಘಿಸಿದ್ದೇ ಆತನಿಗೆ ಮುಳುವಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಸ್ಪಷ್ಟನೆ ನೀಡಿದರು.

ವೃದ್ಧನ ಕುಟುಂಬದ ನಾಲ್ವರಲ್ಲಿ ಕೆಮ್ಮು, ನೆಗಡಿ ಆರಂಭವಾಗಿದೆ. ವೃದ್ಧನ ಸಂಪರ್ಕದಲ್ಲಿದ್ದವರ ರಕ್ತ, ಕಫದ ಮಾದರಿಯನ್ನು ಪರೀಕ್ಷಿಸಲು ಲ್ಯಾಬ್​ಗೆ ಕಳಿಸಿದ್ದೇವೆ ಎಂದು ವೃದ್ಧನ ಕುಟುಂಬದ ಕುರಿತು ಜಿಲ್ಲಾಧಿಕಾರಿ ಶರತ್ ಮಾಹಿತಿ ನೀಡಿದರು.

ಒಂದು ವಾರ ಶಾಲಾ-ಕಾಲೇಜುಗಳಿಗೆ ರಜೆ: ಕೊರೊನಾ ವೈರಸ್​ನಿಂದ ಕಲಬುರಗಿಯ ವೃದ್ಧ ಸಾವು ಹಿನ್ನೆಲೆಯಲ್ಲಿ ನಗರದ ಶಾಲಾ-ಕಾಲೇಜುಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ. ನಗರದ ಶಾಲಾ ಕಾಲೇಜುಗಳಿಗೆ ಮಾತ್ರ ಒಂದು ವಾರ ರಜೆ ಘೋಷಿಸಿ ಡಿಸಿ ಶರತ್ ಆದೇಶ ನೀಡಿದ್ದಾರೆ.