ಕಳೆದ 54 ದಿನಗಳ ಲಾಕ್ಡೌನ್ನಿಂದ ಅಪಾರ ನಷ್ಟ.. ಕೆಲಸವಿಲ್ಲದೆ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ

| Updated By: ಆಯೇಷಾ ಬಾನು

Updated on: Jun 21, 2021 | 2:12 PM

ಕಳೆದ 54 ದಿನಗಳ ಕಾಲ ಲಾಕ್ಡೌನ್ನಿಂದ ಅಪಾರ ನಷ್ಟವಾಗಿದೆ. ಕರ್ನಾಟಕದಲ್ಲಿ ಸುಮಾರು 7.6 ಲಕ್ಷ ಸಣ್ಣ, ಮಧ್ಯಮ ಮತ್ತು ಅತಿ ಸಣ್ಣ ಉದ್ಯಮಗಳಿವೆ. ಈ ಪೈಕಿ ಬೆಂಗಳೂರಿನಲ್ಲಿ ಅಂದಾಜು 8,590 ಸಣ್ಣ ಕೈಗಾರಿಕೆಗಳಿದ್ದು ಬೆಂಗಳೂರಿನ ಸಣ್ಣ ಕೈಗಾರಿಕೆಗಳಿಗೆ ದಿನಕ್ಕೆ ₹750 ಕೋಟಿ ನಷ್ಟವಾಗುತ್ತಿದೆ.

ಕಳೆದ 54 ದಿನಗಳ ಲಾಕ್ಡೌನ್ನಿಂದ ಅಪಾರ ನಷ್ಟ.. ಕೆಲಸವಿಲ್ಲದೆ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಆರ್ಥಿಕವಾಗಿ, ಮಾನಸಿಕವಾಗಿ ದುರ್ಬಲರನ್ನಾಗಿಸಿದೆ. ಕಳೆದ ಎರಡು ವರ್ಷಗಳಿಂದ ಜನ ನರಕ ದರ್ಶನ ಮಾಡುತ್ತಿದ್ದಾರೆ. ಸದ್ಯ ಕೊರೊನಾ ಈಗ ಕಡಿಮೆಯಾಗುತ್ತಿದ್ದು ಲಾಕ್ಡೌನ್ ಅನ್ ಲಾಕ್ ಆಗಿದೆ. ಆದರೆ ಕೊರೊನಾ ಸಮಯದಲ್ಲಿ ಅನುಭವಿಸಿದ ಸಂಕಷ್ಟಗಳಿಗೆ ಇನ್ನೂ ದಡ ಸಿಕ್ಕಿಲ್ಲ.

ಕಳೆದ 54 ದಿನಗಳ ಕಾಲ ಲಾಕ್ಡೌನ್ನಿಂದ ಅಪಾರ ನಷ್ಟವಾಗಿದೆ. ಕರ್ನಾಟಕದಲ್ಲಿ ಸುಮಾರು 7.6 ಲಕ್ಷ ಸಣ್ಣ, ಮಧ್ಯಮ ಮತ್ತು ಅತಿ ಸಣ್ಣ ಉದ್ಯಮಗಳಿವೆ. ಈ ಪೈಕಿ ಬೆಂಗಳೂರಿನಲ್ಲಿ ಅಂದಾಜು 8,590 ಸಣ್ಣ ಕೈಗಾರಿಕೆಗಳಿದ್ದು ಬೆಂಗಳೂರಿನ ಸಣ್ಣ ಕೈಗಾರಿಕೆಗಳಿಗೆ ದಿನಕ್ಕೆ ₹750 ಕೋಟಿ ನಷ್ಟವಾಗುತ್ತಿದೆ. ರಾಜ್ಯದಲ್ಲಿ ದೊಡ್ಡ ಕೈಗಾರಿಕೆಗಳಿಗೆ ದಿನಕ್ಕೆ ₹4,500 ಕೋಟಿ ನಷ್ಟವಾಗುತ್ತಿದೆ. ರಾಜ್ಯದಲ್ಲಿರುವ ಸಣ್ಣ ಕೈಗಾರಿಕೆಗಳಿಗೆ ನಿತ್ಯ ಸಾವಿರ ಕೋಟಿ ನಷ್ಟವಾಗುತ್ತಿದೆ. ಹಾಗೂ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ₹700 ಕೋಟಿ ನಷ್ಟವಾಗಿದೆ. ಕೊರೊನಾ ರಾಜ್ಯಕ್ಕೆ ಒಕ್ಕರಿಸಿದಾಗಿನಿಂದಲೂ ರಾಜ್ಯದ ಎಲ್ಲಾ ಕ್ಷೇತ್ರಗಳು ನಷ್ಟ ಅನುಭವಿಸುತ್ತಿವೆ.

ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಉದ್ಯೋಗವನ್ನು ಕಳೆದಿಕೊಂಡಿದ್ದಾರೆ. ಹಾಗೂ ವ್ಯಾಪಾರ ವಹಿವಾಟು ಉದ್ದಿಮೆ ಕ್ಷೇತ್ರಕ್ಕೆ ಸುಮಾರು 75,000 ಕೋಟಿ ನಷ್ಟವಾಗಿದೆ. ಹೀಗಾಗಿ 20,000 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದರಷ್ಟೇ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಕೆಎಫ್ಸಿಸಿಐ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್: ಸೇವಂತಿ ಹೂವಿನ ಬೆಳೆ ನಾಶ ಮಾಡಿದ ಹಾವೇರಿ ರೈತ