ನಾನೇನು ನಮ್ಮಪ್ಪನ ಮನೆಯಿಂದ ಕೊಡುತ್ತಿರಲಿಲ್ಲ, ನಿಮ್ಮ ದುಡ್ಡಿಂದ ಕೊಡುತಿದ್ದೆ; ವಿಪಕ್ಷ ನಾಯಕ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕೊರೊನಾ ಬಂದು 1 ವರ್ಷ ಮೂರು ತಿಂಗಳ ಆಯ್ತು. ಒಂದನೇ ಅಲೆ ಮುಗಿದು, ಎರಡನೇ ಅಲೆಯಲ್ಲಿ ನಾವಿದ್ದೇವೆ. ಅಕ್ಟೋಬರ್​ನಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಇದು ಬಹಳ ವೇಗವಾಗಿ ಹರಡುವ ರೋಗ. ಮೊದಲನೇ ಅಲೆಯಲ್ಲಿ ಬಹಳ ಜನ ಸಾಯಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಬಹಳ ಜನ ಸಾವನ್ನಪ್ಪಿದ್ದಾರೆ.

ನಾನೇನು ನಮ್ಮಪ್ಪನ ಮನೆಯಿಂದ ಕೊಡುತ್ತಿರಲಿಲ್ಲ, ನಿಮ್ಮ ದುಡ್ಡಿಂದ ಕೊಡುತಿದ್ದೆ; ವಿಪಕ್ಷ ನಾಯಕ ಸಿದ್ದರಾಮಯ್ಯ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us
TV9 Web
| Updated By: sandhya thejappa

Updated on: Jun 21, 2021 | 2:52 PM

ಕೊಪ್ಪಳ: ನಗರದ ಸಾರ್ವಜನಿಕ ಮೈದಾನದಲ್ಲಿ ನಡೆದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಏ ಪೊಲೀಸ್ ಎಲ್ಲರನ್ನೂ ಕೂರಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವಾಜ್ ಹಾಕಿದ್ದಾರೆ. ಭಾಷಣ ಆರಂಭಕ್ಕೂ ಮುನ್ನ ಆವಾಜ್ ಹಾಕಿದ ಸಿದ್ದರಾಮಯ್ಯ, ಕೊರೊನಾದಿಂದ ತತ್ತರಿಸಿದ 15 ಸಾವಿರ ಕುಟುಂಬಗಳಿಗೆ ಫುಡ್ ಕಿಟ್ ಕೊಡಲಾಗುತ್ತಿದೆ. ಶಾಸಕ ರಾಘವೇಂದ್ರ ಹಿಟ್ನಾಳ್ ಫುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ. ಅವರಿಗೆ ಪಕ್ಷದ ಹಾಗೂ ವಯಕ್ತಿಕವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕೊರೊನಾ ಬಂದು 1 ವರ್ಷ ಮೂರು ತಿಂಗಳ ಆಯ್ತು. ಒಂದನೇ ಅಲೆ ಮುಗಿದು, ಎರಡನೇ ಅಲೆಯಲ್ಲಿ ನಾವಿದ್ದೇವೆ. ಅಕ್ಟೋಬರ್​ನಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಇದು ಬಹಳ ವೇಗವಾಗಿ ಹರಡುವ ರೋಗ. ಮೊದಲನೇ ಅಲೆಯಲ್ಲಿ ಬಹಳ ಜನ ಸಾಯಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಬಹಳ ಜನ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಯಡಿಯೂರಪ್ಪ ಸರ್ಕಾರವೇ ಕಾರಣ ಎಂದು ಸಿದ್ದರಾಮಯ್ಯ ದೂರಿದರು.

ಯಡಿಯೂರಪ್ಪ ಸರ್ಕಾರ ಎರಡನೇ ಅಲೆ ತಡೆಯಲು ಸಿದ್ಧತೆ ಮಾಡಿಕೊಳ್ಳಲಿಲ್ಲ. ಸಿದ್ಧತೆ ಮಾಡಿಕೊಂಡಿದ್ದರೆ ಇಷ್ಟೊಂದು ಜನ ಸಾಯುತ್ತಿರಲಿಲ್ಲ. ಬೆಡ್ ಸಿಗಲಿಲ್ಲ, ಆಕ್ಸಿಜನ್ ಸಿಗಲಿಲ್ಲ, ರೆಮ್ಡಿಸಿವಿರ್ ಸಿಗಲಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಜಾಸ್ತಿ ಆಯ್ತು ಎಂದು ಮಾತನಾಡಿದ ವಿಪಕ್ಷ ನಾಯಕ, ಚಾಮರಾಜನಗರದ ದುರಂತಕ್ಕೆ ಮಿಸ್ಟರ್ ಯಡಿಯೂರಪ್ಪ ಕಾರಣ. ಒಂದೇ ದಿನ 36 ಜನ ಸಾವನ್ನಪ್ಪಿದ್ದಾರೆ. ಆದರೆ ಸಚಿವ ಸುಧಾಕರ್ ಕೇವಲ 3 ಜನ ಮೃತಪಟ್ಟಿದ್ದಾರೆ ಅಂತಾ ಸುಳ್ಳು ಹೇಳುತ್ತಾರೆ ಎಂದರು.

ಹತ್ತು ಸಾವಿರ ರೂಪಾಯಿ, ಹತ್ತು ಕೆಜಿ ಅಕ್ಕಿ ಕೊಡುವುದಕ್ಕೆ ಒತ್ತಾಯ ಮಾಡಿದೆ. ಆದರೆ ಸರ್ಕಾರ ಜಪ್ಪಯ್ಯ ಅಂದ್ರೂ ಒಪ್ಪಲಿಲ್ಲ. ನಮ್ಮ ಸರ್ಕಾರ ಇದ್ದಿದ್ದರೆ ಏಳು ಕೆ.ಜಿ ಅಕ್ಕಿ ಉಚಿತವಾಗಿ ಕೊಡುತಿದ್ದೆ. ಏಳು ಕೆ.ಜಿ ಅಕ್ಕಿ ಕೊಟ್ಟಿದ್ದರೆ ಇವರಪ್ಪನ ಮನೆ ಗಂಟು ಹೋಗ್ತಿತ್ತಾ? ನಾನು ಕೊರೊನಾ ಸಮಯದಲ್ಲಿ ಇದ್ದಿದ್ರೆ 10 ಕೆ.ಜಿ ಅಕ್ಕಿ ಕೊಡತಿದ್ದೆ. ನಾನೇನು ನಮ್ಮಪ್ಪನ ಮನೆಯಿಂದ ಕೊಡತಿರಲಿಲ್ಲ. ನಿಮ್ಮ ದುಡ್ಡಿಂದ ಕೊಡತಿದ್ದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯಡಿಯೂರಪ್ಪ ಸರ್ಕಾರ ಬರೀ ದುಡ್ಡು ಹೊಡೆಯುವುದು ಬಿಟ್ಟರೆ ಏನು ಮಾಡಲ್ಲ. ಇದನ್ನು ನಾನ ಹೇಳೋದು ಅಲ್ಲ, ಬಿಜೆಪಿಯವರೇ ಹೇಳ್ತಾರೆ. ಯಡಿಯೂರಪ್ಪ ಹಾಗೂ ಮಗ ಸೇರಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಮೋದಿ ಬಂದ ಮೇಲೆ ಎಲ್ಲ ಬೆಲೆ ಹೆಚ್ಚಾಗಿದೆ ಎಂದು ಹೇಳಿದರು.

ಇದನ್ನೂ ಓದಿ

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ; ಪಾರಂಪರಿಕ ಕಟ್ಟಡ ನವೀಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟ

ಯಾರು ಕೆಲಸ ಮಾಡುತ್ತಾರೆ, ಮಾಡಲ್ಲ ಎಂಬುವು ನನಗೆ ಗೊತ್ತಿದೆ.. ಕೆಲವರನ್ನು ಬದಲಾವಣೆ ಮಾಡಬೇಕೆಂದು ಇಲ್ಲಿಗೆ ಬಂದಿದ್ದೇನೆ -ಡಿಕೆಶಿ

(Siddaramaiah says if our government were in the state we would give seven kg of rice for free in koppal)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್