ನಾಲಗೆಗೆ ಆದ ಗಾಯ ಮಾಯುತ್ತೆ ನಾಲಗೆಯಿಂದಾದ ಗಾಯ ಮಾಯಲಾರದು: ಡಾ ಸಿಎನ್ ಮಂಜುನಾಥ್

ಅರುಣ್​ ಕುಮಾರ್​ ಬೆಳ್ಳಿ

Updated on: Oct 30, 2024 | 5:36 PM

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬಗ್ಗೆ ಡಾ ಮಂಜುನಾಥ್ ಅವರಲ್ಲಿರುವಷ್ಟು ಮಾಹಿತಿ ಪ್ರಾಯಶಃ ಕುಮಾರಸ್ವಾಮಿಯಲ್ಲೂ ಇರಲಿಕ್ಕಿಲ್ಲ. ಅವರು ಐಸಿಯುನಿಂದ ಎದ್ದು ಪ್ರಚಾರಕ್ಕೆ ಬಂದ ವಿಷಯದಿಂದ ಶುರುಮಾಡಿ ಭಾರತದ ಪ್ರಧಾನಿಯಾಗಿ ಅವರು ಮಾಡಿದ ಸಾಧನೆಗಳನ್ನು ಒಂದೇ ಉಸುರಿನಲ್ಲಿ ಮಂಜುನಾಥ್ ಹೇಳುತ್ತಾರೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿಎನ್ ಮಂಜುನಾಥ್ ಈಗಲೂ ರಾಜಕಾರಣಿಯಂತೆ ಮಾತಾಡುವುದಿಲ್ಲ! ನಾಲಗೆಗೆ ಆದ ಗಾಯ ಮಾಯಬಹುದೇ ಹೊರತು ನಾಲಗೆಯಿಂದ ಆದ ಗಾಯ ಮಾಯಲಾರದು, ನಾಲಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಆದನ್ನು ಹರಿಬಿಡುವುದರಿಂದ ಯಾರಿಗೂ ಪ್ರಯೋಜನವಿಲ್ಲ, ರಾಜಕಾರಣ ಆರೋಗ್ಯಕರವಾಗಿರಬೇಕಾದರೆ ಮಾತು ಮೃದುವಾಗಿರಬೇಕು ಮತ್ತು ಹಿತವಾಗಿರಬೇಕು ಎಂದು ಮಂಜುನಾಥ್ ಹೇಳುತ್ತಾರೆ. ಅವರು ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಹೇಳಿದರೆನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಂಗಳೂರು: ಬಿಜೆಪಿ ಕಚೇರಿಗೆ ಇಂದು ಅನಿರೀಕ್ಷಿತ ಭೇಟಿ ನೀಡಿದಾಗಲೂ ಡಾ ಸಿಎನ್ ಮಂಜುನಾಥ್ ಟೈ ಧರಿಸಿದ್ದರು!

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.