ಬೇಲ್ ಪಡೆದಿರುವ ದರ್ಶನ್ ಜೈಲಿಂದ ಹೊರಬರುವುದನ್ನು ಕಾಯುತ್ತಿರುವ ಬಳ್ಳಾರಿ ಅಭಿಮಾನಿಗಳು
ಈಗಾಗಲೇ ವರದಿಯಾಗಿರುವಂತೆ ದರ್ಶನ್ಗೆ ಬೆನ್ನುನೋವಿನ ಚಿಕಿತ್ಸೆ ಹಿನ್ನೆಲೆಯಲ್ಲಿ 6-ವಾರ ಅವಧಿಯ ಮಧ್ಯಂತರ ಜಾಮೀನು ಮಂಜೂರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17ಆರೋಪಿಗಳು. ದರ್ಶನ್ ಅರೋಪಿ ನಂಬರ್ 2 ಆಗಿದ್ದರೆ ಅವರ ಗೆಳತಿ ಪವಿತ್ರಾ ಗೌಡ ಆರೋಪಿ ನಂಬರ್ ವನ್ ಆಗಿದ್ದಾರೆ.
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಐದು ತಿಂಗಳಿಂದ ಜೈಲಲ್ಲಿರುವ ನಟ ದರ್ಶನ್ಗೆ ಇಂದು ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಬೇಲ್ ಸಿಕ್ಕಿದ್ದು ಅವರಿಗೆ ನೀಡಿರುವಷ್ಟೇ ಸಂತೋಷವನ್ನು ಅವರ ಅಭಿಮಾನಿಗಳಿಗೂ ನೀಡಿದೆ. ನಗರದ ಸೆಂಟ್ರಲ್ ಜೈಲು ಮುಂದೆ ನೆರೆದಿರುವ ಇವರೆಲ್ಲ ನಟನ ಅಭಿಮಾನಿಗಳು. ದರ್ಶನ್ ಹೊರಬರುವುದನ್ನೇ ಕಾಯುತ್ತಾ ನಿಂತಿರುವ ಇವರು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದಾರೆ. ಮುಂಜಾಗ್ರತೆಯ ಕ್ರಮವಾಗಿ ಪೊಲೀಸರು ಜೈಲು ಮುಂದಿನ ರಸ್ತೆಯನ್ನು ಬ್ಯಾರಿಕೇಡ್ ಗಳಿಂದ ಬ್ಲಾಕ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ದರ್ಶನ್ಗೆ ಬೆನ್ನು ನೋವು ಬಂದಿದ್ದು ಇಂದು ನಿನ್ನೆಯಲ್ಲ’; ವಕೀಲರ ಸ್ಪಷ್ಟನೆ
Follow Us
Latest Videos
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್ಗೆ ಗಂಭೀರ ಗಾಯ
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
