AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ

ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ

ಸೂರಜ್ ಪ್ರಸಾದ್ ಎಸ್.ಎನ್
| Updated By: ವಿವೇಕ ಬಿರಾದಾರ|

Updated on: Oct 30, 2024 | 3:38 PM

Share

ಕರ್ನಾಟಕದಲ್ಲಿ ವಕ್ಫ್​ ಆಸ್ತಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ವಕ್ಫ್​ಗೆ ಆಸ್ತಿ ವಿಚಾರವಾಗಿ ರೈತರಿಗೆ ಸರ್ಕಾರ ನೋಟಿಸ್​ ನೀಡುತ್ತಿದೆ. ಇದರಿಂದ ರೈತರು ಕಂಗಾಲ ಆಗಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ರೈತರ ವಿರುದ್ಧ ಮತ್ತೊಂದು ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ. ಏನದು ಆದೇಶ? ಇಲ್ಲಿದೆ ಮಾಹಿತಿ

ಚಾಮರಾಜನಗರ, ಅಕ್ಟೋಬರ್​ 30: ವಕ್ಫ್ (Waqf)​​ ಆಸ್ತಿ ವಿಚಾರವಾಗಿ ರೈತರಿಗೆ (Farmers) ಸರ್ಕಾರ ನೋಟಿಸ್ ನೀಡುತ್ತಿದ್ದು, ಅನ್ನದಾತರಿಗೆ ತಲೆನೋವು ಶುರುವಾಗಿದೆ. ಇದರ ನಡುವೆ ಗಾಯದ ಮೇಲೆ ಬರೆ ಎಳೆದಂತೆ ರೈತರಿಂದ ಸಾಲ ಮರುಪಾವತಿ ಮಾಡಿಕೊಳ್ಳಲು ಸರ್ಕಾರ (Karnataka Government) ಕಠಿಣ ಕ್ರಮ ಕೈಗೊಂಡಿದೆ. ಇದರಿಂದ ರೈತರಿಗೆ ಸಂಕಷ್ಟ ಹೆಚ್ಚಿದೆ. ಸಹಕಾರ ಸಂಘಗಳ ಸುಸ್ತಿ ಸಾಲಕ್ಕೆ ಸರ್ಕಾರ ದಾವೆ ಪ್ರಕ್ರಿಯೆ ಆರಂಭಿಸಿದೆ.

ರೈತರು ಸಾಲ ಮರುಪಾವತಿಸಲು ವಿಫಲರಾಗಿ, ಸುಸ್ತಿಯಾದಲ್ಲಿ ಅವರಿಗೆ ತಿಳಿವಳಿಕೆ ಪತ್ರ ನೀಡಲು ಸರ್ಕಾರ ನಿರ್ಧರಿಸಿದೆ. ತಿಳಿವಳಿಕೆ ಪತ್ರದ ನಂತರವೂ ಸಾಲ ಮರುಪಾವತಿಸದಿದ್ದರೆ ಸಹಾಕಾರ ಸಂಘಗಳ ಕಾಯ್ದೆ ಕಲಂ 70ರ ಅಡಿ ದೂರು ದಾಖಲಿಸಿಕೊಳ್ಳಲು ತೀರ್ಮಾನ ಮಾಡಿದೆ. ಸರ್ಕಾರದ ಆದೇಶದ ಸರ್ಕಾರದ ಆದೇಶದ ವಿರುದ್ಧ ಚಾಮರಾಜನಗರ ಜಿಲ್ಲೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತಿವೃಷ್ಟಿ, ಅನಾವೃಷ್ಟಿ, ಕೊರೊನಾ ಮತ್ತು ಇತರೆ ಕಾರಣಗಳಿಂದ ರೈತರು ಸುಸ್ತಿಯಾಗಿದ್ದಾರೆ. ಸರ್ಕಾರ ಕೂಡಲೇ ತನ್ನ ಆದೇಶವನ್ನು ಹಿಂಪಡೆಯಬೇಕೆಂದು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭಾಗ್ಯರಾಜ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ