ವಕ್ಫ್ ಜಮೀನು ವಿವಾದ; ರೈತರಿಗೆ ನೀಡಿದ ನೋಟೀಸ್ಗಳನ್ನು ವಾಪಸ್ಸು ಪಡೆಯುತ್ತೇವೆ: ಶಿವಕುಮಾರ್
ಉಚ್ಛ ನ್ಯಾಯಾಲಯವು ಚಿತ್ರನಟ ದರ್ಶನ್ಗೆ ಷರತ್ತುಬದ್ಧ ಜಾಮೀನು ನೀಡಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ನ್ಯಾಯಾಲಯದ ತೀರ್ಪನ್ನು ತಾನು ಪ್ರಶ್ನಿಸುವ ಕೆಲಸ ತಾನು ಮಾಡಲ್ಲ, ನ್ಯಾಯಾಲಯದ ತೀರ್ಪನ್ನು ತಮ್ಮ ಸರ್ಕಾರ ಸ್ವಾಗತಿಸುತ್ತದೆ ಎಂದು ಹೇಳಿದರು.
ಬೆಂಗಳೂರು: ವಕ್ಫ್ ಬೋರ್ಡ್ ಜಮೀನು ಮತ್ತು ರೈತರಿಗೆ ನೀಡಿದ ನೋಟೀಸ್ಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಮತ್ತು ಕಂದಾಯ ಸಚಿವ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ, ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ರೈತರಿಗೆ ನೋಟೀಸ್ಗಳನ್ನು ನೀಡಲಾಗಿತ್ತು, ಈಗ ತಮ್ಮ ಸರ್ಕಾರ ನೀಡಿರುವ ನೋಟೀಸ್ಗಳನ್ನು ವಾಪಸ್ಸು ಪಡೆಯಲಾಗುವುದು, ರೈತರ ಜಮೀನುಗಳಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಉದ್ದೇಶಪೂರ್ವಕವಾಗಿ ಅನುದಾನ ಬಿಡುಗಡೆ ಮಾಡಿಲ್ಲ: ಶಿವಕುಮಾರ್
Published on: Oct 30, 2024 01:32 PM