ಕರ್ನಾಟಕದಲ್ಲಿ ತಪ್ಪಿದ ಮತ್ತೊಂದು ಆಕ್ಸಿಜನ್ ಮಹಾ ದುರಂತ; 300 ಸೋಂಕಿತರ ಜೀವ ಪಾರು

ಆಕಾಸ್ ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ದಿನ 9 ಟನ್ ಆಕ್ಸಿಜನ್ ಅಗತ್ಯವಿದೆ. ಆದರೆ ನಿನ್ನೆ ಆಸ್ಪತ್ರೆಗೆ ಆಕ್ಸಿಜನ್ ಪೂರೈಸುವ ಹೊಣೆಹೊತ್ತಿದ್ದ ಐನಾಕ್ಸ್ ಸಂಸ್ಥೆ 3 ಟನ್ ಆಕ್ಸಿಜನ್ ಪೂರೈಸಿತ್ತು. ಬಾಕಿ 6 ಟನ್ ಆಕ್ಸಿಜನ್ ಪೂರೈಸದೆ ಸಂಸ್ಥೆ ನಿರ್ಲಕ್ಷ್ಯ ತೋರಿತ್ತು.

ಕರ್ನಾಟಕದಲ್ಲಿ ತಪ್ಪಿದ ಮತ್ತೊಂದು ಆಕ್ಸಿಜನ್ ಮಹಾ ದುರಂತ; 300 ಸೋಂಕಿತರ ಜೀವ ಪಾರು
ಪ್ರಾತಿನಿಧಿಕ ಚಿತ್ರ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 05, 2021 | 5:22 PM

ಬೆಂಗಳೂರು: ಆಕ್ಸಿಜನ್ ಕೊರತೆ ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಪೂರೈಕೆ ಆಗದೆ ಸುಮಾರು 24 ಜನರು ಮೃತಪಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೆ ರಾಜ್ಯದಲ್ಲಿ ಇನ್ನೊಂದು ಆಕ್ಸಿಜನ್ ಮಹಾ ದುರಂತ ನಡೆಯುತ್ತಿತ್ತು. ಆದರೆ ಅದೃಷ್ಟವಶಾತ್ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿ ಹೋಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿತ್ತು. ಇದರಿಂದ 300ಕ್ಕೂ ಹೆಚ್ಚು ಸೋಂಕಿತರ ಪ್ರಾಣಕ್ಕೆ ಸಂಚಕಾರ ತರುತ್ತಿತ್ತು.

ಆಕಾಸ್ ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ದಿನ 9 ಟನ್ ಆಕ್ಸಿಜನ್ ಅಗತ್ಯವಿದೆ. ಆದರೆ ನಿನ್ನೆ ಆಸ್ಪತ್ರೆಗೆ ಆಕ್ಸಿಜನ್ ಪೂರೈಸುವ ಹೊಣೆ ಹೊತ್ತಿದ್ದ ಐನಾಕ್ಸ್ ಸಂಸ್ಥೆ 3 ಟನ್ ಆಕ್ಸಿಜನ್ ಪೂರೈಸಿತ್ತು. ಬಾಕಿ 6 ಟನ್ ಆಕ್ಸಿಜನ್ ಪೂರೈಸದೆ ಸಂಸ್ಥೆ ನಿರ್ಲಕ್ಷ್ಯ ತೋರಿತ್ತು.

ರಾತ್ರಿ 11 ಗಂಟೆಗೆ ಕರೆ ಮಾಡಿದ್ದಾಗ ಮೊಬೈಲ್ ಸ್ವಿಚ್ಆಫ್ ಆಗಿತ್ತು. ಎಸ್​ಪಿ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿಗಳನ್ನು ಕಳುಹಿಸಿದ್ದರು. ಐನಾಕ್ಸ್ ಸಂಸ್ಥೆಗೆ ಬೀಗ ಹಾಕಿದ್ದರು. ಆಕ್ಸಿಜನ್ ಟ್ಯಾಂಕರ್ ಇತ್ತು. ಫಿಲ್ ಮಾಡುವ ವ್ಯಕ್ತಿ ಕರೆತಂದು, ಮುಂಜಾನೆ 3 ಗಂಟೆಗೆ ಆಕ್ಸಿಜನ್ ಸರಬರಾಜು ಮಾಡಲಾಗಿದೆ. ಕಂಪನಿಗೆ ನೋಟಿಸ್ ಜಾರಿ ಮಾಡಿ ಎಫ್ಐಆರ್ ದಾಖಲಿಸಿ ತನಿಖೆಗೆ ಆದೇಶ ನೀಡಲಾಗಿದೆ.

ಇದನ್ನೂ ಓದಿ

Karnataka High Court: ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ಸೌಟು ಹಿಡಿದು ಹೋಂ ಐಸೋಲೇಶನ್ನಲ್ಲಿ ಇರೋ ಜನರಿಗೆ ಊಟದ ವ್ಯವಸ್ಥೆ ಮಾಡ್ತಿದ್ದಾರೆ ನಟ ಚಿಕ್ಕಣ್ಣ

(INOX supplied 6 tonnes of oxygen instead of 9 tonnes of oxygen to akash super speciality hospital)

Published On - 5:17 pm, Wed, 5 May 21