ಬೆಂಗಳೂರು: ಮಾದಕ ದ್ರವ್ಯ ವ್ಯಸನ ಮತ್ತು ಕಳ್ಳಸಾಗಣೆ ವಿರುದ್ಧದ ದಿನಾಚರಣೆ ಪ್ರಯುಕ್ತ ನಾಳೆ (ಜೂ.26) ರಾಜ್ಯ ಪೊಲೀಸ್ ಇಲಾಖೆ ಸುಮಾರು 21 ಟನ್ ಮಾದಕವಸ್ತು ನಾಶಪಡಿಸಲು ಸಿದ್ಧತೆ ನಡೆಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದ 25 ಕೋಟಿ ಮೌಲ್ಯದ ಸುಮಾರು 21 ಟನ್ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ನಾಶ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಕಳೆದ 1 ವರ್ಷದಲ್ಲಿ 25 ಕೋಟಿ ಮೌಲ್ಯದ ಸುಮಾರು 21 ಟನ್ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಕೋರ್ಟ್ನ ಅನುಮತಿ ಪಡೆದು ಮಾದಕ ದ್ರವ್ಯ ವ್ಯಸನ ಮತ್ತು ಕಳ್ಳಸಾಗಣೆ ವಿರುದ್ಧದ ದಿನವಾದ ನಾಳೆ ಜಪ್ತಿ ಮಾಡಲಾದ ಮಾಲುಗಳನ್ನು ನಾಶ ಮಾಡಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಹಳ್ಳದಲ್ಲಿ ಭ್ರೂಣ ಎಸೆದ ಪ್ರಕರಣ: ವೆಂಕಟೇಶ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಜಪ್ತಿ ಮಾಡಿದ ಡಿಎಚ್ಒ
ಡ್ರಗ್ಸ್ ಅಡ್ಡೆಯಾದ ಸಿಲಕಾನ್ ಸಿಟಿ
ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರ ಡ್ರಗ್ಸ್ ಪೆಡ್ಲರ್ಗಳ ಅಡ್ಡೆಯಾಗಿ ಪರಿಣಮಿಸಿದ್ದು, ಪೊಲೀಸರು ಜಪ್ತಿ ಮಾಡಿದ ಡ್ರಗ್ಸ್ಗಳ ಪೈಕಿ ಶೇ.50ಕ್ಕೂ ಹೆಚ್ಚು ಡ್ರಗ್ಸ್ ಬೆಂಗಳೂರು ನಗರದಲ್ಲೇ ಜಪ್ತಿ ಮಾಡಲಾಗಿದೆ. ಕಳೆದ ವರ್ಷ ರಾಜ್ಯಾದ್ಯಂತ 24 ಟನ್ ಮಾದಕ ವಸ್ತು ನಾಶಪಡಿಸಲಾಗಿತ್ತು. ಈ ಬಾರಿ 21 ಟನ್ಗಳಷ್ಟು ಗಾಂಜಾ, ಅಫೀಮು, ಹೆರಾಯಿನ್, ಕೊಕೇನ್, ಎಂಡಿಎಂಎ ಸೇರಿದಂತೆ ವಶಕ್ಕೆ ಪಡೆದ ಇದರ ಮಾದಕ ವಸ್ತುಗಳನ್ನು ನಾಶಪಡಿಸಲಾಗುತ್ತಿದೆ.
ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಈಗಾಗಲೇ ಫೀಲ್ಡ್ಗೆ ಇಳಿದ ರಾಜ್ಯ ಪೊಲೀಸ್ ಇಲಾಖೆ, ಎನ್‌ಡಿಪಿಎಸ್ ಕಾಯ್ದೆಯಡಿ ಒಟ್ಟು 8,505 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಪೈಕಿ 5,363 ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದು, ಪ್ರಕರಣದಲ್ಲಿ ಅತಿಹೆಚ್ಚು ವಿದೇಶಿ ಪ್ರಜೆಗಳೇ ಆಗಿದ್ದಾರೆ ಎನ್ನಲಾಗುತ್ತಿದೆ. ಡ್ರಗ್ಸ್ ಪ್ರಕಣಗಳನ್ನು ಸರಿಯಾಗಿ ಗಮನಿಸಿದರೆ ಹೆಚ್ಚಾಗಿ ವಿದೇಶಿ ಪ್ರಜೆಗಳು ಅದರಲ್ಲೂ ವೀಸಾ ಅವಧಿ ಮುಗಿದು ರಾಜ್ಯದಲ್ಲಿ ನೆಲೆಸಿ ಡ್ರಗ್ಸ್ ದಂಧೆಯಲ್ಲಿ ತೊಡಗಿ ಪೊಲೀಸರ ಕೈಗೆ ಸಿಕ್ಕಿಬಿದ್ದವರೇ ಹೆಚ್ಚು.
ಇದನ್ನೂ ಓದಿ: ಏಕಾಏಕಿ ಹಂಪ್ ಎಗರಿಸಿದ ಕೆಎಸ್ಆರ್ಟಿಸಿ ಬಸ್ ಚಾಲಕ: ಕೆಳಗೆ ಬಿದ್ದು ಕಾಲು ಮುರಿದುಕೊಂಡ ಕಂಡಕ್ಟರ್
Published On - 1:26 pm, Sat, 25 June 22