International Day of Forests 2021| ನೈಸರ್ಗಿಕ ಸಂಪತ್ತು ಉಳಿಸಲು ಪ್ರತ್ಯೇಕ ಹಣ ಮೀಸಲಿಟ್ಟಿದ್ದೇವೆ: ಬಿ.ಎಸ್.ಯಡಿಯೂರಪ್ಪ
ಈಶಾ ಫೌಂಡೇಷನ್‌ನಿಂದ ಕಾವೇರಿ ಕೂಗು ಅಭಿಯಾನ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೆಂಗಳೂರು: ಈಶಾ ಫೌಂಡೇಷನ್‌ನಿಂದ ಕಾವೇರಿ ಕೂಗು ಅಭಿಯಾನ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸೇರಿ ಹಲವರು ಭಾಗಿಯಾದ್ದರು. ಕಾರ್ಯಕ್ರಮದಲ್ಲಿ ಪರಿಸರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ, ಈಶಾ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ್ ಅವರಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ಅರಣ್ಯ ಉಳಿಸುವ ನಿಟ್ಟಿನಲ್ಲಿ ಸಸ್ಯ ಸಂಪತ್ತು ಮಹತ್ವ ಪಡೆದಿದೆ. ನೈಸರ್ಗಿಕ ಸಂಪತ್ತು ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನೈಸರ್ಗಿಕ ಸಂಪತ್ತು ಉಳಿಸಲು ಪ್ರತ್ಯೇಕ ಹಣ ಮೀಸಲಿಟ್ಟಿದ್ದೇವೆ. 2 ಅರಣ್ಯ ಪ್ರದೇಶದ ನಡುವೆ ಕಾರಿಡಾರ್ ರಸ್ತೆ ನಿರ್ಮಾಣ ಹಾಗೂ ಸ್ಯಾಟಲೈಟ್ ಮೂಲಕ ಅರಣ್ಯ ಪ್ರದೇಶ ನಕ್ಷೆ ತಯಾರಿಸಿ, ವೈಜ್ಞಾನಿಕ ಪದ್ಧತಿ ಅಳವಡಿಸಿ ಕಾರಿಡಾರ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.
Hon’ble Chief Minister of Karnataka congratulates Sadhguru and volunteers of #CauveryCalling for the Outreach 2020, and ensures that the government will continue to support causes of environmental protection in all possible ways. #WorldForestDay #ForestToFarm pic.twitter.com/3f3EphPmbX
— Rally For Rivers – Cauvery Calling (@rallyforrivers) March 21, 2021
ಇನ್ನು, ಸಂಸ್ಕೃತಿ, ಪರಂಪರೆ ರಕ್ಷಣೆಗೆ 2,900 ಕೋಟಿ ರೂಪಾಯಿ ಮೀಸಲು ಹಾಗೂ 9 ಜಿಲ್ಲೆಗಳಲ್ಲಿ ರೈತರಿಗೆ ಬೀಜಗಳನ್ನು ನೀಡಲಾಗುವುದು. ಹಣ್ಣು ಬಿಡುವ ಮರಗಳನ್ನ ಹೆಚ್ಚು ಬೆಳೆಸಲಾಗುವುದು ಎಂದು ಮಾತನಾಡಿದರು. ಉತ್ತರ ಕನ್ನಡದಲ್ಲಿ ಅಪ್ಸರಕೊಂಡ ಅಭಯಾರಣ್ಯ ಪ್ರದೇಶವನ್ನು ಶೀಘ್ರದಲ್ಲಿ ಉದ್ಘಾಟಿಸುತ್ತೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ, ಜೊತೆಗೆ ಅರಣ್ಯ ಮತ್ತು ರೈತರ ಭೂ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದ ಹೇಳಿದರು.
Forest produce must be out of our vocabulary; farmers should grow whatever we need on their land. Agroforestry must become a full-scale agriculture process, and tree-based agriculture should move to Agriculture Ministry over time: @SadhguruJV shows the way forward.#WorldForestDay pic.twitter.com/ry84nupn9p
— Rally For Rivers – Cauvery Calling (@rallyforrivers) March 21, 2021
ಬೆಂಗಳೂರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಜಾವಡೇಕರ್ ನಮ್ಮ ದೇಶದ ಹಸಿರು ನಗರಗಳಲ್ಲಿ ಬೆಂಗಳೂರು ಸಹ ಒಂದು. ಗಾರ್ಡನ್ ಸಿಟಿ ಬೆಂಗಳೂರಲ್ಲಿ ಉಳಿದುಕೊಂಡರೆ ಬೆಳಿಗ್ಗೆ ಕಬ್ಬನ್ ಪಾರ್ಕ್ನಲ್ಲಿ ವಾಯುವಿಹಾರ ಮಾಡುತ್ತೇನೆ. ಕಬ್ಬನ್ ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಿರುವಾಗ ನಗರಗಳಲ್ಲಿ ಅರಣ್ಯ ಎಷ್ಟು ಮುಖ್ಯ ಎಂದೆನಿಸುತ್ತಿತ್ತು. ದೇಶದ 200 ನಗರಗಳಲ್ಲಿ ನಗರ ಅರಣ್ಯೀಕರಣ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕದಲ್ಲಿಯೂ ಸಮೃದ್ಧವಾದ ಅರಣ್ಯ ಪ್ರದೇಶವಿದೆ ಎಂದು ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಇದನ್ನೂ ಓದಿ: ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ -ಉಲ್ಲಾಸ ಕಾರಂತ
ಅರಣ್ಯ ಅಭಿವೃದ್ಧಿಗೆ ಅನುದಾನ ನೀಡಲು ಸಿದ್ಧ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Published On - 3:20 pm, Sun, 21 March 21