ಇರಾನ್- ಇಸ್ರೇಲ್ ವಾರ್​: ಇಸ್ರೇಲ್​ನಲ್ಲಿ ಸಿಲುಕಿದ ಕಾಂಗ್ರೆಸ್, ಬಿಜೆಪಿ ಮತ್ತು JDS ನಿಯೋಗ

ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆ ಕರ್ನಾಟಕದ 19 ಜನರ ನಿಯೋಗ ಇಸ್ರೇಲ್​ನಲ್ಲಿ ಸಿಲುಕಿಕೊಂಡಿದೆ. ಬಿ ಪ್ಯಾಕ್ ಸಂಸ್ಥೆಯ ಮೂಲಕ ಅಧ್ಯಯನಕ್ಕಾಗಿ ತೆರಳಿದ್ದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ 19 ಜನರ ನಿಯೋಗ, ವಿಮಾನ ರದ್ಧಾಗಿದ್ದರಿಂದ ಅಲ್ಲಿಯೇ ಸಿಲುಕಿಕೊಳ್ಳುವಂತಾಗಿದೆ.

ಇರಾನ್- ಇಸ್ರೇಲ್ ವಾರ್​: ಇಸ್ರೇಲ್​ನಲ್ಲಿ ಸಿಲುಕಿದ ಕಾಂಗ್ರೆಸ್, ಬಿಜೆಪಿ ಮತ್ತು JDS ನಿಯೋಗ
ಕರ್ನಾಟಕದ 19 ಜನರ ನಿಯೋಗ
Edited By:

Updated on: Jun 15, 2025 | 12:00 PM

ಬೆಂಗಳೂರು, ಜೂನ್​ 15: ಪಶ್ಚಿಮ ಏಷ್ಯಾದಲ್ಲಿ ಪರಮಾಣು ಯುದ್ಧ ಆರಂಭವಾಗಿದೆ. ಇಸ್ರೇಲ್ ಮತ್ತು ಇರಾನ್ (Israel-Iran tensions) ನಡುವೆ ಸಂಘರ್ಷ ಏರ್ಪಟ್ಟಿದ್ದು, ದಾಳಿ ಪ್ರತಿದಾಳಿಗಳು ನಡುಯುತ್ತಿವೆ. ಈ ಯುದ್ಧದಿಂದಾಗಿ ಕರ್ನಾಟಕದ (Karnataka) 19 ಜನರನ್ನೊಳಗೊಂಡ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್​​ ನಿಯೋಗ ಇಸ್ರೇಲ್​ನಲ್ಲಿ ಸಿಲುಕಿದೆ. ಇಸ್ರೇಲ್​ನಲ್ಲೇ ಉಳಿದಿರುವ ಬಗ್ಗೆ ಸಿಎಂ, ಡಿಸಿಎಂಗೆ ಮಾಹಿತಿ ನೀಡಲಾಗಿದ್ದು, ನಿಯೋಗದ ಸದಸ್ಯರ ಜತೆ ಗೃಹ ಸಚಿವ ಪರಮೇಶ್ವರ್ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್​​ ನಿಯೋಗ ಇತ್ತೀಚೆಗೆ ಬಿ ಪ್ಯಾಕ್ ಸಂಸ್ಥೆಯ ಮೂಲಕ ಅಧ್ಯಯನಕ್ಕಾಗಿ ಇಸ್ರೇಲ್​ಗೆ ತೆರಳಿತ್ತು. ನಿನ್ನೆಯೇ ನಿಯೋಗ ವಾಪಸ್​ ಆಗಬೇಕಿತ್ತು. ಆದರೆ ವಿಮಾನ ರದ್ದಾದ ಕಾರಣ ಇಸ್ರೇಲ್​ನಲ್ಲೇ ಉಳಿದುಕೊಳ್ಳುವಂತಾಗಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ಬರುತ್ತೆ, ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಇಸ್ರೇಲ್ ದಾಳಿಗೆ ಪ್ರತೀಕಾರ; 2 ಇಸ್ರೇಲಿ F-35 ಜೆಟ್‌ಗಳ ಧ್ವಂಸ
ಇಸ್ರೇಲ್​ ದಾಳಿ; ಇರಾನ್​ನ 78 ಜನ ಸಾವು, 329 ಮಂದಿಗೆ ಗಾಯ
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್ ಮೇಲೆ ದಾಳಿ; ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು

ಇದನ್ನೂ ಓದಿ: ಇಸ್ರೇಲ್-ಇರಾನ್ ಉದ್ವಿಗ್ನತೆ; ಪ್ರಧಾನಿ ಮೋದಿಗೆ ಕರೆ ಮಾಡಿದ ಪಿಎಂ ಬೆಂಜಮಿನ್ ನೆತನ್ಯಾಹು

ಇರಾಕ್‌ನ ಪರಮಾಣು ಸ್ಥಾವರಗಳನ್ನ ಟಾರ್ಗೆಟ್ ಮಾಡಿದ್ದ ಇಸ್ರೇಲ್, ಮೊನ್ನೆ ಕ್ಷಿಪಣಿ ದಾಳಿ ಮಾಡಿತ್ತು. ಈ ದಾಳಿಯಲ್ಲಿ 78 ನಾಗರಿಕರು ಸೇರಿದಂತೆ, ಮೂವರು ಸೇನಾಧಿಕಾರಿಗಳು, ಆರು ವಿಜ್ಞಾನಿಗಳು ಮೃತಪಟ್ಟಿದ್ದರು. ಇದಾದ ನಂತರ ಪ್ರತೀಕಾರದ ತೀರಿಸಿಕೊಳ್ಳೋದಾಗಿ ಕೆಂಪು ಬಾವುಟ ಹಾಕಿಸಿದ್ದ ಇರಾನ್ ಕೂಡ ಇಸ್ರೇಲ್ ಮೇಲೆ ದಾಳಿ ಮಾಡಿತ್ತು.

ಇಸ್ರೇಲ್‌ನ ವಾಯುನೆಲೆ ಟಾರ್ಗೆಟ್ ಮಾಡಿ ಇರಾನ್ ದಾಳಿ

ಇನ್ನು ಇಸ್ರೇಲ್ ಮೇಲಿನ ದಾಳಿಗೆ ಸಬ್​​ಮರೀನ್ ಬಳಸಿದ ಇರಾನ್, 100ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಮಿಸೈಲ್​ಗಳಿಂದ ಗುರಿ ಇಟ್ಟು ಹೊಡೆದಿದೆ. ಇದೇ ಮೊದಲ ಬಾರಿಗೆ ಇರಾನ್ ಸಬ್​ಮರೀನ್ ಬಳಸಿ ಅಟ್ಯಾಕ್ ಮಾಡಿದೆ. ಇರಾನ್ ಕೊಟ್ಟ ಎದುರೇಟಿಗೆ ಇಸ್ರೇಲ್ ಬೆಚ್ಚಿಬಿದ್ದಿದೆ. ಇಸ್ರೇಲ್‌ ರಾಜಧಾನಿ ಟೆಲ್ ಅವೀವ್ ಹಾಗೂ ಜೆರುಸಲೆಮ್ ಸಂಪೂರ್ಣ ಜರ್ಜರಿತವಾಗಿದೆ. ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್ ವಾಯು ನೆಲೆಗಳು ಧೂಳೀಪಟ ಆಗಿದ್ದರೆ, ಬೃಹತ್ ಕಟ್ಟಡಗಳು ಛಿದ್ರ ಛಿದ್ರವಾಗಿವೆ. ಹಲವು ನಾಗರಿಕರು ಸಾವಿಗೀಡಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.