ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಅಕ್ರಮ ಆರೋಪ; ಶ್ರೀ ಚೈತನ್ಯ ಶಾಲೆ ಬಳಿ ಪೋಷಕರ ಪ್ರತಿಭಟನೆ‌

| Updated By: ಸಾಧು ಶ್ರೀನಾಥ್​

Updated on: Aug 05, 2021 | 10:01 AM

ಸಿಬಿಎಸ್​ಸಿ 10 ನೇ ತರಗತಿ ಫಲಿತಾಂಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಪ್ರಾಥಮಿಕ ಹಾಗೂ ಮಧ್ಯಂತರ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಿದೆ. ಅದ್ರೆ ಕಡಿಮೆ ಅಂಕ ಪಡೆದಿದ್ದವರಿಗೆ ಫೈನಲ್​​​ನಲ್ಲಿ ಹೆಚ್ಚು ಅಂಕ ನೀಡಿದ ಆರೋಪ ಕೇಳಿಬಂದಿದೆ.

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಅಕ್ರಮ ಆರೋಪ; ಶ್ರೀ ಚೈತನ್ಯ ಶಾಲೆ ಬಳಿ ಪೋಷಕರ ಪ್ರತಿಭಟನೆ‌
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಅಕ್ರಮ ಆರೋಪ; ಶ್ರೀ ಚೈತನ್ಯ ಶಾಲೆ ಬಳಿ ಪೋಷಕರ ಪ್ರತಿಭಟನೆ‌
Follow us on

ರಾಯಚೂರು: ನಿನ್ನೆ ಪ್ರಕಟವಾದ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಯಚೂರಿನ ಶ್ರೀ ಚೈತನ್ಯ ಶಾಲೆ ಬಳಿ ಪೋಷಕರು ಪ್ರತಿಭಟನೆ‌ಯಲ್ಲಿ ತೊಡಗಿದ್ದಾರೆ. 

ವಿದ್ಯಾರ್ಥಿಗಳಿಗೆ ಮನಸೋಇಚ್ಛೆ ಅಂಕ ನೀಡಿರುವ ಆರೋಪ ಎದುರಾಗಿದ್ದು, ಶ್ರೀ ಚೈತನ್ಯ ಶಾಲೆಯು ಸಿಬಿಎಸ್‌ಇ ಬೋರ್ಡ್‌ಗೆ ತಪ್ಪು ಮಾಹಿತಿ ರವಾನೆ ಮಾಡಿದೆ ಎಂದು ಶ್ರೀ ಚೈತನ್ಯ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಕೇಳಿ ಬಂದಿದೆ. ಇದರಿಂದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಬಿಎಸ್​ಸಿ 10 ನೇ ತರಗತಿ ಫಲಿತಾಂಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಪ್ರಾಥಮಿಕ ಹಾಗೂ ಮಧ್ಯಂತರ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಿದೆ. ಅದ್ರೆ ಕಡಿಮೆ ಅಂಕ ಪಡೆದಿದ್ದವರಿಗೆ ಫೈನಲ್​​​ನಲ್ಲಿ ಹೆಚ್ಚು ಅಂಕ ನೀಡಿದ ಆರೋಪ ಕೇಳಿಬಂದಿದೆ. ಹೆಚ್ಚು ಅಂಕ ಪಡೆದಿದ್ದ ಟಾಪರ್ಸ್​​ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಲಾಗಿದೆ ಎಂಬ ಆರೋಪ ಎದುರಾಗಿದೆ. ಹೀಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು ಅದನ್ನು ಸರಿಪಡಿಸುವಂತೆ ಶಾಲೆಗೆ ನುಗ್ಗಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಇನ್ನು, ಶಾಲಾ ಮುಖ್ಯೋಪಾಧ್ಯಾಯರು ಪೋಷಕರ ಆಕ್ಷೇಪಕ್ಕೆ ಉತ್ತರಿಸದೇ  ಪಲಾಯನವಾದ‌ ಮಾಡಿದ್ದಾರೆ. ಇದರಿಂದ ಅನ್ಯಾಯ ಸರಿಪಡಿಸುವಂತೆ ಪೋಷಕರು ನಗರದದಲ್ಲಿರುವ ಶ್ರೀಚೈತನ್ಯ ಶಾಲೆ ಬಳಿ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

(irregularities in CBSE 10 results parents protest at sri chaitanya school in raichur)