ಅವಿವಾಹಿತೆಗೆ ಅವಧಿಗೂ ಮುನ್ನವೇ ಮಗು ಜನನ; ಶಿಶುವನ್ನ ಬಾತ್ ರೂಂ ಕಿಟಕಿಯಿಂದ ಎಸೆದು ಪರಾರಿಗೆ ಯತ್ನ
ಯುವತಿ ಹೇಳಿಕೆ ಅಧಾರದ ಮೇಲೆ ಆಕೆಯ ಪ್ರೇಮಿ ಗುಡೇಮಾರನಹಳ್ಳಿಯ ಶಶಾಂಕ್(25) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೆಲಮಂಗಲ: ಖಾಸಗಿ ಕ್ಲಿನಿಕ್ಗೆ ಚಿಕಿತ್ಸೆಗೆ ಬಂದಿದ್ದ ಅವಿವಾಹಿತೆಗೆ ಅವಧಿಗೂ ಮುನ್ನವೇ ಮಗು ಜನನವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನನವಾಗಿದ್ದು, ಶಿಶುವನ್ನು ಬಾತ್ ರೂಂ ಕಿಟಕಿಯಿಂದ ಎಸೆದು ಪರಾರಿಯಾಗಲು ಯತ್ನಿಸಿದ್ದಾರೆ. ಘಟನೆ ಸಂಬಂಧ ಕ್ಲಿನಿಕ್ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ 22 ವಯಸ್ಸಿನ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಯುವತಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಹೇಳಿಕೆ ಅಧಾರದ ಮೇಲೆ ಆಕೆಯ ಪ್ರೇಮಿ ಗುಡೇಮಾರನಹಳ್ಳಿಯ ಶಶಾಂಕ್(25) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವ್ಯಕ್ತಿಯ ಬರ್ಬರ ಕೊಲೆ ಹಗ್ಗದಿಂದ ಕುತ್ತಿಗೆ ಬಿಗಿದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕೃಷಿನಗರ ಗ್ರಾಮದಲ್ಲಿ ನಡೆದಿದೆ. ಉಮೇಶ ನಂದೆಣ್ಣವರ(32) ಕೊಲೆಯಾದ ವ್ಯಕ್ತಿ. ಹತ್ಯೆ ನಂತರ ದುಷ್ಕರ್ಮಿಗಳು ಮೃತದೇಹವನ್ನ ರೈತರೊಬ್ಬರ ಜಮೀನು ಪಕ್ಕದಲ್ಲಿರುವ ಕಾಲುವೆಯಲ್ಲಿ ಎಸೆದು ಹೋಗಿದ್ದಾರೆ. ಹತ್ಯೆಯಾಗಿರುವ ಉಮೇಶ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಹತ್ಯೆಗೆ ಇನ್ನು ಕಾರಣ ತಿಳಿದು ಬಂದಿಲ್ಲ. ಸದ್ಯ ಈ ಪ್ರಕರಣ ತಡಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ
ವದುವೆಯಲ್ಲಿ ವರನ ಸಕತ್ ಡಾನ್ಸ್! ನಾಚಿ ನೀರಾದ ವಧುವಿನ ವಿಡಿಯೋ ವೈರಲ್
(baby is born even before delivery time in Bengaluru and Unmarried woman tried to throw the baby away)
Published On - 11:56 am, Thu, 5 August 21